ಅಮೆಜಾನ್ ಪ್ರೈಮ್ ವಿಡಿಯೋ (Amazon Prime Videos) ಜುಲೈ 23 ಮತ್ತು 24 ರಂದು ಪ್ರೈಮ್ ಡೇ (Amazon Prime Day) ಆಫರ್ ನೀಡಿದೆ. ಪ್ರೈಮ್ ಸದಸ್ಯರಿಗೆ ಕೆಲವು ಹೊಸ ರಿಲೀಸ್‌ಗಳು ಮತ್ತು ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಪಾಲುದಾರರಿಂದ ಆಕರ್ಷಕ ಕೊಡುಗೆಗಳು ಲಭ್ಯವಿವೆ.
ಅಮೆಜಾನ್ ಪ್ರೈಮ್ ವಿಡಿಯೋ (Amazon Prime Videos) ಜುಲೈ 23 ಮತ್ತು 24 ರಂದು ಪ್ರೈಮ್ ಡೇ (Amazon Prime Day) ಆಫರ್ ನೀಡಿದೆ. ಪ್ರೈಮ್ ಸದಸ್ಯರಿಗೆ ಕೆಲವು ಹೊಸ ರಿಲೀಸ್‌ಗಳು ಮತ್ತು ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಪಾಲುದಾರರಿಂದ ಆಕರ್ಷಕ ಕೊಡುಗೆಗಳು ಲಭ್ಯವಿವೆ.
ಪ್ರೈಮ್ ಸದಸ್ಯರಿಗೆ ಪ್ರೈಮ್ ವೀಡಿಯೋ ಮನರಂಜನೆಯ ಗುಚ್ಛವನ್ನೇ ಘೋಷಿಸಿದೆ. ಅತ್ಯಂತ ನಿರೀಕ್ಷಿತ ಅಮೆಜಾನ್ ಒರಿಜಿನಲ್ ಸಿರೀಸ್‌ಗಳು ಮತ್ತು ಜನಪ್ರಿಯ ಸಿನಿಮಾಗಳು ವಿವಿಧ ಭಾಷೆಗಳಲ್ಲಿ ಪ್ರೈಮ್ ಡೇಯಲ್ಲಿ ಲಭ್ಯವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಸಿನಿಮಾ ರನ್‌ವೇ 34 (ಹಿಂದಿ), ಸರ್ಕಾರು ವಾರಿ ಪಾಟ (ತೆಲುಗು, ತಮಿಳು, ಮಲಯಾಳಂ), ಮತ್ತು ಸಾಮ್ರಾಟ್ ಪ್ರಥ್ವಿರಾಜ್ (ಹಿಂದಿ, ತಮಿಳು, ತೆಲುಗು) ಜೊತೆಗೆ, ಕ್ರಿಸ್ ಪ್ಯಾಟ್ ನಟನೆಯ ಆಕ್ಷನ್ ಥ್ರಿಲ್ಲರ್ ಅಮೆಜಾನ್ ಒರಿಜಿನಲ್ ದಿ ಟರ್ಮಿನಲ್ ಲಿಸ್ಟ್ (ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ), ಹೊಸ ಸಿರೀಸ್ ಕಾಮಿಕ್‌ಸ್ತಾನ್ (ಹಿಂದಿ), ಹಾಗೂ ಮಾಡರ್ನ್ ಲವ್ ಹೈದರಾಬಾದ್ (ತೆಲುಗು) ಜಾಗತಿಕ ಸರಣಿಯ ಭಾರತೀಯ ಅಡಾಪ್ಟೇಶನ್ ಕೂಡ ಲಭ್ಯವಿದೆ. ಪ್ರೈಮ್ ಡೇ 2022ಕ್ಕೆ ಸಮೀಪದಲ್ಲಿ ಇನ್ನೂ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಪ್ರೈಮ್ ಸದಸ್ಯರಿಗೆ ಘೋಷಿಸಲಾಗುತ್ತದೆ.
undefined
ವಿಶೇಷ ಪ್ರೈಮ್ ಡೇ ಕೊಡುಗೆಯಾಗಿ, ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಆಡ್ ಆನ್ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ವರೆಗೆ ರಿಯಾಯಿತಿಯನ್ನು ಪಾಲುದಾರರು ಪಡೆಯಲಿದ್ದಾರೆ. ಪ್ರೈಮ್ ವೀಡಿಯೋದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಸರ್ಕಾರು ವಾರಿ ಪಾಟ (ತಮಿಳು, ತೆಲುಗು, ಮಲಯಾಳಂ), ರನ್‌ವೇ 34 (ಹಿಂದಿ), ಸಾಮ್ರಾಟ್ ಪ್ರಥ್ವಿರಾಜ್ (ಹಿಂದಿ, ತಮಿಳು, ತೆಲುಗು) ರೀತಿಯ ವಿವಿಧ ಭಾಷೆಗಳ ಜನಪ್ರಿಯ ಸಿನಿಮಾದ ಮೂಲಕ ಮೊದಲೇ ಪ್ರೈಮ್ ಡೇ ಸಂಭ್ರಮಾಚರಣೆ ಆರಂಭವಾಗಲಿದೆ.
