ಸಸ್ಯಾಹಾರಿ ಪತ್ರಕರ್ತೆಗೆ ಮಾಂಸ ತಿನ್ನಿಸಿದ್ರಾ ಆಲಿಯಾ! ರಾಮನ ಪಾತ್ರಕ್ಕೆ ರಣಬೀರ್ ಮದ್ಯ ಬಿಟ್ಟಿದ್ದು ಸುಳ್ಳಾ?

By Suchethana D  |  First Published Jun 15, 2024, 2:55 PM IST

ರಾಮಾಯಣಕ್ಕಾಗಿ ಮಾಂಸಹಾರ, ಮದ್ಯ ಬಿಟ್ಟಿದ್ದೇನೆ ಎಂದ ರಣಬೀರ್​ ಕೈಯಲ್ಲಿ ಗ್ಲಾಸ್ ಕಾಣಿಸಿಕೊಂಡಿದೆ​, ಇದೇ ವೇಳೆ ಸಸ್ಯಾಹಾರಿಯೊಬ್ಬರಿಗೆ ಮಾಂಸ ತಿನ್ನಿಸಿದ್ದಾರೆ ಆಲಿಯಾ! ಏನಪ್ಪಾ ಈ ದಂಪತಿ ಕಥೆ?
 


 ನಿತೀಶ್ ತಿವಾರಿ ಅವರು ರಾಮಾಯಾಣವನ್ನು ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ.   ರಾಮನಾಗಿ ಮಿಂಚಲಿರುವ ರಣಬೀರ್​ ಕಪೂರ್​ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿರುವುದಾಗಿ ಘೋಷಿಸಿದ್ದರು. ಇವರು  ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಅದರಲ್ಲಿಯೂ ಅನಿಮಲ್​ ಚಿತ್ರದ ಸಾಕಷ್ಟು ವಿವಾದದ ಬಳಿಕ ರಾಮನಾಗಿ ಇವರು ಕಾಣಿಸಿಕೊಳ್ತಿರೋ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ, ಸಂಸದೆ ಕಂಗನಾ ರಣಾವತ್​ ಕೂಡ ರಣಬೀರ್​ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಆ ಬಳಿಕ ಘೋಷಣೆ ಮಾಡಿದ್ದ ರಣಬೀರ್​ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದರು. ಆದರೆ ಈಚೆಗೆ ನಡೆದ  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಕೈಯಲ್ಲಿ ಗ್ಲಾಸ್​ ಹಿಡಿದಿರುವ ಫೋಟೋಗಳು ವೈರಲ್​ ಆಗಿದ್ದವು. ಜೊತೆಗೆ ನಾನ್​ವೆಜ್​ ಕೂಡ ಇರುವುದಾಗಿ ಹೇಳಲಾಗುತ್ತಿದ್ದು, ಇದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ನಟನ ಬಗ್ಗೆ ಇನ್ನಿಲ್ಲದಂತೆ ಹಲವರು ಕಿಡಿ ಕಾರುತ್ತಿದ್ದಾರೆ.

ಇದರ ಮಧ್ಯೆಯೇ, ರಣಬೀರ್​ ಪತ್ನಿ, ನಟಿ ಆಲಿಯಾ ಭಟ್​ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇವರ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ತಮ್ಮನ್ನು ಸಂದರ್ಶಿಸಲು ಬಂದಿದ್ದ ಸಸ್ಯಾಹಾರ ಪತ್ರಕರ್ತೆಗೆ ಆಲಿಯಾ ಭಟ್​ ಚಿಕನ್​ ತಿನ್ನಿಸಿರುವ ವಿಡಿಯೋ ಇದಾಗಿದೆ. ತನ್ನ ಸಂದರ್ಶನಕ್ಕೆ ಬಂದಿರುವ ಪತ್ರಕರ್ತೆ ಪ್ರಶ್ನೆಗೆ ಉತ್ತರಿಸುತ್ತಿದ್ದ ಆಲಿಯಾ ಕೈಯಲ್ಲಿ ಚಿಕನ್​ನಿಂದ ಮಾಡಿದ ಖಾದ್ಯವನ್ನು ಹಿಡಿದಿರುವುದನ್ನು ನೋಡಬಹುದು. ನಂತರ ಅದನ್ನು ಆಕೆ, ಪತ್ರಕರ್ತೆಗೆ ತಿನ್ನಿಸಿದ್ದಾರೆ. ಅದನ್ನು ತಿಂದ ಬಳಿಕ ಇದು ವೆಜ್​ ಅಥ್ವಾ ನಾನ್​ ವೆಜ್​ ಎಂದು ಪತ್ರಕರ್ತೆ ಕೇಳಿದ್ದಾರೆ. ಇದು ಚಿಕನ್​ ಎಂದಾಗ ಪತ್ರಕರ್ತೆ ಮುಖವನ್ನು ಒಂದು ರೀತಿ ಮಾಡಿದ್ದಾರೆ. ಆಗ ಆಲಿಯಾ ನೀವು ವೆಜಿಟೇರಿಯನ್ನಾ ಕೇಳಿದ್ದಾರೆ. ಅದಕ್ಕೆ ಆಕೆ ಹೌದು ಎಂದಿದ್ದಾರೆ. ಇದರ ಹೊರತಾಗಿಯೂ ಆಲಿಯಾ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಇರದೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.

