ಸತತ ಸೋಲಿನ ಬಳಿಕ ಛತ್ರಪತಿ ಶಿವಾಜಿಯಾಗಿ ಎಂಟ್ರಿ ಕೊಟ್ಟ ಅಕ್ಷಯ್ ಕುಮಾರ್; ರಾಯಲ್ ಲುಕ್ ವೈರಲ್

By Shruthi Krishna  |  First Published Dec 6, 2022, 4:26 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ಮೊದಲ ಮರಾಠಿ ಸಿನಿಮಾದ ಲುಕ್ ರಿಲೀಸ್ ಆಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಆಗಿ ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. 


ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. 2022 ಅಕ್ಷಯ್ ಪಾಲಿಗೆ ನಿರಾಶಾದಾಯಕ ವರ್ಷವಾಗಿದೆ. ಈ ವರ್ಷ ತೆರೆಗೆ ಬಂದ ಕಿಲಾಡಿಯ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿರುವ ಅಕ್ಷಯ್ ಕುಮಾರ್ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಅಕ್ಷಯ್ ಇದೀಗ ಪಕ್ಕದ ಮರಾಠಿ ಚಿತ್ರರಂಗಕ್ಕೆ ಜಂಪ್ ಆಗಿರುವುದು ಹೊಸ ವಿಚಾರವಲ್ಲ. ಮೊದಲ ಬಾರಿಗೆ ಮರಾಠಿಯಲ್ಲಿ ಬಣ್ಣ ಹಚ್ಚುವ ಅಕ್ಷಯ್ ಕುಮಾರ್ ಲುಕ್ ರಿಲೀಸ್ ಆಗಿದೆ.  ಸಿನಿಮಾ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅಕ್ಷಯ್ ಕುಮಾರ್ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ಮರಾಠಿಯಲ್ಲಿ ಅಕ್ಷಯ್ ಕುಮಾರ್  ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಅಕ್ಷಯ್ ಕುಮಾರ್ ಮೊದಲ ಮರಾಠಿ ಸಿನಿಮಾಗೆ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಎಂದು ಟೈಟಲ್ ಇಡಲಾಗಿದೆ. ಸದ್ಯ ಈ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ಮೊದಲ ಲುಕ್ ಶೇರ್ ಮಾಡಿದ್ದಾರೆ. ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮುಂದೆ ಕೈಮುಗಿಯುತ್ತಿರುವ  ಫೋಟೋ ಶೇರ್ ಮಾಡಿದ್ದ ಅಕ್ಷಯ್ ಕುಮಾರ್ ಇದೀಗ ವಿಡಿಯೋ ಹಂಚಿಕೊಂಡಿದ್ದಾರೆ. ಛತ್ರಪತಿ ಶಿವಾಜಿಯಾಗಿ ನಡೆದುಕೊಂಡು ಬರುತ್ತಿರುವ ಅಕ್ಷಯ್ ಕುಮಾರ್ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. 

'ಬೆಲ್ ಬಾಟಮ್' ಪಾಕ್ ವಿರೋಧಿ ಸಿನಿಮಾ; ಪಾಕಿಸ್ತಾನ ವ್ಯಕ್ತಿಯ ಪ್ರಶ್ನೆಗೆ ಅಕ್ಷಯ್ ಕುಮಾರ್ ರಿಯಾಕ್ಷನ್

Tap to resize

Latest Videos

ವಿಡಿಯೋ ಶೇರ್ ಮಾಡಿ ಅಕ್ಷಯ್ ಚಿತ್ರೀಕರಣ ಪ್ರಾರಂಭ ಮಾಡಿದ್ದೀನಿ ಎಂದು ಬಹಿರಂಗ ಪಡಿಸಿದರು. 'ನಾನು ಮರಾಠಿ ಸಿನಿಮಾ  'ವೇದತ್ ಮರಾಠೆ ವೀರ್ ದೌಡಲೆ ಸಾತ್' ಚಿತ್ರೀಕರಣ ಪ್ರಾರಂಭ ಮಾಡಿದೆ. ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದೀನಿ' ಎಂದು ಹೇಳಿದರು.

 
 
 
 
 
 
 
 
 
 
 
 
 
 
 

A post shared by Akshay Kumar (@akshaykumar)

ಲೈಂಗಿಕ ಶಿಕ್ಷಣದ ಬಗ್ಗೆ ಅಕ್ಷಯ್ ಕುಮಾರ್ ಚಿತ್ರ; 'ನನ್ನ ಜೀವನದ ಅತ್ಯುತ್ತಮ ಸಿನಿಮಾವಾಗಲಿದೆ' ಎಂದ ನಟ

ಮರಾಠಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ನವಾಬ್ ಖಾನ್, ಮತ್ತು ಪ್ರವೀಣ್ ತಾರ್ಡೆಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ವಸೀಮ್ ಖುರೇಷಿ ನಿರ್ಮಿಸಿರುವ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಮರಾಠಿ ಮತ್ತು ಹಿಂದಿ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾ 2023ರ ದೀಪಾವಳಿಯಂದು ರಿಲೀಸ್ ಆಗುತ್ತಿದೆ. ಸತತ ಸೋಲು ಕಂಡಿರುವ ಅಕ್ಷಯ್ ಕುಮಾರ್ ಅವರಿಗೆ ಮರಾಠಿ ಸಿನಿಮಾ ಕೈ ಹಿಡಿಯುತ್ತಾ ಕಾದು ನೋಡಬೇಕು.

ಅಕ್ಷಯ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕೊನೆಯದಾಗಿ ರಾಮ್ ಸೇತು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣುವಲ್ಲಿ ವಿಫಲವಾಗಿದೆ. ಈ ವರ್ಷ ಅಕ್ಷಯ್ ಕುಮಾರ್ ನಟನೆಯ 5 ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಯಾವ ಸಿನಿಮಾಗಳು ಸಹ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಮುಂದಿನ ಸಿನಿಮಾಗಳ ಮೇಲೆ ಕುತೂಹಲ  ಹೆಚ್ಚಾಗಿದೆ. 

click me!