
ಅಕ್ಕಿನೇನಿ ನಾಗಾರ್ಜುನ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ತಮ್ಮ ಮಗ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಬೇರ್ಪಟ್ಟ ನಂತರ ವಿವಾದದ ಬಗ್ಗೆ ನಾಗಾರ್ಜುನ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರು ಪ್ರಶ್ನಿಸುವ ಮುನ್ನವೇ ಬೇಸರದಿಂದ ಹೊರಬಂದಿದ್ದರು. ಜೊತೆಗೆ ತೆಲುಗು ಬಿಗ್ ಬಾಸ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇವೆಲ್ಲದೆ ಮಧ್ಯೆ ಸಮಂತಾ ತಮ್ಮ ಮಾಜಿ ಮಾವನ ಸ್ಟುಡಿಯೋಗೂ ಬಂದು ಹೋಗಿದ್ದಾರೆ. ಈ ನಡುವೆ ನಾಗಾರ್ಜುನ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರ ನಿರ್ಧಾರದಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಿಸರ್ಗ ಪ್ರೇಮಿಗಳಿಂದ ನಟನಿಗೆ ಪ್ರಶಂಸೆ ಹರಿದುಬರುತ್ತಿದೆ.
ರಾಜ್ಯ ವಿಧಾನಸಭೆ ಸದಸ್ಯ ಸಂತೋಷ ಜೋಗನಪಳ್ಳಿ ಅವರಿಗೆ ಮರಗಳ ಮೇಲೆ ಅಪಾರ ಪ್ರೀತಿ. ಮರಗಳನ್ನು ಉಳಿಸಲು ಮತ್ತು ಬೆಳೆಸಲು ಅವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅವರ ಪರಿಚಯ ಅನೇಕರಿಗೆ ಚಿರಪರಿಚಿತ. ಗ್ರೀನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿ 16 ಕೋಟಿ ಗಿಡಗಳನ್ನು ನೆಟ್ಟಿದ್ದಾರೆ. ಈ ಅದ್ಭುತ ಕೆಲಸಕ್ಕೆ ಅವರು ಸಾಕಷ್ಟು ಸೆಲೆಬ್ರಿಟಿಗಳನ್ನು ಸೇರಿಸಿದ್ದಾರೆ. ಇದೀಗ ಆ ಸಾಲಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದಾರೆ.
ಮಾವ ನಾಗಾರ್ಜುನ ಸೊಸೆ ಸಮಂತಾಗೆ ಕೊಟ್ಟ ಗಿಫ್ಟ್ ಏನು ?
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಂತೋಷ್ ತೆಲುಗು ಬಿಗ್ ಬಾಸ್ ವೇದಿಕೆಗೆ ಏರಿದರು. 1643 ಎಕರೆ ಅರಣ್ಯವನ್ನು ದತ್ತು ಪಡೆದಿರುವುದಾಗಿ ಸಂತೋಷ್ ಪ್ರಭಾಸ್ ಗೆ ತಿಳಿಸಿದರು. ನಾಗಾರ್ಜುನ ನಿಜಕ್ಕೂ ಖುಷಿಯಾದರು. ಇದೇ ವೇಳೆ ಅವರು 1,000 ಎಕರೆ ಅರಣ್ಯವನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಹೀಗಾಗಿ ಅರಣ್ಯಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ. ನಾನೀಗ ಕಾಡಿನ ಪೋಷಣೆಯ ಹೊಣೆ ಹೊತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಮತ್ತು ಸಂತೋಷ್ ನಿಜಕ್ಕೂ ಖುಷಿಯಾಗಿದ್ದಾರೆ. ನಾಗಾರ್ಜುನ ತೆಗೆದುಕೊಂಡ ಈ ನಿರ್ಧಾರದಿಂದ ಹಲವರು ಸ್ಫೂರ್ತಿಗೊಂಡಿದ್ದಾರೆ.
ಮಾವ-ಸೊಸೆಯ ಗ್ರೀನ್ ಇಂಡಿಯಾ ಚಾಲೆಂಜ್
ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ತನ್ನ ಮಾವ ನಾಗಾರ್ಜುನ ಜೊತೆಗೂಡಿ ಮೂರು ಸಸಿಗಳನ್ನು ನೆಟ್ಟರು. ಅವರು ನಟಿಯರಾದ ಕೀರ್ತಿ ಸುರೇಶ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಚಾಲೆಂಜಿಗೆ ನಾಮಿನೇಟ್ ಮಾಡಿದ್ದರು.ಫೋಟೋ-ಶೇರಿಂಗ್ ಆಪ್ ಇನ್‌ಸ್ಟಾಗ್ರಾಮ್‌ನಲ್ಲಿ 'ನಾನು ನಾಗ್ ಮಾಮಾನಿಂದ #HaraHaiTohBharaHai #GreenindiaChallenge ಚಾಲೆಂಜ್ ಸ್ವೀಕರಿಸಿದ್ದೇನೆ. ನಾನು 3 ಸಸಿಗಳನ್ನು ನೆಟ್ಟಿದ್ದೇನೆ. ಇದಲ್ಲದೆ @Kerthysureshofficial @rashmika_mandanna @ shilpareddy ರನ್ನು ನಾಮಿನೇಟ್ ಮಾಡುತ್ತಿದ್ದೇನೆ. ಈ ಕ್ರಮವನ್ನು ಕೈಗೊಂಡಿದ್ದಕ್ಕಾಗಿ @MPsantoshtrs ಗುರುಗೆ ವಿಶೇಷ ಧನ್ಯವಾದಗಳು' ಎಂದು ಪೋಸ್ಟ್ ಮಾಡಿದ್ದರು ನಟಿ ಸಮಂತಾ.
ಸಮಂತಾ ಕುರಿತು ವಿಶೇಷ ಅಕ್ಕರೆ ತೋರಿಸೋ ನಾಗಾರ್ಜುನ ಅವರೂ ಮಗ ಹಾಗೂ ಸೊಸೆಯ ವಿಚ್ಚೇದನೆ ಬಗ್ಗೆ ಹಚ್ಚೇನು ಮಾತನಾಡಿಲ್ಲ. ಇವರಿಬ್ಬರ ನಡುವೆ ಹೆಚ್ಚಿನ ಎಟ್ಯಾಚ್‌ಮೆಂಟ್ ಇತ್ತು. ಸಮಂತಾ ಮಾವ ಹಾಗೂ ಮಾಜಿ ಪತಿಯೊಂದಿಗು ಹಲವು ಸಿನಿಮಾಗಳನ್ನು ಮಾಡಿ ವೀಕ್ಷಕರ ಮನ ಗೆದ್ದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.