ಏನ್ ಲುಕ್ಕು ಗುರೂ! ಪುಷ್ಪ 2 ಟೀಸರ್‌ ರಿಲೀಸ್; ಸೀರೆಯುಟ್ಟು ನಿಂತ ಅಲ್ಲು ಅರ್ಜುನ್

By Suvarna News  |  First Published Apr 8, 2024, 1:21 PM IST

ಇಂದು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬ. ಈ ಪ್ರಯುಕ್ತ ಪುಷ್ಪ 2: ದಿ ರೈಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು ನೋಡುಗರಲ್ಲಿ ರೋಮಾಂಚನ ಮೂಡಿಸುವಷ್ಟು ಅದ್ಬುತವಾಗಿದೆ.
 


ಈ ವರ್ಷದ ಬಲು ನಿರೀಕ್ಷಿತ ಸಿನಿಮಾ ಪುಷ್ಪ 2: ದಿ ರೈಸ್. ಸ್ಯಾಂಡಲ್ ಸ್ಮಗ್ಲರ್ ಪುಷ್ಪಾ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿರುವ ಈ ಸೀಕ್ವೆಲ್ ಚಿತ್ರದ ಟೀಸರನ್ನು ನಟನ ಹುಟ್ಟುಹಬ್ಬವಾದ ಇಂದು(ಏ.8) ಬಿಡುಗಡೆ ಮಾಡಲಾಗಿದೆ.

ಇಲ್ಲಿಯವರೆಗಿನ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿರುವ, ಬರೋಬ್ಬರಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಟೀಸರ್‌ನಲ್ಲಿ ಸೀರೆ ಉಟ್ಟು ನಿಂತ ಅಲ್ಲು ಲುಕ್ ನೋಡಿ 'ಭಯಂಕರ ಮಾರ್ರೆ' ಅಂತಿದಾರೆ ಫ್ಯಾನ್ಸ್.

Tap to resize

Latest Videos

ದೃಷ್ಟಿ ಇಲ್ದಿದ್ರೇನಂತೆ, ದೂರದೃಷ್ಟಿಯಿಂದ 50 ಕೋಟಿ ರೂ. ಕಂಪನಿ ಕಟ್ಟಿದ ಬೊಳ್ಳ
 

ಟೀಸರ್ ಹೇಗಿದೆ?
ಜಾನಪದ ಉತ್ಸವ ಗಂಗಾ ಜಾತ್ರೆಯ ವೈಮಾನಿಕ ದೃಶ್ಯದೊಂದಿಗೆ ಟೀಸರ್ ತೆರೆಯುತ್ತದೆ. ನಂತರ ಪುಷ್ಪನ ಅವತಾರ ಕೆಳಗಿನಿಂದ ಮೇಲೆ ತೋರ್ಸಲಾಗುತ್ತದೆ. ಸೀರೆ ಉಟ್ಟ ಅಲ್ಲು ಅರ್ಜುನ್ ಕಾಲಿಗೆ ದಪ್ಪನೆಯ ಗೆಜ್ಜೆ ಧರಿಸಿ, ಕಿವಿಯಲ್ಲಿ ಸದ್ದು ಮಾಡುವಷ್ಟು ದೊಡ್ಡದಾದ ಜುಮ್ಕಾ ಹಾಕಿಕೊಂಡು, ಕಣ್ಣಿಗೆ ಕಾಜಲ್, ಮುಖದ ತುಂಬಾ ಬಣ್ಣ ಹಚ್ಚಿಕೊಂಡು ಕೈಲಿ ತ್ರಿಶೂಲ ಹಿಡಿದು ಬರುತ್ತಿರೋದನ್ನು ನೋಡ್ತಿದ್ರೆ ಫ್ಯಾನ್ಸ್ 'ಒನ್ ಮೋರ್ ಒನ್ ಮೋರ್' ಎಂದು ಬೆಳ್ಳುಳ್ಳು ಕಬಾಬ್ ಚಂದ್ರು ಶೈಲಿಯಲ್ಲಿ ಹೇಳಿಕೊಂಡು ಮತ್ತೆ ಮತ್ತೆ ನೋಡ್ತಿದಾರೆ. 
ಪುಷ್ಪಾನ ಈ ಅವತಾರ ಭಯಂಕರವಾಗಿದ್ರೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗ್ತಿದೆ ಅಂತಿದಾರೆ ಫ್ಯಾನ್ಸ್.

