OMG-2: ವೇಷ ಶಿವಂದು, ಕಥೆ ಸಲಿಂಗ ಕಾಮದ್ದಾ! ಏನಿದು ಅಕ್ಷಯ್‌ ಕುಮಾರ್‌ ಚಿತ್ರದ ವಿವಾದ?

By Suvarna News  |  First Published Jul 14, 2023, 5:40 PM IST

ನಟ ಅಕ್ಷಯ್​ ಕುಮಾರ್ ಅಭಿನಯದ ಓ ಮೈ ಗಾಡ್‌-2 ಚಿತ್ರದಲ್ಲಿ ನಟ ಶಿವನ ಪಾತ್ರಧಾರಿಯಂತೆ ತೋರಿದರೂ, ಚಿತ್ರದಲ್ಲಿ ಸಲಿಂಗಕಾಮದ ಅಂಶಗಳು ಇವೆ ಎಂದು ಟ್ರೋಲಾಗುತ್ತಿದೆ.
 


ನಟ ಅಕ್ಷಯ್​ ಕುಮಾರ್​ (Akshay Kumar) ಗ್ರಹಗತಿ ಸದ್ಯದ ಮಟ್ಟಿಗೆ ಸರಿಯಿದ್ದಂತಿಲ್ಲ. ಅವರು ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಸೋಲು ಕಾಣುತ್ತಿವೆ. ಈಗ ಅವರ ಭರವಸೆ ಹೆಚ್ಚಿರುವುದು ಮುಂಬರುವ ಚಿತ್ರ ಓ ಮೈ ಗಾಡ್‌-2 (OMG 2) ಮೇಲೆ. ಶಿವನ ಪಾತ್ರಧಾರಿಯಾಗಿರುವ ನಟ ಅಕ್ಷಯ್ ಕುಮಾರ್‌ ಅವರ ಫೋಟೋ ವೈರಲ್‌ ಆಗಿದೆ. ಆದರೆ ಇದರ ಬೆನ್ನಲ್ಲೇ  ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಬರುವ ಆಗಸ್ಟ್ 11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ  ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ  ಸೆನ್ಸಾರ್ ಪತ್ರವನ್ನು  ಕೊಡಲು ನಿರಾಕರಿಸಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಚಿತ್ರದ ಕುರಿತು ದೊಡ್ಡದೊಂದು ಗಾಸಿಪ್​ ಹಬ್ಬಿದೆ.  

2012ರಲ್ಲಿ ‘ಒಎಂಜಿ’ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಆಗಿತ್ತು. ಅದಕ್ಕೆ ಸೀಕ್ವೆಲ್​ ಆಗಿ ‘ಒಎಂಜಿ 2’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಅಕ್ಷಯ್​ ಕುಮಾರ್ ಜೊತೆ ಪಂಕಜ್​ ತ್ರಿಪಾಠಿ ಅವರು ಪ್ರಮುಖ ಮಾತ್ರ ಮಾಡಿದ್ದಾರೆ. ನಟಿ ಯಾಮಿ ಗೌತಮಿ ಅವರು ಲಾಯರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತ್​ ರೈ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆದರೆ ಈ 2ನೇ ಭಾಗ ಮಾತ್ರ ಸಕತ್‌ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಅವರು ಶಿವನ ಪಾತ್ರ ಮಾಡಿದ್ದಾರೆ. ಆದರೆ ಈ ಸಿನಿಮಾದ ಕಥೆ ಸಲಿಂಗ ಕಾಮಕ್ಕೆ (Homosexuality) ಸಂಬಂಧಿಸಿದ್ದು ಎಂಬ ಸುದ್ದಿ ಹರಡಿದೆ.  ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಸಲಿಂಗಕಾಮದ ಚಿತ್ರವಾಗಿದೆ ಎನ್ನುವ ಸುದ್ದಿಯೂ ಇನ್ನೊಂದೆಡೆ ಹರಡಿದೆ. ಇದೇ ಕಾರಣಕ್ಕೆ  ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.  

Tap to resize

Latest Videos

ಶಾರುಖ್​ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'​ಗೆ 21 ದಿನಗಳ ಚಾಲೆಂಜ್​!

