ಬಾಲಿವುಡ್ ಫಿಲ್ಮ್ ಪ್ರೊಡಕ್ಷನ್ ಮಾಡ್ತಿದೆ ಅಮೆಝಾನ್ ಪ್ರೈಂ

Suvarna News   | Asianet News
Published : Mar 18, 2021, 09:32 AM IST
ಬಾಲಿವುಡ್ ಫಿಲ್ಮ್ ಪ್ರೊಡಕ್ಷನ್ ಮಾಡ್ತಿದೆ ಅಮೆಝಾನ್ ಪ್ರೈಂ

ಸಾರಾಂಶ

ಭಾರತದ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ ಅಮೆಝಾನ್ ಪ್ರೈಂ | ಬಾಲಿವುಡ್ ಫಿಲ್ಮ್ ಪ್ರೊಡಕ್ಷನ್‌ಗೆ ಅಮೆಝಾನ್ ಲಗ್ಗೆ

ಅಮೆಜಾನ್ ಡಾಟ್ ಕಾಮ್ ನ ಪ್ರೈಮ್ ವಿಡಿಯೋ ಬಾಲಿವುಡ್ ಸಿನಿಮಾ ಒಂದನ್ನು ಸಹ-ನಿರ್ಮಿಸಲಿದೆ ಎಂದು ಹೇಳಿದೆ. ಭಾರತ ಅಮೆಜಾನ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರೈಮ್ ವಿಡಿಯೋ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಎಡಿಟರ್ ಜೆಫ್ ಬೆಜೋಸ್ ಅವರು ವಿಶ್ವದ ಎಲ್ಲೆಡೆಯೂ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ನಟ ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಎಂಬ ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಎರಡು ಸ್ಟುಡಿಯೋಗಳು ನಿರ್ಮಿಸಲಿದ್ದು, ಬಿಡುಗಡೆಯ ದಿನಾಂಕವನ್ನು ತಿಳಿಸಿಲ್ಲ.

ಅಬ್ಬಾ.. ಸಿನಿಮಾಗೋಸ್ಕರ ಹಗ್ಗದ ಮೇಲೆ ನಡೆಯೋಕೆ ಕಲಿತ ಜಾಕ್ವೆಲಿನ್

ನಮ್ಮ ಭಾರತೀಯ ಪರಂಪರೆಯನ್ನು ಎತ್ತಿ ತೋರಿಸುವ ಚಿತ್ರದೊಂದಿಗೆ ಕೈಜೋಡಿಸಿ ಸಿನಿಮಾ ಸಹ-ನಿರ್ಮಾಣ ಮಾಡಲು ನಾವು ಸಂತೋಷಪಡುತ್ತೇವೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾದ ಮುಖ್ಯಸ್ಥ ವಿಜಯ್ ಸುಬ್ರಮಣ್ಯಂ ಹೇಳಿದ್ದಾರೆ.

ಚಿತ್ರದ ಶೀರ್ಷಿಕೆಯು ಆಡಮ್ಸ್ ಸೇತುವೆಯ ಹಿಂದಿ ಹೆಸರು, ಇದು ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾಗೆ ಸಂಪರ್ಕ ಕಲ್ಪಿಸುವ ಸುಣ್ಣದ ಕಲ್ಲುಗಳ ಸರಪಳಿ.

ಮಾಧುರಿ -ಐಶ್ವರ್ಯಾ: ಹೇಗೆ ಕಾಣುತ್ತಾರೆ ನೋಡಿ ಬಾಲಿವುಡ್‌ ನಟಿಯರು ಮೇಕಪ್‌ ಇಲ್ಲದೆ!

ಹಿಂದೂ ದೇವರು-ರಾಜ ರಾಮ ನೇತೃತ್ವದ ಸೈನ್ಯವು ಈ ಸೇತುವೆಯನ್ನು ನಿರ್ಮಿಸಿದೆ ಎಂದು ಭಾರತೀಯ ಪುರಾಣ ಹೇಳುತ್ತದೆ. ಭಾರತದಲ್ಲಿ ಉಚಿತ ವಿತರಣೆ, ಮಾರಾಟದ ಸಮಯದಲ್ಲಿ ವ್ಯವಹಾರಗಳಿಗೆ ಆರಂಭಿಕ ಪ್ರವೇಶ ಮತ್ತು ಉಚಿತ ಸಂಗೀತ ಮತ್ತು ವಿಡಿಯೋ ಸ್ಟ್ರೀಮಿಂಗ್ ನೀಡುವ ಅಮೆಜಾನ್‌ನ ಪ್ರೈಮ್ ಲಾಯಲ್ಟಿ ಕಾರ್ಯಕ್ರಮಕ್ಕೆ ವರ್ಷಕ್ಕೆ 999 ರೂಪಾಯಿ ಖರ್ಚಾಗುತ್ತದೆ.

ಅಮೆಜಾನ್ ಇತ್ತೀಚೆಗೆ ತನ್ನ ವೆಬ್ ಸಿರೀಸ್ ತಾಂಡವ್‌ನ ಕೆಲವು ದೃಶ್ಯಗಳಲ್ಲಿ ಭಾರತೀಯರ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!