ಅಲ್ಲು ಅರ್ಜುನ್ ಅಭಿನಯದ ಪುಷ್ಪಾ, ಪ್ರಭಾಸ್ ಬಾಹುಬಲಿ ಹಾಗೂ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಿತ್ರದ ಐಕಾನಿಕ್ ಸೀನ್‌ಗಳನ್ನು ಜನಪ್ರಿಯ ಟಾಮ್ ಆ್ಯಂಡ್ ಜೆರಿ ಕಾರ್ಟೂನ್ ಶೋನಿಂದ ಕಾಪಿ ಮಾಡಲಾಗಿದೆಯಾ? ಹೌದು ಎನ್ನುತ್ತಿದೆ ಕೆಲ ವಿಡಿಯೋ.
ಬೆಂಗಳೂರು(ಡಿ.29) ಪುಷ್ಪಾ, ಬಾಹುಬಲಿ ಹಾಗೂ ಆರ್‌ಆರ್‌ಆರ್ ಚಿತ್ರ ದೇಶಾದ್ಯಂತ ದಾಖಲೆಯ ಗಳಿಕೆ, ದಾಖಲೆಯ ಪ್ರದರ್ಶನ, ಮೆಚ್ಚುಗೆಗೆ ಪಾತ್ರವಾದ ಸಿನಿಮಾ. ಈ ಚಿತ್ರಗಳು ದೇಶ ವಿದೇಶಗಳಲ್ಲಿ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಮಾತ್ರವಲ್ಲ, ಭಾರತದ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಚಿತ್ರಗಳ ಶಕ್ತಿಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಚಿತ್ರವಾಗಿದೆ. ಆದರೆ ಈ ಚಿತ್ರದ ಕೆಲ ಐಕಾನಿಕ್ ಸೀನ್‌ಗಳನ್ನು ಅತ್ಯಂತ ಜನಪ್ರಿಯ ಶೋ ಟಾಮ್ ಅಂಡ್ ಜೆರಿ ಕಾರ್ಟೂನ್ ಶೋನಿಂದ ಕಾಪಿ ಮಾಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ. ಟಾಮ್ ಅಂಡ್ ಜೆರಿ ಸೀನ್ ಹಾಗೂ ಸಿನಿಮಾದ ಸೀನ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮೂರು ಚಿತ್ರದ ಐಕಾನಿಕ್ ಸೀನ್‌ಗಳು ಟಾಮ್ ಆ್ಯಂಡ್ ಜೆರಿ ಕಾರ್ಟೂನ್‌ನಿಂದ ಕಾಪಿ ಮಾಡಲಾಗಿದೆ ಎಂದಿದೆ. ಅತುಲ್ಯ ಎಕ್ಸ್ ಹ್ಯಾಂಡಲ್‌ನಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಮೂರು ಸೀನ್ ಹಾಗೂ ಕಾರ್ಟೂನ್ ಸೀನ್ ನೀಡಲಾಗಿದೆ. ಈ ವಿಡಿಯೋ ತುಣುಕು ನೋಡಿದ ಬಳಿಕ ಅನುಮಾನ ಮತ್ತಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ.
Boxing Day Test: ಫಿಫ್ಟಿ ಬಾರಿಸಿ ಪುಷ್ಪ ಸ್ಟೈಲಲ್ಲಿ ಸೆಲಿಬ್ರೇಷನ್ ಮಾಡಿದ ನಿತೀಶ್ ರೆಡ್ಡಿ! ವಿಡಿಯೋ ವೈರಲ್
ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಸಿಗ್ನೆಚರ್ ಸ್ಟೈಲ್, ಅಂದರ ಕೈಗಳನ್ನು ದಾಡಿ ಉಜ್ಜುತ್ತಾ ಪ್ರತೀಕಾರದ ಸೂಚನೆ ನೀಡುವ ಸ್ಟೈಲ್ ಟಾಮ್ ಆ್ಯಂಡ್ ಜೆರಿಯಲ್ಲಿ ಮಾಡಲಾಗಿದೆ ಎಂದು ಈ ಎರಡೂ ಸೀನ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಸಿಗ್ನೆಚರ್ ಡ್ಯಾನ್ಸ್ ಸ್ಟೆಪ್ಸ್ ಕೂಡ ಟಾಮ್ ಅಂಡ್ ಜೆರಿಯ ಸೀನ್ ಕಾಪಿ ಅನ್ನೋದು ಈ ವಿಡಿಯೋ ಹೇಳುತ್ತಿದೆ. ಅಲ್ಲುಅರ್ಜುನ್ ಮತ್ತೊಂದು ಡ್ಯಾನ್ಸ್ ಸೀನ್ ಕೂಡ ಕಾರ್ಟೂನ್ ಶೋನಿಂದ ಕಾಪಿ ಮಾಲಾಗಿದೆ ಎಂದು ವಿಡಿಯೋ ಹೇಳುತ್ತಿದೆ