ಚಿತ್ರದ ಕಥಾವಸ್ತುವು ರೆಡ್ಡಿಟ್ ಖಾತೆಯ ಮೂಲಕ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ಚಿತ್ರದಲ್ಲಿ, ಕಾಲೇಜಿನಲ್ಲಿ ಹಿಂಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಲಿಂಗಕಾಮಿ ಹುಡುಗನ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ.  ಇದರಿಂದ ಮನನೊಂದ ಕಾಲೇಜು ಪ್ರೊಫೆಸರ್ (ಪಂಕಜ್ ತ್ರಿಪಾಠಿ) ಲೈಂಗಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲು ಪ್ರಯತ್ನಿಸಿರುವುದನ್ನು ತೋರಿಸಲಾಗಿದೆ ಎಂದು ತಿಳಿದುಬರುತ್ತಿದೆ ಎನ್ನಲಾಗಿದೆ. ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ  ಅವತಾರವೆತ್ತಿದ್ದಾರೆ. ಈ ಚಿತ್ರದ  ಟೀಸರ್ ಮೊನ್ನೆ ಬಿಡುಗಡೆ ಮಾಡಲಾಗಿತ್ತು.  ಸಿನಿಮಾದಲ್ಲಿನ ಅಕ್ಷಯ್ ಕುಮಾರ್‍ ಅವರ  ಅವತಾರವನ್ನು ಫ್ಯಾನ್ಸ್‌ ಮೆಚ್ಚಿಕೊಂಡಿದ್ದರು.  ಆದರೆ ಈಗ ಯಾಕೋ ಚಿತ್ರ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಆದರೆ ಟೀಸರ್ ನೋಡಿದ ಫ್ಯಾನ್ಸ್‌, ಟೀಸರ್‌ನಲ್ಲಿ  ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅಂತಿದ್ದಾರೆ.  ಈ ಸಿನಿಮಾದಲ್ಲಿ ಸಲಿಂಗ ಕಾಮಕ್ಕೆ ಸಂಬಂಧಿಸಿದ ಯಾವುದೇ ವಿಷಯ ಇಲ್ಲ. ಜನರು ಗಾಸಿಪ್​ ಹಬ್ಬಿಸುವ ಬದಲು ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಬಿಡುಗಡೆ ಆಗುವ ತನಕ ಕಾಯುವುದು ಉತ್ತಮ ಎಂದೂ ಮೂಲಗಳು ಹೇಳುತ್ತಿವೆ. ಆದರೆ ಚಿತ್ರತಂಡ ಮಾತ್ರ ಏನೂ ಹೇಳದೇ ಗಪ್‌ಚುಪ್‌ ಆಗಿದೆ. 

 ಇತ್ತೀಚೆಗೆ ರಿಲೀಸ್​ ಆದ ‘ಆದಿಪುರುಷ್’ ಸಿನಿಮಾದಲ್ಲಿ ರಾಮಾಯಣವನ್ನು ಮನಬಂದಂತೆ ಚಿತ್ರಿಸಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಹಿನ್ನೆಲೆಯಲ್ಲಿ ಸೆನ್ಸಾರ್​ ಸದಸ್ಯರು ‘ಒಎಂಜಿ 2’ ಚಿತ್ರದ ಪ್ರತಿ ಡೈಲಾಗ್​ ಮತ್ತು ದೃಶ್ಯವನ್ನು ಆಳವಾಗಿ ಪರಿಶೀಲಿಸುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಟ್ರೋಲ್‌ ಆದಷ್ಟೂ ಚಿತ್ರ ಸಕತ್‌ ಓಡುತ್ತದೆ ಎನ್ನುವ ಕಾರಣಕ್ಕೋ ಏನೋ ಅಕ್ಷಯ್‌ ಕುಮಾರ್‌ ಸೇರಿದಂತೆ ಎಲ್ಲರೂ ಮೌನ ವಹಿಸಿದ್ದು, ಚಿತ್ರದ ಮೇಲೆ ಅಭೊಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. 

ವಿಜಯ್​ ದೇವರಕೊಂಡ ಮದ್ವೆಯಾದ್ಮೇಲೆ ಪ್ರೀತಿ, ಪ್ರೇಮ, ರೊಮ್ಯಾನ್ಸ್​ ಹೀಗಿರತ್ತಂತೆ!
 

click me!