ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರತಂಡಕ್ಕೆ ಅಲ್ಲು ಅರ್ಜುನ್ ಕರೆ ಮಾಡಿದ್ದೇಕೆ?

Published : Feb 10, 2025, 10:37 PM IST
ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರತಂಡಕ್ಕೆ ಅಲ್ಲು ಅರ್ಜುನ್ ಕರೆ ಮಾಡಿದ್ದೇಕೆ?

ಸಾರಾಂಶ

ರಶ್ಮಿಕಾ ಮಂದಣ್ಣ ವಿಕ್ಕಿ ಕೌಶಾಲ್ ಅಭಿನಯದ ಛಾವಾ ಬಾಲಿವುಡ್ ಚಿತ್ರ ಫೆ.14ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ ಇದೀಗ ಕುತೂಹಲ ಮಾಹಿತಿಯೊಂದು ಹೊರಬಿದ್ದಿದೆ. ಛಾವಾ ಚಿತ್ರ ತಂಡಕ್ಕೆ ಖುದ್ದು ಅಲ್ಲು ಅರ್ಜುನ್ ಕರೆ ಮಾಡಿ ಮಾತನಾಡಿದ್ದಾರೆ. ಕರೆ ಮಾಡಿದ್ದೇಕೆ? ಕರೆಯಲ್ಲಿ ಮಾತನಾಡಿದ್ದೇನು?

ಮುಂಬೈ(ಫೆ.10) ಪುಷ್ಪಾ 2 ಭರ್ಜರಿ ಯಶಸ್ಸು ಕಂಡಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಭಾರತೀಯ ಸಿನಿಮಾದಲ್ಲಿ ಹಲವು ದಾಖಲೆ ಬರೆದಿದೆ.  ಇದೀಗ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಬಾಲಿವುಡ್ ಚಿತ್ರ ಬಿಡುಗಡೆಯಾಗುತ್ತಿದೆ. ಛಾವಾ ಚಿತ್ರದ ಪ್ರಚಾರ ನಡೆಯುತ್ತಿದೆ. ಇದರ ನಡುವೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಿತ್ರ ತಂಡಕ್ಕೆ ಖುದ್ದು ಅಲ್ಲು ಅರ್ಜುನ್ ಕರೆ ಮಾಡಿ ಮಾತನಾಡಿರುವ ಮಾಹಿತಿ ಹೊರಬಿದ್ದಿದೆ. 

ಪುಷ್ಪ 2 ರ ಭರ್ಜರಿ ಗೆಲುವಿನ ಸಂಭ್ರಮ ಇತ್ತೀಚೆಗೆ ನಡೆದಿತ್ತು. ಈ ಸಮಾರಂಭದಲ್ಲಿ ಮಾತನಾಡಿದ ಅಲ್ಲು ಅರ್ಜುನ್ ತಮ್ಮ ಚಿತ್ರದ ಗೆಲುವಿನ ಬಗ್ಗೆ ಮಾತನಾಡಿದರು.  ಇದೇ ವೇಳೆ ಛಾವಾ ಚಿತ್ರ ತಂಡಕ್ಕೆ ಕರೆ ಮಾಡಿ ಮಾತನಾಡಿದ್ದರು. ಈ ವಿಚಾರವನ್ನು ಖುದ್ದು ಅಲ್ಲು ಅರ್ಜುನ್ ಬಹಿರಂಗಪಡಿಸಿದ್ದಾರೆ. ನಾನು ಛಾವ ಚಿತ್ರದ ತಂಡದ ಒಬ್ಬರಿಗೆ ಕರೆ ಮಾಡಿದ್ದೆ. ನಾನು ಬಾಲಿವುಡ್ ಎಂದು ಹೇಳುವುದಿಲ್ಲ. ಹಿಂದಿ ಸಿನಿಮಾದ ಛಾವಾ ತಂಡಕ್ಕೆ ಕರೆ ಮಾಡಿದ್ದೆ. ಇದಕ್ಕೆ ಕಾರಣ ಛಾವ ಚಿತ್ರ ಡಿಸೆಂಬರ್ 6ಕ್ಕೆ ಬಿಡುಗಡೆ ಮಾಡಲು ತಂಡ ಸಜ್ಜಾಗಿತ್ತು. ಹೀಗಾಗಿ ಕರೆ ಮಾಡಿದ್ದೆ. ಪುಷ್ಪಾ 2 ಚಿತ್ರ ಕೂಡ ಡಿಸೆಂಬರ್ 6ಕ್ಕೆ ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದೆ. ತಕ್ಷಣವೇ ಛಾವ ಚಿತ್ರ ತಂಡ ನಾವು ಕೂಡ ಪುಷ್ಪಾ 2 ಚಿತ್ರಕ್ಕೆ ಕಾಯುತ್ತಿದ್ದೇವೆ. ಪುಷ್ಪಾ ಅಭಿಮಾನಿಯಾಗಿದ್ದೇವೆ. ಹೀಗಾಗಿ ಛಾವಾ ಚಿತ್ರ ಬಿಡುಗಡೆಯನ್ನು ಮುಂದೂಡುವುದಾಗಿ ಭರವಸೆ ನೀಡಿದ್ದರು ಎಂದು ಅಲ್ಲು ಅರ್ಜುನ್ ಹೇಳಿದ್ದರೆ.

ಛಾವಾ ಚಿತ್ರದ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಲುಕ್‌ಗೆ ಫ್ಯಾನ್ಸ್ ಫಿದಾ

ಛಾವ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಯಾಗಬೇಕಿತ್ತು. ಆದರೆ ಪುಷ್ಪಾ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಲು ಛಾವ ಚಿತ್ರತಂಡ ಚಿತ್ರ ಬಿಡುಗಡೆಯನ್ನು ಮುಂದೂಡಿತ್ತು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಛಾವಾ ಚಿತ್ರ ತಂಡಕ್ಕೆ ನಾನು ಧನ್ಯವಾದ ಹೇಳಿದ್ದೆ. ಇದೀಗ ಛಾವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಅಲ್ಲು ಹೇಳಿದ್ದು ಛಾವ ಚಿತ್ರದ ಬಗ್ಗೆ. ಡಿಸೆಂಬರ್ 6 ಕ್ಕೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಈಗ ಫೆಬ್ರವರಿ 14 ಕ್ಕೆ ಬಿಡುಗಡೆಯಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜರ ಕಥೆ ಈ ಐತಿಹಾಸಿಕ ಚಿತ್ರದಲ್ಲಿದೆ. ವಿಕಿ ಕೌಶಲ್ ಜೊತೆಗೆ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ ಮುಂತಾದವರು ನಟಿಸಿದ್ದಾರೆ.

ಪುಷ್ಪ 2 ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ. ಭಾರತದಲ್ಲಿ 1232.30 ಕೋಟಿ ಮತ್ತು ಜಾಗತಿಕವಾಗಿ 1738 ಕೋಟಿ ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

ನ್ಯಾಶನಲ್ ಕ್ರಶ್ To ಲವ್, ಬಚ್ಚಿಟ್ಟ ಹೃದಯದ ಸೀಕ್ರೆಟ್ ಮಾತು ತಿಳಿಸಿದ ರಶ್ಮಿಕಾ ಮಂದಣ್ಣ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