
ತಮ್ಮ ಸಿನಿಮಾ ರಾಮ್ ಸೇತು ಚಿತ್ರೀಕರಣಕ್ಕಾಗಿ ಅಯೋಧ್ಯೆಗೆ ತೆರಳುತ್ತಿರುವ ಅಕ್ಷಯ್ ಕುಮಾರ್ ಅವರು ಗುರುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿದ್ದಾರೆ.
ಅವರ ಭೇಟಿಯ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೂ ಮುನ್ನ ನಟ ತನ್ನ ಸಹನಟಿರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನಸ್ರತ್ ಭರೂಚ್ಚಾ ಅವರೊಂದಿಗೆ ಒಂದು ಫೋಟೋ ಶೇರ್ ಮಾಡಿಕೊಂಡಿದ್ದರು.
ಜೀನ್ಸ್‌ಗೆಷ್ಟು ಕೊಟ್ರೋ, ಮಲೈಕಾ ಕ್ರಾಪ್ ಟಾಪ್‌ಗೆ ಹತ್ರತ್ರ ಅರ್ಧ ಲಕ್ಷ
ಅಲ್ಲಿ ಅವರು ಶೂಟ್‌ಗೆ ಹೊರಡುವ ಮೊದಲು ವಿಮಾನದ ಮೆಟ್ಟಿಲುಗಳ ಮೇಲೆ ಕುಳಿತಿದ್ದರು. ತಂಡವು ಸಿನಿಮಾ ಸೆಟ್‌ನಲ್ಲಿ ಮುಹೂರ್ತ ಪೂಜೆಯನ್ನು ನಡೆಸುವ ಮೂಲಕ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.
ರಾಮ್ ಸೇತು ಸಿನಿಮಾದಲ್ಲಿ ಅಕ್ಷಯ್ ಪುರಾತತ್ವಶಾಸ್ತ್ರಜ್ಞನ ಪಾತ್ರವನ್ನು ಮಾಡಲಿದ್ದಾರೆ. ಜಾಕ್ವೆಲಿನ್ ಮತ್ತು ನುಸ್ರತ್ ಜೊತೆಯಾಗಿ ನಟಿಸುತ್ತಿದ್ದಾರೆ. ವರದಿಗಳ ಪ್ರಕಾರ ಈ ಚಿತ್ರವು ಅಯೋಧ್ಯೆ ಮತ್ತು ಮುಂಬೈನ ಪ್ರಮುಖ ಭಾಗ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.