Shyam Singha Roy: ಟ್ರೇಲರ್ ರಿಲೀಸ್ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಟ್ವೀಟ್!

By Suvarna NewsFirst Published Dec 13, 2021, 6:14 PM IST
Highlights

ಟಾಲಿವುಡ್ ನಟ ನ್ಯಾಚುರಲ್ ಸ್ಟಾರ್ ನಾನಿ 'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ನಟಿಸುತ್ತಿದ್ದು,ಈ ಸಿನಿಮಾಕ್ಕೋಸ್ಕರ ನಾನಿ ಅವರು ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದಾರೆ. ಇದೀಗ ಚಿತ್ರಕ್ಕೆ ಸಂಬಂಧಪಟ್ಟಂತೆ ನಾನಿ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
 

ಟಾಲಿವುಡ್ (Tollywood) ನಟ ನ್ಯಾಚುರಲ್ ಸ್ಟಾರ್ ನಾನಿ (Nani) 'ಶ್ಯಾಮ್ ಸಿಂಗಾ ರಾಯ್' (Shyam Singha Roy) ಚಿತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಫಸ್ಟ್‌ಲುಕ್, ಟೀಸರ್ ಹಾಗೂ ಹಾಡುಗಳಿಂದ ಸಿನಿಮಂದಿಯ ಗಮನ ಸೆಳೆದಿದೆ. ಈ ಸಿನಿಮಾಕ್ಕೋಸ್ಕರ ನಾನಿ ಅವರು ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದು, ಎರಡು ಶೇಡ್​ಗಳಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರಕ್ಕೆ ಸಂಬಂಧಪಟ್ಟಂತೆ ನಾನಿ ಸಾಮಾಜಿಕ ಜಾಲತಾಣದಲ್ಲಿ (Social Media) ಸ್ಪೆಷಲ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟರ್ (Twitter) ಖಾತೆಯಲ್ಲಿ ಡಿಸೆಂಬರ್ 14ರಂದು ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗುತ್ತಿದ್ದು, ಕ್ರಿಸ್‌ಮಸ್‌ ಹಬ್ಬದಂದು 'ಶ್ಯಾಮ್ ಸಿಂಗಾ ರಾಯ್' ಚಿತ್ರ ರಿಲೀಸ್ ಆಗಲಿದೆ ಎಂದು ಟ್ವೀಟ್ (Tweet) ಮಾಡಿದ್ದಾರೆ.

ಇತ್ತೀಚೆಗೆ  ಚಿತ್ರದ ಮೊದಲ ಲಿರಿಕಲ್ ಸಾಂಗ್ 'ತಿಳಿ ಗಾಳಿಯ ಪಿಸು ಮಾತಿನ' (Thili Gaaliya) ಎಂಬ ಲವ್ ಸಾಂಗ್ ಬಿಡುಗಡೆಯಾಗಿ ಒಳ್ಳೆಯ ಮೆಚ್ಚುಗೆಯನ್ನು ಪಡೆದಿತ್ತು. ಸ್ಯಾಂಡಲ್‌ವುಡ್‌ನ ಹೆಸರಾಂತ ಗೀತ ರಚನೆಕಾರ ಕವಿರಾಜ್ (Kaviraj) ಅವರು ಹಾಡಿಗೆ ಸಾಹಿತ್ಯ ರಚಿಸಿದ್ದರು. ಈ ಹಾಡಿಗೆ ಮಿಕ್ಕಿ ಜೆ ಮೆಯರ್ (Mickey J Meyer) ಸಂಗೀತ ಸಂಯೋಜಿಸಿದ್ದು, ಗಾಯಕ ನಕುಲ್ ಅಭಯಂಕರ್ (Nakul Abhyankar) ದನಿಯಾಗಿದ್ದರು. ಈ ಲಿರಿಕಲ್ ವಿಡಿಯೋದಲ್ಲಿ ನಾನಿ ಹಾಗೂ ಸಾಯಿ ಪಲ್ಲವಿ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿತ್ತು. ಮುಖ್ಯವಾಗಿ ಇತ್ತೀಚೆಗೆ ನಿಧನರಾದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿಗಳು (Sirivennela Seetharama Sastry) ಕೊನೆಯದಾಗಿ ಈ ಹಾಡಿಗೆ ತೆಲುಗಿನಲ್ಲಿ ಸಾಹಿತ್ಯ ಬರೆದಿದ್ದರು.