ಒಟಿಟಿಯಲ್ಲಿ ಬರ್ತಿದೆ ರಕ್ಷಿತ್ ಶೆಟ್ಟಿಯ '777 ಚಾರ್ಲಿ'; ಯಾವಾಗ?
ಇಷ್ಟೇ ಅಲ್ಲ, ಇನ್ನೂ ಎರಡು ಭಾರತೀಯ ಅಮೆಜಾನ್ ಒರಿಜಿನಲ್ ಸಿರೀಸ್ ಕೂಡ ಬಿಡುಗಡೆಯಾಗಲಿದೆ. ಅವುಗಳೆಂದರೆ ಮಾಡರ್ನ್ ಲವ್ ಹೈದರಾಬಾದ್ (ತೆಲುಗು). ಇದು ಜಾಗತಿಕ ಸರಣಿಯ ಎರಡನೇ ಭಾರತೀಯ ಅವತರಣಿಕೆಯಾಗಿದ್ದು, ಇದು ಜುಲೈ 7 ರಂದು ಬಿಡುಗಡೆಯಾಗಲಿದೆ. ಕಾಮಿಕ್‌ಸ್ತಾನ್ ಸೀಸನ್ 3 (ಹಿಂದಿ) ಕೂಡಾ ಜುಲೈ 15 ರಂದು ಬಿಡುಗಡೆಯಾಗಲಿದೆ. ಕ್ರಿಸ್ ಪ್ಯಾಟ್ ನಟನೆಯ ದಿ ಟರ್ಮಿನಲ್ ಲಿಸ್ಟ್ (ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ) ಕೂಡ ಪ್ರೈಮ್ ಡೇ ಸಮೀಪದಲ್ಲಿ ಬಿಡುಗಡೆಯಾಗಲಿದೆ.
'ಬಿಗ್ ಬಾಸ್' ಹೋಸ್ಟ್ ಮಾಡ್ತಾರಾ ರಣ್ವೀರ್ ಸಿಂಗ್? ಹಾಗಾದ್ರೆ ಸಲ್ಮಾನ್ ಕಥೆ ಏನು?
ಪ್ರೈಮ್ ಸದಸ್ಯರಿಗೆ ಅಚ್ಚರಿಯೆಂಬಂತೆ, ಎರಡು ಹೆಚ್ಚುವರಿ ಬಹುನಿರೀಕ್ಷಿತ ಶೀರ್ಷಿಕೆಗಳನ್ನೂ ಪ್ರೈಮ್ ಡೇಗೆ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಇದರ ಜೊತೆಗೆ, ಮೊದಲ ಬಾರಿಗೆ ಪ್ರೈಮ್ ಸದಸ್ಯರಿಗೆ ಪ್ರೈಮ್ ವೀಡಿಯೋ ಚಾನೆಲ್‌ಗಳಲ್ಲಿ ಲಭ್ಯವಿರುವ 12 ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್ ಸೇವೆಗಳಿಂದ ಹೆಚ್ಚುವರಿ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ರಿಯಾಯಿತಿಯನ್ನೂ ಘೋಷಿಸಲಾಗುತ್ತಿದೆ. ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಸಾವಿರಾರು ಹೆಚ್ಚುವರಿ ಶೀರ್ಷಿಕೆಗಳನ್ನು ಪ್ರೈಮ್ ಸದಸ್ಯರು ಪಡೆಯಬಹುದಾಗಿದೆ. ಯಾವುದೇ ಲಾಗಿನ್ ಕಿರಿಕಿರಿ ಇಲ್ದೇ ಅನುಭವಿಸಬಹುದಾಗಿದೆ ಮತ್ತು ಎಲ್ಲ ಪ್ರೈಮ್ ವೀಡಿಯೋ ವೈಶಿಷ್ಟ್ಯಗಳಾದ ಐಎಂಡಿಬಿ ಎಕ್ಸ್‌ರೇ, ಒಂದೇ ವಾಚ್‌ಲಿಸ್ಟ್ ಆನಂದಿಸಬಹುದಾಗಿದೆ ಮತ್ತು ಆಫ್‌ಲೈನ್ ವೀಕ್ಷಣೆಗಾಗಿ ಲೈಬ್ರರಿ ಡೌನ್‌ಲೋಡ್ ಮಾಡಬಹುದಾಗಿದೆ. ಇದರಲ್ಲಿ 12 ಒಟಿಟಿ ಸೇವೆಗಳಿದ್ದು, ಎಎಂಸಿ+, ಏಕಾರ್ನ್ ಟಿವಿ, ಹಾಯು, ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಎರೋಸ್ ನೌ, ಡೊಕುಬೇ, ಮುಬಿ, ಹೋಯ್‌ಚೋಯ್, ಮನೋರಮಾ ಮ್ಯಾಕ್ಸ್, ಶಾರ್ಟ್ಸ್ ಟಿವಿ ಮತ್ತು ನಮ್ಮಫ್ಲಿಕ್ಸ್ ಇರಲಿದೆ.