ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಟೆಸ್ಟ್ ಅರ್ಧಶತಕ (50*) ಸಿಡಿಸಿ, ಪುಷ್ಪ ಸಿನಿಮಾ ಶೈಲಿಯಲ್ಲಿ ಸಂಭ್ರಮಿಸಿದರು. 81 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ ರೆಡ್ಡಿ, ಭಾರತವನ್ನು ಫಾಲೋಆನ್‌ನಿಂದ ಪಾರು ಮಾಡಲು ನೆರವಾದರು. ವಾಷಿಂಗ್ಟನ್ ಸುಂದರ್ ಜೊತೆಗೂಡಿ 63 ರನ್‌ಗಳ ಜೊತೆಯಾಟ ನೀಡಿದರು.
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ರೋಚಕ ಘಟ್ದದತ್ತ ಸಾಗುತ್ತಿದೆ. ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪ್ರತಿಭಾನ್ವಿತ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಜತೆಗೆ ತಂಡವನ್ನು ಫಾಲೋಆನ್ ಭೀತಿಯಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿತೀಶ್ ರೆಡ್ಡಿ ಚೊಚ್ಚಲ ಟೆಸ್ಟ್ ಅರ್ಧಶತಕ ಬಾರಿಸುತ್ತಿದ್ದಂತೆಯೇ ಪುಷ್ಪ ಸಿನಿಮಾದ ಸೆಲಿಬ್ರೇಷನ್ ಮಾಡಿ ಗಮನ ಸೆಳೆದಿದ್ದಾರೆ.
ಹೌದು ನಿತೀಶ್ ಕುಮಾರ್ ರೆಡ್ಡಿ 81 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಅರ್ಧಶತಕ ಪೂರೈಸುತ್ತಿದ್ದಂತೆಯೇ ಪುಷ್ಪ ಸೆಲಿಬ್ರೇಷನ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈದರಾಬಾದ್ ಮೂಲದ 21 ವರ್ಷದ ಯುವ ಬ್ಯಾಟರ್, ಆಸೀಸ್ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಆಫ್ ಸೈಡ್‌ನಲ್ಲಿ ಅದ್ಭುತ ಡ್ರೈವ್ ಮೂಲಕ ಬೌಂಡರಿ ಬಾರಿಸಿ ಚೊಚ್ಚಲ ಅರ್ಧಶತಕವನ್ನು ಪೂರೈಸಿದರು.
ಆಸೀಸ್‌ನಲ್ಲಿ ಮೊಹಮ್ಮದ್ ಸಿರಾಜ್ ವಿಕೆಟ್ ಗಳಿಸಲು ಪರದಾಟ; ತಂಡದಿಂದ ಗೇಟ್‌ಪಾಸ್?
ನಿತೀಶ್ ರೆಡ್ಡಿ ತಾವಾಡಿದ ಆರನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇದೇ ಮೊದಲ ಅರ್ಧಶತಕವಾಗಿದೆ. ವಿಶಾಖಪಟ್ಟಣಂ ಮೂಲದ ನಿತೀಶ್ ರೆಡ್ಡಿ, ರಿಷಭ್ ಪಂತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದರು. ನಿತೀಶ್ ರೆಡ್ಡಿ ಕ್ರೀಸ್‌ಗಿಳಿಯುವಾಗ ಭಾರತ ತಂಡವು ಆರು ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತ್ತು. ಆ ಸಂದರ್ಭದಲ್ಲಿ ಟೀಂ ಇಂಡಿಯಾ ಫಾಲೋ ಆನ್ ಭೀತಿಗೂ ಸಿಲುಕಿತ್ತು.
ಸುಂದರ್-ರೆಡ್ಡಿ ಜುಗಲ್ಬಂದಿ:
ಜಡೇಜಾ ವಿಕೆಟ್ ಪತನದ ವೇಳೆಗೆ ಭಾರತ ತಂಡವು ಫಾಲೋ ಆನ್‌ನಿಂದ ಪಾರಾಗಲು ಇನ್ನೂ 55 ರನ್‌ಗಳ ಅಗತ್ಯವಿತ್ತು. ಈ ವೇಳೆಗೆ ಎಂಟನೇ ವಿಕೆಟ್‌ಗೆ ಜತೆಯಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಸಮಯೋಚಿತ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
Boxing Day Test: ಚೊಚ್ಚಲ ಅರ್ಧಶತಕ ಚಚ್ಚಿ ಭಾರತವನ್ನು ಫಾಲೋ-ಆನ್‌ನಿಂದ ಪಾರುಮಾಡಿದ ನಿತೀಶ್ ರೆಡ್ಡಿ!
ಕಳೆದೆರಡು ಟೆಸ್ಟ್ ಪಂದ್ಯದಲ್ಲಿ 40+ ರನ್ ಬಾರಿಸಿ ಮುಗ್ಗರಿಸಿದ್ದ ಹೈದರಾಬಾದ್ ಮೂಲದ ನಿತೀಶ್ ಕುಮಾರ್ ರೆಡ್ಡಿ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಿರ್ಣಾಯಕ ಘಟ್ಟದ ಹಂತದಲ್ಲಿ ಆಕರ್ಷಕ ಚೊಚ್ಚಲ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ 81 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ನಿತೀಶ್ ರೆಡ್ಡಿಗೆ ಮತ್ತೊಂದು ತುದಿಯಲ್ಲಿ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಉತ್ತಮ ಸಾಥ್ ನೀಡಿದ್ದಾರೆ. ಸದ್ಯ 86 ಓವರ್ ಅಂತ್ಯದ ವೇಳೆಗೆ ಭಾರತ ತಂಡವು 7 ವಿಕೆಟ್ ಕಳೆದುಕೊಂಡು 284 ರನ್ ಬಾರಿಸಿದ್ದು, ಇನ್ನೂ 190 ರನ್‌ಗಳ ಹಿನ್ನಡೆಯಲ್ಲಿದೆ. 8ನೇ ವಿಕೆಟ್‌ಗೆ ಸುಂದರ್ ಹಾಗೂ ನಿತೀಶ್ ರೆಡ್ಡಿ ಮುರಿಯದ 63 ರನ್‌ಗಳ ಅಮೂಲ್ಯ ಜತೆಯಾಟ ನಡೆಸಿದ್ದಾರೆ.