ಪುಷ್ಪಾ ಚಿತ್ರದ ಸೀನ್ ಮಾತ್ರವಲ್ಲ, ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರದಲ್ಲೂ ಟಾಮ್ ಆ್ಯಂಡ್ ಜೆರಿಯಿಂದ ಕಾಪಿ ಮಾಡಿರುವ ಸೀನ್ ಎಂದು ಹೇಳಲಾಗಿದೆ. ಬಾಹುಬಲಿ ಚಿತ್ರದಲ್ಲಿ ನಾಯಕಿಯನ್ನು ದೋಣಿ ಹತ್ತಿಸಲು ನಾಯಕ ಪ್ರಭಾಸ್ ಸೇತುವಾಗಿ ಕುಳಿತುಕೊಳ್ಳುತ್ತಾನೆ. ನಾಯಕಿ ಅನುಷ್ಕಾ ಶೆಟ್ಟಿ ಪ್ರಭಾಸ್ ತೋಳು, ಭುಜಗಳ ಮೇಲಿಂದ ನಡೆದುಕೊಂಡು ದೋಣಿ ಹತ್ತುವ ದೃಶ್ಯಗಳು ಟಾಮ್ ಆ್ಯಂಡ್ ಜೆರಿಯಲ್ಲಿ ಹಲವು ದಶಕಗಳ ಮೊದಲೇ ಮಾಡಲಾಗಿತ್ತು ಎಂದು ವಿಡಿಯೋ ತುಣುಕನ್ನು ನೀಡಲಾಗಿದೆ.
Kya matlab Pushpa, Bahubali, RRR movie's epic scenes Tom & Jerry se copied the 🤔 pic.twitter.com/apilDuvjpF
— Atulya (@DesiMemesTweets)
ಇನ್ನು ಆರ್‌ಆರ್‌ಆರ್ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಒಂದು ದೃಶ್ಯ ಕೂಡ ಟಾಮ್ ಆ್ಯಂಡ್ ಜೆರಿಯಿಂದ ಕಾಪಿ ಮಾಡಿರುವ ದೃಶ್ಯ ಎಂದು ಈ ವಿಡಿಯೋದಲ್ಲಿ ನೀಡಲಾಗಿದೆ. ಈ ವಿಡಿಯೋಗಳು ಅಭಿಮಾನಿಗಳ ಕಮೆಂಟ್ ಮಾಡಿದ್ದಾರೆ. ಪರ ವಿರೋಧಗಳು ವ್ಯಕ್ತವಾಗಿದೆ. ಕೆಲ ಅಭಿಮಾನಿಗಳು ಇದು ಕಾಪಿ ಮಾಡಿರುವ ದೃಶ್ಯಗಳಲ್ಲ ಎಂದು ವಾದಿಸಿದ್ದಾರೆ. ಸೀನ್‌ಗಳಲ್ಲಿ ಹೋಲಿಕೆ ಇರಬಹುದು. ಆದರೆ ಕಾಪಿ ಮಾಡಿಲ್ಲ ಎಂದು ವಾದಿಸಿದ್ದಾರೆ. ಮತ್ತೆ ಕೆಲವರು ಈ ದೃಶ್ಯ ನೋಡಿದ ಬಳಿಕ ಈ ಸೀನ್ ಕಾಪಿ ಮಾಡಲಾಗಿದೆ ಅನ್ನೋದು ಗೊತ್ತಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸೀನ್‌ಗಳನ್ನು ಟಾಮ್ ಆ್ಯಂಡ್ ಜೆರಿಯಿಂದ ಕಾಪಿ ಮಾಡಲಾಗಿದೆಯಾ ಅನ್ನೋದಕ್ಕೆ ಬೇರೆ ಯಾವುದೇ ಸ್ಪಷ್ಟ ದಾಖಲೆ ಇಲ್ಲ. ಆದರೆ ಈ ವಿಡಿಯೋ ಚರ್ಚೆ ಹುಟ್ಟು ಹಾಕಿದೆ.
ಅಲ್ಲು ಅರ್ಜುನ್-ರಾಮ್ ಚರಣ್ ಕಾಂಬಿನೇಷನ್‌ನಲ್ಲಿ ಮಲ್ಟಿಸ್ಟಾರರ್ ಚಿತ್ರ?: ಬಾಲಿವುಡ್ ನಿರ್ಮಾಪಕರಿಂದ ಪ್ರಯತ್ನ
ಪುಷ್ಪಾ 2 ಚಿತ್ರದ ಯಶಸ್ಸಿನ ಬೆನ್ನಲ್ಲೇ ಅಲ್ಲು ಅರ್ಜುನ್ ಬಂಧನ, ಬಿಡುಗಡೆ ಹಾಗೂ ರಾಜಕೀಯ ಹೇಳಿಕೆಗಳು ಭಾರಿ ವಿವಾದ ಸೃಷ್ಟಿಯಾಗಿದೆ.