
ಕಾಂತಾರ ದೈವವನ್ನು 'ದೆವ್ವ' ಎಂದು ಅವಹೇಳನ ಮಾಡಿರೋ ರಣವೀರ್ ಸಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ!
ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ 'ಕಾಂತಾರ 1' ಚಿತ್ರದ ದೈವವನ್ನು 'ಸ್ತ್ರೀ ದೆವ್ವ' ಎಂದು ಕರೆದು (Female Ghost) ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಅಪಹಾಸ್ಯ ಮಾಡಿ ಭಾರೀ ಯಡವಟ್ಟು ಮಾಡಿಕೊಂಡಿದ್ದು ಸಾಕಷ್ಟು ಸುದ್ದಿ ಆಗಿತ್ತು. ಗೋವಾದಲ್ಲಿ ನಡೆದ IFFI 2025ರ ಸಮಾರೋಪ ಸಮಾರಂಭದಲ್ಲಿ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಿದ್ದರು. ಆ ವೇಳೆ, ರಿಷಬ್ ಎದುರಿನಲ್ಲೇ ಕಾಂತಾರ ಸೀಕ್ವೆಲ್ ಬಗ್ಗೆ, ರಿಷಬ್ ಶೆಟ್ಟಿಯವರ ನಟನೆಯನ್ನು ಹೊಗಳಿ ಮಾತನ್ನಾಡಿದ್ದಾರೆ. ಇದೇ ವೇಳೆ ರಿಷಬ್ ನಟನೆ ಹೊಗಳುತ್ತ ಅನುಕರಣೆ ಮಾಡುತ್ತ ಅದರಲ್ಲಿ ಇರುವ 'ದೈವ'ವನ್ನು 'ಫೀಮೇಲ್ ಘೋಸ್ಟ್' ಎಂದು ಹೇಳಿದ್ದರು. ಅದು ದೈವಕ್ಕೆ ಮಾಡಿದ ಅಪಮಾನ ಎಂದು ಭಾರೀ ವಿವಾದ ಆಗಿತ್ತು.
ರಣವೀರ್ ಸಿಂಗ್ ಅವರು 'ದೈವ'ವನ್ನು 'ದೆವ್ವ' ಎಂದಿದ್ದಲ್ಲದೇ ರಿಷಬ್ ಎದುರಿನಲ್ಲೇ ಅವರನ್ನು ಅನುಕರಣೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿ, ನಟ ರಣವೀರ್ ಸಿಂಗ್ ಬಗ್ಗೆ ಹಲವು ಜನರು ತೀರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಅದೀಗ ವಿವಾದವಾಗುವತ್ತ ಸಾಗಿದೆ.
ಅಮೇಜಾನ್ ಫ್ರೈಮ್ ವಿಡಿಯೋ ಕೌಂಟರ್
ಇದೀಗ, ಅಮೇಜಾನ್ ಫ್ರೈಮ್ ವಿಡಿಯೋ ರಣವೀರ್ ಸಿಂಗ್ ಅವರ ನಡೆಗೆ ಕೌಂಟರ್ ಎನ್ನುವಂತೆ, ತನ್ನ ಅಧಿಕೃತ ಅಕೌಂಟ್‌ನಿಂದ ಪೋಸ್ಟ್ ಒಂದನ್ನು ಮಾಡಿ, ಅದರಲ್ಲಿ ರಿಷಬ್ ಶೆಟ್ಟಿ ನಟನೆಯ ಅದೇ ವಿಡಿಯೋವನ್ನು ಹಾಕಿದೆ. ಜೊತೆಗೆ, ಡಿಯರ್ ರಣವೀರ್, ನಿಮಗೆ ದೈವ (ದೇವರು) ಹಾಗೂ ದೆವ್ವ ಈ ಎರಡರ ಮಧ್ಯೆ ವ್ಯತ್ಯಾಸ ಗೊತ್ತಿಲ್ಲ. ಚಾವುಂಡಿ ಎನ್ನುವುದು ದೈವವೇ (God) ಹೊರತೂ ದೆವ್ವ (Ghost) ಅಲ್ಲ ಎಂದು ವಿಡಿಯೋ ಪೋಸ್ಟ್‌ಗೆ ಕ್ಯಾಪ್ಶನ್ ಹಾಕಿದ್ದಾರೆ.