Shyam Singha Roy: ನ್ಯಾಚುರಲ್ ಸ್ಟಾರ್ ನಾನಿ-ಸಾಯಿ ಪಲ್ಲವಿ ಕಾಂಬಿನೇಷನ್‌ನ ಲವ್ ಸಾಂಗ್ ರಿಲೀಸ್

ಸಸ್ಪೆನ್ಸ್ ಥ್ರಿಲ್ಲರ್‌ನ ಈ ಚಿತ್ರಕ್ಕೆ ಸತ್ಯದೇವ್ ಜಂಗ (Satyadev Janga) ಕಥೆ ಬರೆದಿದ್ದು, ನಿಹಾರಿಕಾ ಎಂಟರ್ಟೈನ್‌ಮೆಂಟ್ (Niharika Entertainment) ಬ್ಯಾನರ್‌ನಡಿಯಲ್ಲಿ ಸಿನಿಮಾ ತಯಾರಾಗಿದೆ. ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಹಾಗೂ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ವಿಶೇಷವಾಗಿ ಬಂಗಾಳಿ ನೆಲದಲ್ಲಿ ನಡೆಯುವ ಈ ಕತೆಗೆ ನಾನಿ ಬಂಗಾಳಿ ಸಂಭಾಷಣೆ ಹೇಳಿರುವ ತುಣುಕು ಇತ್ತೀಚೆಗೆ ಬಿಡುಗಡೆಯಾದ ಟೀಸರ್​ನಲ್ಲಿದ್ದು, ಅವರ ಸ್ಪಷ್ಟತೆಗೆ ವೀಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. 

Shyam Singha Roy ಟೀಸರ್ ರಿಲೀಸ್: ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ನಾನಿ

ಈ ಹಿಂದೆ 'ದಿ ಎಂಡ್' ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಟ್ಯಾಕ್ಸಿವಾಲಾ' ಸಿನಿಮಾಗಳನ್ನು ನಿರ್ದೇಶಿಸಿದ್ದ ರಾಹುಲ್ ಸಂಕ್ರಿತ್ಯಾನ್ (Rahul Sankrithyan) 'ಶ್ಯಾಮ್ ಸಿಂಗಾ ರಾಯ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಟ್ ಬೋಯನಪಲ್ಲಿ (Venkat Boyanapalli) ಚಿತ್ರವನ್ನು ನಿರ್ಮಿಸಿದ್ದು, 2017ರಲ್ಲಿ ತೆರೆಕಂಡ 'ಮಿಡಲ್ ಕ್ಲಾಸ್ ಅಬ್ಬಾಯ್' ಚಿತ್ರದ ನಂತರ ಈ ಚಿತ್ರದಲ್ಲಿ ನಾನಿ ಜೊತೆಗೆ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಅವರೊಂದಿಗೆ ಕೃತಿ ಶೆಟ್ಟಿ (Krithi Shetty), ಮಡೋನ್ನಾ ಸೆಬಾಸ್ಟಿಯನ್ (Madonna Sebastian), ಮುರಳಿ ಶರ್ಮಾ, ಅಭಿನವ್ ಗೋಮತಮ್, ರಾಹುಲ್ ರವೀಂದ್ರನ್ ಕೂಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ಚಿತ್ರ ಬಿಡುಗಡೆಯಾಗುತ್ತಿದೆ.
 

Let’s begin
Trailer Tomorrow ♥️
Christmas Maathram …… :) pic.twitter.com/DPxh1xereq

— Nani (@NameisNani)
click me!