
ಕೆಲವು ದಿನಗಳ ಹಿಂದೆ ಮೇಘನಾ ರಾಜ್ ಅವರ ಆಪ್ತರಾಗಿರುವ ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಅವರು ನಟಿಯ ಬೆಂಗಳೂರಿನ ಮನೆಗೆ ಭೇಟಿ ನೀಡಿ ಮಾತನಾಡಿದ್ದಾರೆ.
ಅವರು ಮೇಘನಾ ಅವರ ಪೋಷಕರು ಮತ್ತು ಅವರ ಮಗನೊಂದಿಗೆ ಸ್ವಲ್ಪ ಸಮಯವನ್ನು ಕಳೆದರು. ಚಿರಂಜೀವಿ ಸರ್ಜಾ ಅವರು ಜೂನ್ 7, 2020 ರಂದು ನಿಧನರಾದ ನಂತರ ಇದು ಅವರ ಮೊದಲ ಭೇಟಿ.
ಚಿರು-ಮೇಘನಾರ ಹಳೆ ಫೋಟೋ ವೈರಲ್: ನೋಡಿ ಖುಷಿ ಪಟ್ಟ ನಟಿ
ಮೀಟ್-ಅಪ್‌ನಿಂದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ ಮೇಘನಾ. ಬರೆದರು, ಇದನ್ನು ಸ್ವಲ್ಪ ತಡವಾಗಿ ಶೇರ್ ಮಾಡುತ್ತಿದ್ದೇನೆ. ಬಹಳಷ್ಟು ಸಮಯದ ನಂತರ ನಾವು ಕೊನೆಗೂ ಇಂದ್ರು ಅವರನ್ನು ಭೇಟಿಯಾಗುತ್ತಿದ್ದೇನೆ! ಶೀಘ್ರದಲ್ಲೇ ಪೂರ್ಣಿಮಾ ಅವರನ್ನೂ ನೋಡುತ್ತೇನೆ ಎಂದು ಆಶಿಸುತ್ತೇನೆ! ಅದ್ಭುತ ಸಮಯ ಸಿಕ್ಕಿತು.... ಬಿರಿಯಾನಿ ಇಷ್ಟವಾಯಿತು ಎಂದುಕೊಳ್ಳುತ್ತೇನೆ. ಜೂನಿಯರ್ ಚಿರು ನಿಮ್ಮ ಕಂಪನಿಯನ್ನು ಎಂಜಾಯ್ ಮಾಡಿದ ಎಂದು ಬರೆದಿದ್ದಾರೆ.
ಮೇಘನಾ ಮತ್ತು ಇಂದ್ರಜಿತ್ ಸುಕುಮಾರನ್ ಪಾಪ್ಪಿನ್ಸ್, ಅಪ್ & ಡೌನ್: ಮುಗಳಿಲ್ ಒರಾಳುಂಡ್, ಮುಲ್ಲಮೊಟ್ಟುಂ ಮುಂದಿರಿಚಾರುಂ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.