(Dear @RanveerOfficial you don't know the difference between God and Ghost ....🤦🤦🤦 Chavundi is Goddess not ghost ..🙏 And you literally mocking on big stage..🤦)
ರಣವೀರ್ ಸಿಂಗ್ ನಡೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ತೀವ್ರ ಚರ್ಚೆ ಆರಂಭವಾಗಿದೆ. ‘ದಕ್ಷಿಣ ಭಾರತದ ದೇವರು, ದೈವಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದೇ ಸಾರ್ವಜನಿಕ ವೇದಿಕೆಗಳಲ್ಲಿ ಹೀಗೆ ಮನಸ್ಸಿಗೆ ಬಂದಂತೆ ಮಾತನ್ನಾಡುವುದು ತಪ್ಪು. ಚಾಮುಂಡಿ ದೈವವನ್ನು ’ಫೀಮೇಲ್ ಘೋಸ್ಟ್' ಎಂದರೆ ಏನರ್ಥ? ನಟರುಗಳು, ಅಥವಾ ಯಾವುದೇ ಸೆಲೆಬ್ರಟಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತನ್ನಾಡುವ ಮೊದಲು ಆ ಬಗ್ಗೆ ಅಗತ್ಯವಿರುವ ಮಾಹಿತಿ ಹೊಂದಿರಬೇಕು' ಹಲವರು ಕಾಮೆಂಟ್ ಮಾಡಿದ್ದಾರೆ.
ಗೋವಾದ ಈವೆಂಟ್‌ನಲ್ಲಿ ನಟ ರಣವೀರ್ ಅವರು ರಿಷಬ್ ಶೆಟ್ಟಿ ಹಾಗು ಕಾಂತಾರವನ್ನು ಸಾಕಷ್ಟು ಹೊಗಳಿದ್ದಾರೆ. ಅಲ್ಲಿ ಅವರು ಕಾಂತಾರದಲ್ಲಿ ರಿಷಬ್ ನಟನೆ ಹೊಗಳುತ್ತ ಅದನ್ನು ಅನುಕರಣೆ ಮಾಡುತ್ತ ಚಾಮುಂಡಿ ದೈವಕ್ಕೆ ಸ್ತ್ರೀ ದೆವ್ವ ಎಂದು ಹೇಳಿರೋದು ಈಗ ವಿವಾದಕ್ಕೆ ಗುರಿಯಾಗಿದೆ. ‘ಹೊಗಳೊ ಹೊಗಳಿ ಹೊನ್ನ ಶೂಲಕ್ಕೆ ಏರಿದರಯ್ಯಾ’ ಎಂಬಂತೆ, ಕಾಂತಾರ ಹಾಗು ರಿಷಬ್ ಅವರನ್ನು ಹೊಗಳುವ ಭರದಲ್ಲಿ ನಟ ರಣವೀರ್ ಸಿಂಗ್ ಸರಿಯಾದ ಮಾಹಿತಿ ಪಡೆದುಕೊಳ್ಳದೇ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದೀಗ, ಬಾಲಿವುಡ್ ನಟ ರಣವೀರ್ ಸಿಂಗ್ ಅಜ್ಞಾನದಿಂದ ಮಾಡಿಕೊಂಡಿರೋ ಯಡವಟ್ಟಿಗೆ ಅಮೇಜಾನ್ ಫ್ರೈಂ ವಿಡಿಯೋ ಕಂಪನಿ ಕೌಂಟರ್ ಕೊಡುವ ಮೂಲಕ ಭಾರೀ ಗಮನಸೆಳೆದಿದೆ. ಈಗ ಈ ವಿವಾದ ಇನ್ನೂ ಹೆಚ್ಚು ವೈರಲ್ ಆಗುವ ಸಾಧ್ಯತೆ ದಟ್ಟವಾಗಿದೆ. 'ಎನೋ ಮಾಡಲು ಹೋಗಿ.. ಏನು ಮಾಡಿದೆ ನೀನು..' ಎನ್ನೋ ಹಾಡು ಇದೀಗ ನೆನಪಾಗುವಂತಾಗಿದೆ. ಈ ವಿವಾದ ಮುಂದೆ ಯಾವ ದಾರಿ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.