ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್, ‘ಪುಷ್ಪ’ ತಂಡದಿಂದ 2 ಕೋಟಿ ರು.

By Govindaraj S  |  First Published Dec 26, 2024, 4:28 AM IST

ಡಿ.4 ರಂದು ಇಲ್ಲಿನ ಸಂಧ್ಯಾ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಮತ್ತು ‘ಪುಷ್ಪಾ’ ಚಿತ್ರದ ನಿರ್ಮಾಪಕರು ಬುಧವಾರ 2 ಕೋಟಿ ರು. ಆರ್ಥಿಕ ನೆರವು ಘೋಷಿಸಿದ್ದಾರೆ. 


ಹೈದರಾಬಾದ್‌ (ಡಿ.26): ಡಿ.4 ರಂದು ಇಲ್ಲಿನ ಸಂಧ್ಯಾ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಮತ್ತು ‘ಪುಷ್ಪಾ’ ಚಿತ್ರದ ನಿರ್ಮಾಪಕರು ಬುಧವಾರ 2 ಕೋಟಿ ರು. ಆರ್ಥಿಕ ನೆರವು ಘೋಷಿಸಿದ್ದಾರೆ. ಅಲ್ಲು ಅರ್ಜುನ್ (1 ಕೋಟಿ), ಪುಷ್ಪಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ (50 ಲಕ್ಷ) ಮತ್ತು ಚಿತ್ರದ ನಿರ್ದೇಶಕ ಸುಕುಮಾರ್ (50 ಲಕ್ಷ) ಬಾಲಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದು ಅರ್ಜುನ್‌ ಅವರ ತಂದೆ ಅಲ್ಲು ಅರವಿಂದ್‌ ಘೋಷಿಸಿದ್ದಾರೆ. ಡಿ.4 ರಂದು ‘ಪುಷ್ಪ 2’ ಚಿತ್ರ ಪ್ರದರ್ಶನ ವೇಳೆ 35 ವರ್ಷದ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು ಮತ್ತು ಅವರ 8 ವರ್ಷದ ಮಗ ತೀವ್ರ ಗಾಯಗೊಂಡಿದ್ದರು. ಈ ಘಟನೆಗೆ ಅಲ್ಲು ಅರ್ಜುನ್‌ ನಿರ್ಲಕ್ಷ್ಯ ಕಾರಣ ಎಂದು ಅವರನ್ನು ಬಂಧಿಸಲಾಗಿತ್ತು.

ಇಂದು ಸಿಎಂ-ತೆಲುಗು ಚಿತ್ರರಂಗ ಸಭೆ: ಅಲ್ಲು ಪ್ರಕರಣದ ನಂತರ ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗೂ ಚಿತ್ರರಂಗದ ನಡುವೆ ಸಂಘರ್ಷ ಏರ್ಪಟ್ಟಿದೆ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ಮತ್ತು ಪ್ರಮುಖ ನಿರ್ಮಾಪಕ ದಿಲ್ ರಾಜು ಅವರು, ‘ಸರ್ಕಾರ ಮತ್ತು ಚಲನಚಿತ್ರೋದ್ಯಮದ ನಡುವೆ ಆರೋಗ್ಯಕರ ಸಂಬಂಧ ಅಗತ್ಯ ಇದೆ’ ಎಂದು ಹೇಳಿದ್ದು, ಚಿತ್ರರಂಗದ ನಿಯೋಗ ಗುರುವಾರ ಸಿಎಂ ರೆಡ್ಡಿ ಅವರನ್ನು ಭೇಟಿ ಮಾಡಲಿದೆ ಎಂದಿದ್ದಾರೆ.

