
ಇತ್ತೀಚಿನ ದಿನಗಳಲ್ಲಿ ನಟ, ನಟಿಯರು ತಮ್ಮ ವರ್ಕೌಟ್, ಯೋಗ, ಗಾರ್ಡನಿಂಗ್, ಮೇಕಪ್, ಸ್ಕಿನ್ ಕೇರ್ ಕುರಿತ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿದ್ದಾರೆ. ಈ ಮೂಲಕ ಟಾಪ್ ಸೆಲೆಬ್ರಿಟಿಗಳ ರೊಟೀನ್ ಅವರ ಫ್ಯಾನ್ಸ್‌ಗೆ ಲಭ್ಯವಾಗುತ್ತಿದೆ.
ನಟಿ ಮಾಧುರಿ ದೀಕ್ಷಿತ್ ಅವರ ಮೇಕಪ್ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಇದೀಗ ನಟಿ ಆಲಿಯಾ ಭಟ್ ಅವರ ಸ್ಕಿನ್ ಕೇರ್ ರೊಟೀನ್ ವೈರಲ್ ಆಗಿದೆ.
ಯೂಟ್ಯೂಬ್ ಚಾನೆಲ್ ಹೊಂದಿರುವ ನಟಿಯರು ಈ ಮೂಲಕವೂ ಫ್ಯಾನ್ಸ್ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ ಆಲಿಯಾ ಸ್ಕಿನ್ ಕೇರ್ ರೊಟೀನ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಫ್ಯಾನ್ಸ್ ಕೂಡಾ ಖುಷಿಯಾಗಿದ್ದಾರೆ.
ಮೇಕಪ್ ಸೀಕ್ರೆಟ್ ರಿವೀಲ್ ಮಾಡಿದ ಮಾಧುರಿ ದೀಕ್ಷಿತ್: ನಟಿಯ ಎವರಿಡೇ ಮೇಕಪ್ ಟ್ರಿಕ್ ಇದು..!
ಆಲಿಯಾ ಭಟ್ ಅದ್ಭುತ ನಟಿ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅವರ ವರ್ಕ್ ಪ್ರಾಜೆಕ್ಟ್ ಹೊರತಾಗಿ ಆಗಾಗ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ಮತ್ತು ಯೂಟ್ಯೂಬ್ ವೀಡಿಯೊಗಳಿಗಾಗಿ ನಟಿ ಸುದ್ದಿಯಾಗುತ್ತಾರೆ.
ಇತ್ತೀಚೆಗೆ, ತನ್ನ ಯೂಟ್ಯೂಬ್ ವೀಡಿಯೊದಲ್ಲಿ, ಆಲಿಯಾ ತನ್ನ ಬೆಳಗಿಳ ಸ್ಕಿನ್ ಕೇರ್ ರೊಟೀನ್ ಶೇರ್ ಮಾಡಿದ್ದಾರೆ. ಆಲಿಯಾ ಬೆಳಗ್ಗೆ ಸ್ಕಿನ್ ಮಸಾಜರ್ ಅನ್ನು ಬಳಸುತ್ತಾರೆ. ಚರ್ಮವನ್ನು ತೇವವಾಗಿಡಲು ಅವರು ಮೊದಲು ಮುಖದ ಸ್ಪ್ರೇ ಬಳಸುತ್ತಾರೆ. ನಂತರ ಮುಖವನ್ನು ಒಂದು ನಿಮಿಷ ಅಥವಾ ಅದಕ್ಕೂ ಹೆಚ್ಚು ಮಸಾಜ್ ಮಾಡುತ್ತಾರೆ.
ನಿಮ್ಮ ತ್ವಚೆಯನ್ನು ನಿಯಮಿತವಾಗಿ ಮಸಾಜ್ ಮಾಡಲು ಯೋಜಿಸುತ್ತಿದ್ದರೆ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಎರಡು ವಿಷಯಗಳಿವೆ - ಒಣ ಮುಖವನ್ನು ಎಂದಿಗೂ ಮಸಾಜ್ ಮಾಡಬೇಡಿ. ಮಸಾಜರ್ ಬಳಸುವ ಮೊದಲು ನೀವು ಫೇಸ್ ಆಯಿಲ್ ಅಥವಾ ಸ್ಪ್ರೇ ಬಳಸಬೇಕು.
ಎರಡನೆಯದಾಗಿ ಸರಿಯಾದ ತಂತ್ರವನ್ನು ತಿಳಿದುಕೊಳ್ಳುವುದು ಮುಖ್ಯ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಬಯಸಿದರೆ, ನೀವು ಮಸಾಜರ್ ಅನ್ನು ಹೇಗೆ ಬಳಸಬೇಕು ಎಂಬುದರ ಕುರಿತು ತಿಳಿದುಕೊಳ್ಳಬೇಕು.
ಸೊಂಪುಗೂದಲಿನ ಸೀಕ್ರೆಟ್ ಹೇಳಿದ ನಟಿ ಮಾಧುರಿ ದೀಕ್ಷಿತ್
ನಿಮ್ಮ ಮುಖಕ್ಕೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಯೌವ್ವನದ ಹೊಳಪನ್ನು ನೀಡುತ್ತದೆ. ಸರಿಯಾದ ಮಸಾಜ್ ಮುಖ ಸುಕ್ಕುಗಟ್ಟುವುದನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ.
ಆಲಿಯಾ ತ್ವಚೆಯ ರಕ್ಷಣೆಯ ದಿನಚರಿಯನ್ನು ಇಲ್ಲಿ ನೋಡಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.