Tap to resize

Latest Videos

ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ರಣಬೀರ್​ ಮತ್ತು ಆಲಿಯಾ ದಂಪತಿ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ನನಗೇನಾದರೂ ಈ ರೀತಿ ಕೊಟ್ಟಿದ್ದರೆ ಆಕೆಯ ಮುಖದ ಮೇಲೆ ಅದನ್ನು ಉಗಿಯುತ್ತಿದ್ದೆ ಎಂದು ಕೆಲವು ಬಳಕೆದಾರರು ಬರೆದಿದ್ದರೆ, ಆ ಪತ್ರಕರ್ತೆಗೆ ವಾಸನೆ ನೋಡಿಯೂ ತಿಳಿಯಲಿಲ್ಲವೆ, ಅಷ್ಟೂ ಗೊತ್ತಾಗಲಿಲ್ಲವೇ ಎಂದು ಪತ್ರಕರ್ತೆಯ ವಿರುದ್ಧ ಇನ್ನು ಕೆಲವರು ಕಮೆಂಟ್​ ಮಾಡಿದ್ದಾರೆ. ನಿಮಗೆ  ಯಾರಾದರೂ ಏನಾದರೂ ತಿನ್ನಿಸಲು ಬಂದಾಗ ಅದು ಏನು ಎಂದು ಯಾರಾದರೂ ಕೇಳ್ತಾರೆ, ಇದರಲ್ಲಿ ನಟಿಯ ತಪ್ಪೇನಿದೆ ಎಂದು ನಟಿಯ ಫ್ಯಾನ್ಸ್​ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ತಿನ್ನಿಸುವ ಮೊದಲು ಅದು ಏನು ಎಂದು ಹೇಳಿ ಕೊಡಬೇಕಿತ್ತು. ನಟಿಯದ್ದು ಅತಿಯಾಯಿತು ಎಂದು ಆಲಿಯಾ ಭಟ್​ ವಿರುದ್ಧ ಕಿಡಿ ಕಾರುತ್ತಿದ್ದಾರೆ.
 
ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಪತಿ-ಪತ್ನಿಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಪತಿ ಸುಳ್ಳುಗಾರನಾದರೆ, ಆಲಿಯಾ ಭಟ್​ ಕಂತ್ರಿ ಬುದ್ಧಿ ತೋರಿದ್ದಾಳೆ ಎಂದು ಹಲವರು ಟೀಕಿಸುತ್ತಿದ್ದಾರೆ. ರಣಬೀರ್​ ತಾವು ರಾಮಾಯಣ ಶೂಟಿಂಗ್​ ಮುಗಿಯುವವರೆಗೂ ಮದ್ಯ, ಮಾಂಸ ಮುಟ್ಟುವುದಿಲ್ಲ ಎಂದಾಗ, ಅವರ ಈ ಹೇಳಿಕೆ ಸ್ಟಂಟ್​ಗಾಗಿ, ಪಬ್ಲಿಸಿಟಿಗಾಗಿ ಎಂದು ಟ್ರೋಲ್​ ಮಾಡಲಾಗಿತ್ತು. ಆದರೆ  ಯಾರು ಏನೇ ಹೇಳಿದರೂ ತಾವು ತಮ್ಮ ಮಾತಿಗೆ ಬದ್ಧ ಎಂದಿದ್ದರು ರಣಬೀರ್​.

ಅವ್ರು ಮಲಗಲು ರೆಡಿ ಇದ್ರೆ ತಾನೇ ಇವ್ರೂ ಮುಂದಾಗೋದು! ಕಾಸ್ಟಿಂಗ್ ಕೌಚ್​ ಅನ್ನೋರಿಗೆ ನಟಿ ಲಕ್ಷ್ಮಿ ತಿರುಗೇಟು 

 
 
 
 
 
 
 
 
 
 
 
 
 
 
 

A post shared by Rani.♡🧚 (@ranigossips)

click me!