Tap to resize

Latest Videos

undefined

ಕೈ ನಾಯಕ ದೂರು: ಪುಷ್ಪ-2 ಚಿತ್ರ ಬಿಡುಗಡೆ ಬಳಿಕ ಹಲವು ಸಂಕಷ್ಟಕ್ಕೆ ಸಿಲುಕಿರುವ ನಟ ಅಲ್ಲು ಅರ್ಜುನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿ ಪೊಲೀಸರಿಗೆ ಅರ್ಜುನ್‌ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೂರಿರುವ ಕಾಂಗ್ರೆಸ್‌ ನಾಯಕ ತಿನ್ಮಾರ್‌ ಮಲ್ಲನ್ನ, ಚಿತ್ರದ ಸೀನ್‌ವೊಂದರಲ್ಲಿ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಪೊಲೀಸರು ಈಜಾಡುತ್ತಿರುತ್ತಾರೆ. ಈ ವೇಳೆ ಅಲ್ಲು ಅರ್ಜುನ್ ಅದರಲ್ಲಿ ಮೂತ್ರ ಮಾಡುತ್ತಾರೆ. ಇದು ಪೊಲೀಸರಿಗೆ ಅವರ ಹುದ್ದೆಗೆ ಮಾಡಿದ ಅವಮಾನವಾಗಿದೆ ಎಂದು ಪೊಲೀಸರಿಗೆ’ ತಮ್ಮ ದೂರು ನೀಡಿದ್ದಾರೆ.

ದಳಪತಿ ವಿಜಯ್‌ರನ್ನು ಭೇಟಿ ಮಾಡಲು ರಜನಿಕಾಂತ್ ಓಡಿ ಬಂದ್ರು: ಆದರೆ.. ವಿಜಯ್ ಹೀಗಾ ಮಾಡೋದು?

ಪೊಲೀಸ್‌ ಆಕ್ರೋಶ: ಪುಷ್ಪ-2 ಸಿನಿಮಾದ ಪ್ರೀಮಿಯರ್‌ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಬಗ್ಗೆ ನಟ ಅಲ್ಲು ಅರ್ಜುನ್‌ಗೆ ಮಾಹಿತಿ ನೀಡಿದರೂ ಅವರು ಥಿಯೇಟರ್‌ನಿಂದ ಹೊರಡಲಿಲ್ಲ ಎಂದು ಹೈದರಾಬಾದ್‌ ಪೊಲೀಸರು ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್‌ ಅಧಿಕಾರಿಗಳು, ‘ಥಿಯೇಟರ್‌ನಲ್ಲಿ ಕಾಲ್ತುಳಿತ ಉಂಟಾದ ಬಗ್ಗೆ ಅಲ್ಲೂ ಅವರ ವ್ಯವಸ್ಥಾಪಕರಿಗೆ ತಿಳಿಸಿದೆವು. ಇದನ್ನವರು ನಟನಿಗೆ ತಿಳಿಸುವುದಾಗಿ ಹೇಳಿದರೂ ಅಂತೆ ಮಾಡಲಿಲ್ಲ. ಕೊನೆಗೆ ನಾವೇ ಅವರ ಬಳಿ ಹೋಗಿ, ನಿಮ್ಮನ್ನು ನೋಡುವ ಭರದಲ್ಲಿ ಅಭಿಮಾನಿಗಳಿಗೆ ಮತ್ತಷ್ಟು ತೊಂದರೆಯಾಗುವುದನ್ನು ತಡೆಯಲು ಕೂಡಲೇ ಥಿಯೇಟರ್‌ನಿಂದ ಹೊರಡುವಂತೆ ಕೋರಿದೆವು. ಅದಕ್ಕೊಪ್ಪದ ಅಲ್ಲು, ಪೂರ್ತಿ ಸಿನಿಮಾ ನೋಡಿಯೇ ತೆರಳುವುದಾಗಿ ತಿಳಿಸಿದರು. ಕೊನೆಗೆ ಹಿರಿಯ ಅಧಿಕಾರಿಗಳು ಅವರನ್ನು ಹೊರಗೆ ಕರೆತಂದರು’ ಎಂದರು.

click me!