ಟ್ವಿಟರ್‌ನಲ್ಲಿ ರಿಲೀಸ್ ಆಯಿತು ಪುಷ್ಪಾ-2 ತುಣುಕು, ಹೆಚ್ಚಾಯ್ತು ಫ್ಯಾನ್ಸ್ ಕಾತುರ

Published : Apr 05, 2023, 02:37 PM IST
ಟ್ವಿಟರ್‌ನಲ್ಲಿ ರಿಲೀಸ್ ಆಯಿತು ಪುಷ್ಪಾ-2 ತುಣುಕು, ಹೆಚ್ಚಾಯ್ತು ಫ್ಯಾನ್ಸ್ ಕಾತುರ

ಸಾರಾಂಶ

 ಪುಷ್ಪಾ 1 ರಿಲೀಸ್ ಆಗಿ ಯಶಸ್ವಿಯಾದ ನಂತರ, ಪುಷ್ಪ-2 ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವ ಸಿನಿ ಪ್ರೇಮಿಗಳಿಗೆ ಖುಷಿಯಾಗುವಂತೆ ಚಿತ್ರದ ತುಣುಕೊಂದನ್ನು ಚಿತ್ರ ತಂಡ ರಿಲೀಸ್ ಮಾಡಿದೆ.   

- ಆತ್ಮ ವೈ ಆನಂದ್, ವಿದ್ಯಾರ್ಥಿ, ಮಹಾಜನ ಕಾಲೇಜು, ಮೈಸೂರು

ಪುಷ್ಪಾ: ದಿ ರೈಸ್ ಚಿತ್ರದ ಯಶಸ್ಸಿನ ನಂತರ ಅಭಿಮಾನಿಗಳು  'ಪುಷ್ಪರಾಜ್ ಎಲ್ಲಿ?' ಎಂದು ಕಾತರದಿಂದ ಕಾಯುತ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರದ ಎರಡನೇ ಭಾಗ 'ಪುಷ್ಪಾ: ದಿ ರೂಲ್' ನ  ಬಗ್ಗೆ ಪುಷ್ಪ ಚಿತ್ರತಂಡ ಚಿತ್ರದ ತುಣಕೊಂದನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿ, ಅಭಿಮಾನಿಗಳು ಕಾತುರವನ್ನು ತುಸು ತಣ್ಣಗಾಗಿಸಿದ್ದಾರೆ. ಇಂದು ಬೆಳಗ್ಗೆ 11 ಘಂಟೆಗೆ  ಸಣ್ಣದೊಂದು ತುಣುಕನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.

ಡಿಸೆಂಬರ್ 2021 ರಲ್ಲಿ ಬಿಡುಗಡೆಯಾಗಿದ್ದ ಪುಷ್ಪ ಭಾಗ 1  ಇಡೀ ರಾಷ್ಟ್ರಕ್ಕೇ ಮೆಚ್ಚುಗೆಯಾಗಿತ್ತು. ಚಿತ್ರಕಥೆ, ಕಲಾವಿದರೂ, ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದ ರಶ್ಮಿಕಾ ಮಂದಣ್ಣ ಹಾಗೂ ಸಮಂತಾ ಡ್ಯಾನ್ಸೋ ಗೊತ್ತಿಲ್ಲ. ಒಟ್ಟಿನಲ್ಲಿ ಯುವಜನರ ಮನಸ್ಸು ಗೆಲ್ಲುವಲ್ಲಿ ಚಿತ್ರ ಯಶಸ್ವಿಯಾಗಿತ್ತು.  ಪುಷ್ಪರಾಜ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಅಲ್ಲು ಅರ್ಜುನ್ ತುಂಬಾ ಖ್ಯಾತಿ ಸಹ ಪಡೆದಿದ್ದಾರೆ. ಫ್ಯಾಷನ್ ಐಕಾನ್ ಕಾಡುಗಳ್ಳನಾಗಿ ನಟಿಸಿದ್ದು ಸಿನಿ ಪ್ರೇಮಿಗಳಿಗೆ ಥ್ರಿಲ್ ಆಗುವಂತೆ ಮಾಡಿತ್ತು. ಚಿತ್ರದ ಹಾಡು, ವಿಷುಯಲ್ಸ್ ಮತ್ತು ಡೈಲಾಗ್‌ಗಳಿಂದ ಇಡೀ ದೇಶವನ್ನೇ ತನ್ನತ್ತ ಸೆಳೆದುಕೊಳ್ಳುವಲ್ಲಿ ಚಿತ್ರ ಯಾಶಸ್ವಿಯಾಯಿತು. ಇದು 2021ರ ಬ್ಲಾಕ್‌ಬಸ್ಟರ್ ಚಲನಚಿತ್ರವಾಗಿಯೂ ಹೊರಹೊಮ್ಮಿತು.

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ: 'ಪುಷ್ಪ-2' ಶೂಟಿಂಗ್‌ ಮತ್ತೆ ಸ್ಥಗಿತ, ಕಾರಣವೇನು?

