ಪಾಂಡಿಚೆರಿ: ನಟ ಶರತ್‌ಕುಮಾರ್‌ ಭೇಟಿ ಮಾಡಿದ ಐಶ್ವರ್ಯ, ಅಭಿಷೇಕ್!

Suvarna News   | Asianet News
Published : Jul 26, 2021, 10:44 AM ISTUpdated : Jul 26, 2021, 10:59 AM IST
ಪಾಂಡಿಚೆರಿ: ನಟ ಶರತ್‌ಕುಮಾರ್‌ ಭೇಟಿ ಮಾಡಿದ  ಐಶ್ವರ್ಯ, ಅಭಿಷೇಕ್!

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎರಡು ಸ್ಟಾರ್ ಕುಟುಂಬಗಳ ಗೆಟ್‌ ಟುಗೆದರ್‌ ಫೋಟೋಗಳು. ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.   

ವಿಶ್ವ ಸುಂದರಿ ಐಶ್ವರ್ಯ ರೈ ಹಲವು ವರ್ಷಗಳ ಬಳಿಕ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್ ಕಟ್ ಹೇಳುತ್ತಿರುವ 'ಪೊನ್ನಿಯಮ್ ಸೆಲ್ವನ್' ಸಿನಿಮಾ ಚಿತ್ರೀಕರಣ ಪಾಂಡಿಚೆರಿಯಲ್ಲಿ ನಡೆಯುತ್ತಿದೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಐಶ್ವರ್ಯ ಚಿತ್ರೀಕರಣಕ್ಕೆ ಪುತ್ರಿ ಹಾಗೂ ಪತಿ ಜೊತೆ ಆಗಮಿಸಿದ್ದಾರೆ.  

ಸ್ಮಾಲ್ ವೆಕೇಶನ್ ಕಮ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುವ ವಿಶ್ವ ಸುಂದರಿ ಬಹುಭಾಷಾ ನಟ ಶರತ್‌ಕುಮಾರ್‌ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಶರತ್ ಪುತ್ರಿ  ವರಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. 'ಕಳೆದ ರಾತ್ರಿ ನಾನು ಮೂವರು ಹಂಬಲ್ ಹಾಗೂ ಗಾರ್ಜಿಯಸ್ ವ್ಯಕ್ತಿಗಳನ್ನು ಭೇಟಿ ಮಾಡಿದೆ. ಐಶ್ವರ್ಯ ರೈ, ಹ್ಯಾಂಡ್ಸಂ ಅಭಿಷೇಕ್ ಬಚ್ಚನ್ ಹಾಗೂ ಅವರ ಮುದ್ದು ಪುತ್ರಿ ಆರಾಧ್ಯ. ನಿಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ನಮ್ಮನ್ನು ಭೇಟಿ ಮಾಡಿ ಸಮಯ ಕಳೆದಿದ್ದಕ್ಕೆ ತುಂಬಾ ಧನ್ಯವಾದಗಳು,' ಎಂದು ವರಲಕ್ಷ್ಮಿ ಬರೆದುಕೊಂಡಿದ್ದಾರೆ. 

ಪಾಂಡಿಚೆರಿಯಲ್ಲಿ ಮಣಿರತ್ನಂ ಸಿನಿಮಾ ಚಿತ್ರೀಕರಣ: ಐಶ್ವರ್ಯ ರೈ ಭಾಗಿ!

ಕಲ್ಕಿ ಕೃಷ್ಣಮೂರ್ತಿಯವರ ಜನಪ್ರಿಯ ಐತಿಹಾಸಿಕ ಕಾದಂಬರಿ 'ಪೊನ್ನಿಯಿನ್ ಸೆಲ್ವನ್' ಆಧಾರಿತ ಚಿತ್ರ ಇದಾಗಿದ್ದು, ಸಿನಿ ಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ನೆಟ್ಟಿಗರ ಗಮನ ಸೆಳೆದದ್ದು ಆರಾಧ್ಯ. 9 ವರ್ಷಕ್ಕೆ ತಾಯಿಗಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್