ಲಿಪ್ ಸರ್ಜರಿ, ತೀರಾ ಸಣ್ಣ, ವಯಸ್ಸಾಯ್ತು; ಅಲಿಯಾ ಭಟ್ ಹಿಗ್ಗಾಮುಟ್ಟಾ ಟ್ರೋಲ್

Published : Feb 25, 2023, 03:50 PM IST
ಲಿಪ್ ಸರ್ಜರಿ, ತೀರಾ ಸಣ್ಣ, ವಯಸ್ಸಾಯ್ತು; ಅಲಿಯಾ ಭಟ್ ಹಿಗ್ಗಾಮುಟ್ಟಾ ಟ್ರೋಲ್

ಸಾರಾಂಶ

ಅಲಿಯಾ ಭಟ್ ವಿಭಿನ್ನ ಲುಕ್‌ನಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಲಿಪ್ ಸರ್ಜರಿ, ವಯಸ್ಸಾಯ್ತು ಎಂದು ಟ್ರೋಲ್ ಮಾಡಿದ್ದಾರೆ. 

ಬಾಲಿವುಡ್ ನಟಿ ಅಲಿಯಾ ಭಟ್ ಸದ್ಯ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲಿಯಾ ಮಗುವಿಗೆ ಜನ್ಮ ನೀಡಿ ಮೂರು ತಿಂಗಳಾಗಿದೆ. ಮಗುವಿಗೆ ಜನ್ಮ ನೀಡಿ ತಿಂಗಳೊಳಗೆ ಅಲಿಯಾ ವರ್ಕೌಟ್, ಯೋಗ, ಜಿಮ್ ಅಂತ ಪ್ರಾರಂಭಿಸಿದ್ದರು. ಮತ್ತೆ ಫಾರ್ಮ್ ಗೆ ಮರಳು ಪ್ರಯತ್ನಿಸುತ್ತಿರುವ ಅಲಿಯಾ ಸಿನಿಮಾಗಳಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಮಗುವಿದ್ದರೂ ಅಲಿಯಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಈ ನಡುವೆ ಆಲಿಯಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ತೀರಾ ಸಣ್ಣ ಆಗಿದ್ದಾರೆ ಎನ್ನಲಾಗುತ್ತಿದೆ. 

ಅಲಿಯಾ ಭಟ್ ಇತ್ತೀಚೆಗಷ್ಟೆ ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಸಂಜಯ್ ಲೀಲಾ ಬನ್ಸಾಲಿ ಚಿತ್ರರಂಗದ ಆಪ್ತರು ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ಪಾರ್ಟಿಯಲ್ಲಿ ಅಲಿಯಾ ಭಟ್, ರಣವೀರ್ ಸಿಂಗ್, ಸೋನಾಕ್ಷಿ ಸಿನ್ಹ, ಅದಿತಿ ರಾವ್ ಸೇರಿದಂತೆ ಕೆಲವೇ ಮಂದಿ ಹಾಜರಾಗಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದ  ಅಲಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲಿಯಾ ಲುಕ್ ನೋಡಿ ನೆಟ್ಟಿಗರ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಆಲಿಯಾ ಭಟ್‌ ಅವರ ಐಷಾರಾಮಿ ವಾಕ್-ಇನ್ ಕ್ಲೋಸೆಟ್; ಎಷ್ಷು ಶೂಗಳಿವೆ ನೋಡಿ

ಬಿಳಿ ಬಣ್ಣದ ಸ್ಯಾಟಿನ್ ಟಾಪ್ ಧರಿಸಿದ್ದರು. ಕೂದಲನ್ನು ಬಿಗಿಯಾಗಿ ಕಟ್ಟಿದ್ದರು. ಹೆಚ್ಚು ಮೇಕಪ್ ಇಲ್ಲದ ಲುಕ್ ನಲ್ಲಿ ಅಲಿಯಾ ಕಾಣಿಸಿಕೊಂಡಿದ್ದರು. ಅಲಿಯಾ ಡಿಫರೆಂಟ್ ಲುಕ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸಿಕ್ಕಾಪಟ್ಟೆ ತೆಳ್ಳಗೆ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅನೇಕ ದಿನಗಳಿಂದ ಊಟನೇ ಮಾಡಿಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ವಿಶೇಷವಾಗಿ ಫೋಟೋದಲ್ಲಿ ಅಲಿಯಾ ತುಟಿಯ ಸರ್ಜರಿ ಮಾಡಿಸಿಕೊಂಡಂತೆ ಕಾಣುತ್ತಿದೆ. ಹಾಗಾಗಿ ಲಿಪ್ ವಿಚಾರದಲ್ಲೂ ಅಲಿಯಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಹಳೆಯ ಆಕಾರ ಪಡೆಯಲು ಆತುರ ಪಡುತ್ತಿದ್ದಾರೆ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.  

ನೆರೆ ಮನೆಯಿಂದ ಆಲಿಯಾ ಭಟ್ ಖಾಸಗಿ ಫೋಟೋ ಕ್ಲಿಕ್ ಮಾಡಿದ ಮಾಧ್ಯಮ; ತಿರುಗಿ ಬಿದ್ದ ಬಿ-ಟೌನ್ ಮಂದಿ

ಅಲಿಯಾ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪತಿ ರಣಬೀರ್ ಕಪೂರ್ ಜೊತೆ ಅಲಿಯಾ ನಟಿಸಿದ್ದರು. ಕಳೆದ ಅತೀ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾಗಳಲ್ಲಿ ಬ್ರಹ್ಮಾಸ್ತ್ರ ಕೂಡ ಒಂದಾಗಿತ್ತು. ಮೊದಲ ಭಾಗ ರಿಲೀಸ್ ಆಗಿದೆ. ಎರಡೇ ಭಾಗ ತಯಾರಾಗುತ್ತಿದೆ. ಸದ್ಯ ಅಲಿಯಾ ರಾಕಿ ಔರ್ ರಾಣಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಕಾಯುತ್ತಿದ್ದಾರೆ. ಹಿಂದಿ ಸಿನಿಮಾ ಜೊತೆಗೆ ಅಲಿಯಾ 'ಹಾರ್ಟ್ ಆಫ್ ಸ್ಟೋನ್' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಗರ್ಭಿಣಿ ಆಗಿದ್ದಾಲೇ ಅಲಿಯಾ ಹಾಲಿವುಡ್ ಸಿನಿಮಾದ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದರು. ಇದೀಗ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಆಗದೇ ಆ ಸ್ಟಾರ್ ನಟನಿಂದ ಮಗುವನ್ನು ಪಡೆಯಲು ಬಯಸಿದ್ದ ಆ ನಟಿಗೆ ಕೊನೆಗೆ ಆಗಿದ್ದೇನು?
ಈಗ್ಲೂ ಬ್ಯಾಚ್ಯುಲರ್ Salman Khan ಡಿಸೆಂಬರ್ 27ಕ್ಕೆ ಹುಟ್ಟಿದ್ದೇ ಒಂಟಿತನಕ್ಕೆ ಕಾರಣವಾಯ್ತಾ?