ಪುಷ್ಪ 2 ತೆಲುಗಿನ ಅತ್ಯಂತ ನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದು. ಅದರ ಮೊದಲ ಭಾಗವಾದ ‘ಪುಷ್ಪ: ದಿ ರೂಲ್’ ಭಾರೀ ಯಶಸ್ಸು ಕಂಡಿರುವುದೇ ಇದಕ್ಕೆ ಕಾರಣ. ನಿರ್ದೇಶಕ ಸುಕುಮಾರ್ ಮತ್ತು ನಾಯಕ ನಟ ಅಲ್ಲು ಅರ್ಜುನ್ ತಮ್ಮ  ಪ್ರತಿಭೆಯಿಂದ ಬ್ಲಾಕ್ಬಸ್ಟರ್ ಚಿತ್ರವನ್ನು ತೆರೆಗೆ ತಂದು ಯಶಸ್ವಿಯಾಗಿದ್ದು, ವೀಕ್ಷಕರಿಂದ ಚಪ್ಪಾಳೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಪುಷ್ಪಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ದೇಶದ ಉತ್ತರ ಭಾರತ ಸೇರಿ, ಕೆಲವು ಹೊರ ದೇಶಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಯಿತು. 

ಈ ಕಾನ್ಸೆಪ್ಟ್ ಟೀಸರ್ ವಿಡಿಯೋದಲ್ಲಿ ಪುಷ್ಪ ಭಾಗ ಒಂದಕ್ಕೆ ತೆರೆ ಎಳೆದಿದ್ದು. ತಿರುಪತಿಯ ಜೈಲಿನಿಂದ ಪುಷ್ಪಾ ಪರಾರಿಯಾದ ಸುದ್ದಿಯೊಂದಿಗೆ ಪ್ರಾರಂಭವಾಗುತ್ತದೆ. ಬಂಧನದ ನಂತರ ನಡೆದ ಗಲಭೆಗಳನ್ನು ತೋರಿಸಿ, 'ಪುಷ್ಪಾ ಎಲ್ಲಿದ್ದಾರೆ? ಎಂದು ಪ್ರೇಕ್ಷಕರ ಮನಸ್ಸಿನಲ್ಲಿ ಕಾತುರ ಹುಟ್ಟುವಂತೆ ಮಾಡಿದ್ದಾರೆ. ಪುಷ್ಪ ಚಿತ್ರದ ಎರಡನೇ ಭಾಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇದೇ ಏಪ್ರಿಲ್ ತಿಂಗಳ 7 ಸಂಜೆ 04:05ಕ್ಕೆ  ಕಾನ್ಸೆಪ್ಟ್ ಟೀಸರ್ ಮೊಲಕ ತಿಳಿಸಲಿದ್ದಾರೆ . ಪುಷ್ಪ 2 ಕಾನ್ಸೆಪ್ಟ್ ಟೀಸರ್‌ಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿರುವುದು ಸ್ಪಷ್ಟ. ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ. ಫಹದ್ ಫಾಸಿಲ್, ಅನಸೂಯಾ ಹಾಗೂ ಸುನೀಲ್ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  Mythri Movie Makers ಈ ಚಿತ್ರವನ್ನು ನಿರ್ಮಿಸುತ್ತಿದ್ದು, ದೇವಿಶ್ರಿ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.

ಅಲ್ಲು ಅರ್ಜುನ್ 'ಪುಷ್ಪ-2' ಹೇರ್ ಸ್ಟೈಲ್ ವೈರಲ್; 'ತಗ್ಗೋದೇ ಇಲ್ಲ' ಎಂದ ಫ್ಯಾನ್ಸ್

ಪುಷ್ಪ 2 ಚಿತ್ರ ಭಾಗ 1ಕ್ಕಿಂತ ಹೆಚ್ಚಿನ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಮೊದಲ ಭಾಗ ಬಾಕ್ಸ್ ಆಫೀಸ್‌ ಅನ್ನು ಕೂಳ್ಳೆ ಹೊಡದಿದ್ದು. ಆದ್ದರಿಂದ ಪುಷ್ಪ ಚಿತ್ರತಂಡ  ಈ ಬಾರಿ ಮುಂದಿನ ಭಾಗಕ್ಕಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿದೆ. ಪುಷ್ಪ 2 ಚಿತ್ರದ  ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್  ಸುಮಾರು 200 ಕೋಟಿಗಳನ್ನು ನೀಡಿ ಖರೀದಿಸಿದೆ ಎಂದು ಈಗಾಗಲೇ ಕೆಲವು ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ಸಿನಿ ಪ್ರೇಮಿಗಳು ಅಲ್ಲು ಹಾಗೂ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಪುಷ್ಪಾ-2 ರಿಲೀಸ್‌ಗಾಗಿ ಕಾಯುತ್ತಿದ್ದು, ಹೇಗಿರುತ್ತೆ ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?