ಸುಕುಮಾರ್ ನಿರ್ದೇಶನದ ಈ ಚಿತ್ರವು 2021 ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಉತ್ತರಭಾಗವಾಗಿದೆ ಮತ್ತು ಮೊದಲನೆಯದು ಬಿಡುಗಡೆಯಾದಾಗಿನಿಂದ ಮತ್ತು ಅಂತಿಮವಾಗಿ ಯಶಸ್ಸನ್ನು ಸಾಧಿಸಿದಾಗಿನಿಂದ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ. ಈ ಹಿಂದೆ ಬಿಡುಗಡೆಯಾದ ಚಿತ್ರದ ಫಸ್ಟ್ ಲುಕ್ ಮತ್ತು ಪೋಸ್ಟರ್ ಅಗಾಧವಾದ ಬಝ್ ಅನ್ನು ಹುಟ್ಟುಹಾಕಿತ್ತು, ಇದು ಪುಷ್ಪ 2 ಅನ್ನು ವರ್ಷದ ಅತ್ಯಂತ ನಿರೀಕ್ಷಿತ ಭಾರತೀಯ ಚಿತ್ರ ಎಂದು ಕರೆಯಲು ಕಾರಣವಾಗಿತ್ತು.

'9 ಸೈಕೋಪಾತ್‌ಗಳ ಜೊತೆಗಿದ್ದೆ, ಇಲ್ಲಿ ಉಸಿರಾಡೋಕೂ ಹಣ ಚಾರ್ಜ್ ಮಾಡ್ತಾರೆ!' ಬಾಲಿವುಡ್ ಜರ್ನಿ ನೆನೆದ ನೋರಾ ಫತೇಹಿ
 

ಪುಷ್ಪಾದ ಪರಿಚಿತ ಮ್ಯೂಸಿಕ್ ಬ್ಯಾಕ್‌ಗ್ರೌಂಡ್‌ನಲ್ಲಿ ನಾಯಕನು ಗೂಂಡಾಗಳನ್ನು ಬಗ್ಗಿಸಿ ಹೊಡೆಯುತ್ತಾನೆ. ಟೀಸರ್ ಚಿತ್ರದ ಬಗ್ಗೆ ಯಾವುದೇ ಕತೆ ಬಿಟ್ಟುಕೊಡದಿದ್ದರೂ ಅಭಿಮಾನಿಗಳ ಆಸಕ್ತಿಯನ್ನು ಕೆರಳಿಸಿದೆ. ಹೆಚ್ಚಿನ ಅಭಿಮಾನಿಗಳು ಅರ್ಜುನ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಬ್ಯಾಕ್‌ಗ್ರೌಂಡ್ ಸ್ಕೋರ್ ಅನ್ನು ಶ್ಲಾಘಿಸಿದ್ದಾರೆ. ಆದರೆ, ಶೇಖಾವತ್ (ಫಹಾದ್ ಫಾಸಿಲ್ ನಿರ್ವಹಿಸಿದ)ರನ್ನು ಕೂಡಾ ತೋರಿಸಬೇಕಾಗಿತ್ತು ಎಂದು ಕೆಲವರು ಹೇಳಿದ್ದಾರೆ.

ಪುಷ್ಪ: ದಿ ರೈಸ್, ಡಿಸೆಂಬರ್ 2021ರಲ್ಲಿ ಬಿಡುಗಡೆಯಾಯಿತು. ಇದು ಪ್ಯಾನ್-ಇಂಡಿಯಾ ಹಿಟ್ ಆಗಿದ್ದು, ವಿಶ್ವಾದ್ಯಂತ ರೂ 361 ಕೋಟಿ ಗಳಿಸಿತು ಮತ್ತು ಅಲ್ಲು ಅರ್ಜುನ್ ಅವರ ವೃತ್ತಿಜೀವನದಲ್ಲಿ ಅತಿದೊಡ್ಡ ಹಿಟ್ ಆಯಿತು. ಉತ್ತರಭಾಗವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗಿದೆ.
ಈ ಚಿತ್ರದಲ್ಲಿ ಫಹಾದ್, ರಶ್ಮಿಕಾ ಮಂದಣ್ಣ, ಧನಂಜಯ್, ರಾವ್ ರಮೇಶ್, ಸುನಿಲ್ ಮತ್ತು ಅನಸೂಯಾ ಭಾರದ್ವಾಜ್ ಸಹ ನಟಿಸಿದ್ದಾರೆ, ಇವರೆಲ್ಲರೂ ಭಾಗ ಒಂದರಿಂದ ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಿದ್ದಾರೆ. ಈ ಚಿತ್ರವು ಪ್ರಕಾಶ್ ರಾಜ್ ಮತ್ತು ಜಗಪತಿ ಬಾಬು ಅವರಂತಹ ಹೊಸ ನಟರನ್ನು ಕರೆತಂದಿದೆ. ಇದು ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

 

click me!