
ಬಾಲಿವುಡ್ ನಟಿ ಆಲಿಯಾ ಭಟ್(Alia Bhatt) ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಕನ್ನಡ ಮಾತನಾಡೋದು ಬಿಡಿ, ಮಾತನಾಡಿದ್ದು ಅರ್ಥ ಕೂಡಾ ಆಗದ ಆಲಿಯಾ ಕನ್ನಡ ಟ್ವೀಟ್(tweet) ಮಾಡಿದ್ದೇಕೆ ? ಟ್ವೀಟ್ ವಿಷಯವೇನು ? ಟ್ವೀಟ್‌ನಲ್ಲಿ ನಟಿ ಏನೆಂದು ಬರೆದಿದ್ದಾರೆ ? ಇದು ಇಂಟ್ರೆಸ್ಟಿಂಗ್ ವಿಚಾರ. ಆಲಿಯಾ ಕನ್ನಡದಲ್ಲಿ ಟ್ವೀಟ್ ಮಾಡಿದ್ದು ಈಗ ಸುದ್ದಿಯಾಗಿದೆ. ಅಲಿಯಾ ಕರ್ನಾಟಕದ ಅಭಿಮಾನಿಗಳು ಫುಲ್ ಖುಷ್ ಆಗಿ ಟ್ವೀಟ್ ನೋಡಿ ಸಂತಸಪಡುತ್ತಿದ್ದಾರೆ.
ಕೊರೋನಾ ಕಡಿಮೆಯಾಗಿ ಸಿನಿಮಾ ಇಂಡಸ್ಟ್ರಿ ಸ್ವಲ್ಪ ಚೇತರಿಸಿದ್ದೇ ತಡ ದೇಶಾದ್ಯಂತ ಸಿನಿ ಉದ್ಯಮ ಚೇತರಿಸಿಕೊಂಡಿದೆ. ಬಾಲಿವುಡ್‌ನಿಂದ ತೊಡಗಿ ಟಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಎಲ್ಲ ಕಡೆಯೂ ಬಿಗ್‌ಬಜೆಟ್ ಸಿನಿಮಾಗಳು ರಿಲೀಸ್ ಆಗಿವೆ, ಕೆಲವೊಂದು ರಿಲೀಸ್‌ಗೆ ಸಿದ್ಧವಾಗಿವೆ. ಕಳೆದ ಎರಡು ವರ್ಷಗಳಿಂದ ಲಾಕ್‌ಡೌನ್ ಮಧ್ಯೆಯೂ ಕಷ್ಟಪಟ್ಟು ಶೂಟಿಂಗ್ ಮುಗಿಸಿದ ಸಿನಿಮಾ ತಂಡಗಳು ಈಗ ಪ್ರಚಾರದಲ್ಲಿ ಬ್ಯುಸಿಯಾಗಿವೆ. ಒಂದಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ.
ಆರ್‌ಆರ್‌ಆರ್, ಬ್ರಹ್ಮಾಸ್ತ್ರ, ಪುಷ್ಪ, ರಾಧೆ ಶ್ಯಾಮ್ ಹೀಗೆ ಸಿನಿಮಾಗಳು ಹತ್ತಾರಿವೆ. ಸದ್ಯ ಬಾಲಿವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರೋ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರ. ಬಾಲಿವುಡ್ ಬಬ್ಲಿ ಜೋಡಿ ಆಲಿಯಾ-ರಣಬೀರ್ ನಟಿಸಿದ ಸಿನಿಮಾ ಇದು. ಆಲಿಯಾ ಟ್ವೀಟ್ ಮಾಡಿರೋದು ಇದೇ ಸಿನಿಮಾ ಬಗ್ಗೆ. ಕರ್ನಾಟಕದ ಜನರಲ್ಲಿ ಸಿನಿಮಾ ನೋಡುವಂತೆ ಕೇಳಿಕೊಂಡಿರೋ ನಟಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ಆಲಿಯಾ - ರಣಬೀರ್ ಕಪೂರ್ ರೊಮ್ಯಾಂಟಿಕ್ ಮೂಮೆಂಟ್ಸ್!
ಆಲಿಯಾ ಭಟ್ ಕನ್ನಡ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ನಟಿ ಕನ್ನಡದಲ್ಲಿಯೇ ಟ್ವೀಟ್ ಮಾಡಿ, ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ Introducing 'SHIVA'!Fire ಎಂದು ಬರೆದಿದ್ದಾರೆ.
"
ಇತ್ತೀಚೆಗೆ ಆರ್‌ಆರ್‌ಆರ್(RRR) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಆಲಿಯಾ ಭಟ್ (Alia Bhatt) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಸಮಯದಲ್ಲಿ ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ (Jr NTR) ಸಹಾಯ ಪಡೆದು, ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಕುಂದಾಪುರದ ಹುಡುಗ 'ಎಲ್ಲರಿಗೂ ನಮಸ್ಕಾರ' ಎಂದು ಹೇಳಿಕೊಟ್ಟಿದ್ದಾರೆ. ನಾಚಿಕೆಯಿಂದಲೇ ಕನ್ನಡ ಮಾತನಾಡಿದ್ದ ಆಲಿಯಾ ವಿಡಿಯೋ ವೈರಲ್ ಆಗುತ್ತಿದೆ. ಹಿಂದಿ ಮಂದಿಯಾಗಿ ಕನ್ನಡ ಮಾತನಾಡಿದ್ದು ಖುಷಿ. ಆದರೆ ರಶ್ಮಿಕಾ ಮಂದಣ್ಣ (Rashmika Mandanna) ಕಥೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು.
ರಶ್ಮಿಕಾಗೆ ಹೋಲಿಸಿದ ಸಿನಿಪ್ರಿಯರು:
ಆಲಿಯಾ ಕನ್ನಡ ಟ್ವೀಟ್ ನೋಡಿ ಸಿನಿಪ್ರಿಯರು ರಶ್ಮಿಕಾ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕನ್ನಡದವರಾಗಿಯೂ ಕನ್ನಡ ಮಾತನಾಡದ ರಶ್ಮಿಕಾಗೆ ಆಲಿಯಾರನ್ನು ನೋಡಿ ಕಲಿಯುವಂತೆ ಹೇಳುತ್ತಿದ್ದಾರೆ.
ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಮದುವೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಬ್ಬರೂ 2018 ರಿಂದ ಡೇಟಿಂಗ್ ಮಾಡುತ್ತಿರುವ ಈ ಕಪಲ್ ತಮ್ಮ ಪ್ರೀತಿಯನ್ನು ಎಲ್ಲರ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಆಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಕೈ ಹಿಡಿದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಬುಧವಾರ, ಡಿಸೆಂಬರ್ 14 ರಂದು, ನವದೆಹಲಿಯಲ್ಲಿ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಮೋಷನ್ ಪೋಸ್ಟರ್ ಬಿಡುಗಡೆಗಾಗಿ ಮೆಗಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬ್ರಹ್ಮಾಸ್ತ್ರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ ಅವರ ಒಂದು ಲುಕ್ ಅನ್ನು ಅದರಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಪಾತ್ರವು ಸೂಪರ್ ಪವರ್ ಹೊಂದಿರುವ ವ್ಯಕ್ತಿಯ ಪಾತ್ರವಾಗಿರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.