ಬಾಲಿವುಡ್ ನಟಿ ನರ್ಗಿಸ್ ಫಾಖ್ರಿ ಸಹೋದರಿ ಬಂಧನ, ಮಾಜಿ ಬಾಯ್‌ಫ್ರೆಂಡ್ ಹತ್ಯೆಗೈದ ಆರೋಪ!

Published : Dec 02, 2024, 09:25 PM IST
ಬಾಲಿವುಡ್ ನಟಿ ನರ್ಗಿಸ್ ಫಾಖ್ರಿ ಸಹೋದರಿ ಬಂಧನ, ಮಾಜಿ ಬಾಯ್‌ಫ್ರೆಂಡ್ ಹತ್ಯೆಗೈದ ಆರೋಪ!

ಸಾರಾಂಶ

ಮಾಜಿ ಬಾಯ್‌ಪ್ರೆಂಡ್ ಹತ್ಯೆಗೈದ ಆರೋಪದಡಿ ಬಾಲಿವುಡ್ ನಟಿ ನರ್ಗಿಸ್ ಫಾಕ್ರಿ ಸಹೋರಿಯ ಬಂಧನವಾಗಿದೆ. ಮಾಜಿ ಬಾಯ್‌ಫ್ರೆಂಡ್ ಇದ್ದ ಮನೆಗೆ ಬೆಂಕಿ ಹಚ್ಚಿ ಹತ್ಯೆಗೈದ ಆರೋಪ ಈಕೆ ಮೇಲಿದೆ.  

ನ್ಯೂಯಾರ್ಕ್(ಡಿ.02) ರಾಕ್‌ಸ್ಟಾರ್ ಗರ್ಲ್ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ನಗ್ರಿಸ್ ಫಾಖ್ರಿ ಇದೀಗ ಭಾರಿ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ತಮ್ಮ ಸಿನಿಮಾ ಅಥವಾ ಕರಿಯರ್‌ನಿಂದ ಅಲ್ಲ. ಬದಲಾಗಿದೆ. ನರ್ಗಿಸ್ ಸಹೋದರಿ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಲಿವುಡ್ ನಟಿ ನರ್ಗಿಸ್ ಫಾಖ್ರಿ ಸಹೋದರಿ ಆಲಿಯಾ ಫಾಖ್ರಿ ಅರೆಸ್ಟ್ ಆಗಿದ್ದಾರೆ. ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಡಿ ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದಾರೆ.

ಹತ್ಯೆ ಕುರಿತು ನ್ಯೂಯಾರ್ಕ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದಾರೆ. ಈ ವೇಳೆ ಅಲಿಯಾ ಫಾಖ್ರಿ ಕೈವಾಡವಿರುವುದು ಪತ್ತೆಯಾಗಿದೆ. ಹೀಗಾಗಿ ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದರೆ. ಬಂಧನ ಬಳಿಕ ಅಲಿಯಾ ಫಾಖ್ರಿಯನ್ನು ಕ್ರಿಮಿನಲ್ ಕೋರ್ಟ್‌ಗೆಹಾಜರು ಪಡಿಸಿದ್ದಾರೆ. ಜಿಲ್ಲಾ ಅಟಾರ್ನಿ ಮಿಲಿಂಡಾ ಕಟ್ಜ್, ಅಲಿಯಾ ಫಾಖ್ರಿಗೆ ಜಾಮೀನು ನೀಡಲು ನಿರಾಕರಿಸಿದ್ದರೆ. ಇಬ್ಬರು ಅಮಾಯಕರನ್ನು ಅಪಾಯದಲ್ಲಿ ಸಿಲುಕಿಸಿ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಆರೋಪ ಈಕೆಯ ಮೇಲಿದೆ. ಇದು ಗಂಭೀರ ಪ್ರಕರಣವಾಗಿದ್ದು, ಜಾಮೀನು ನಿರಾಕರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ನ್ಯೂಯಾರ್ಕ್‌ನಲ್ಲಿರುವ ಆಲಿಯಾ ಫಾಖ್ರಿ ಮಾಜಿ ಗೆಳೆಯನಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಆಲಿಯಾ ಫಾಖ್ರಿ ಹಾಗೂ ಬಾಯ್‌ಫ್ರೆಂಡ್ ಸಂಬಂಧ ಗಾಢವಾಗುತ್ತಿದ್ದಂತೆ ಇವರಿಬ್ಬರ ಮಧ್ಯೆ ಮತ್ತೊಬ್ಬಳು ಎಂಟ್ರಿಯಾಗಿದ್ದಳು. ಹೀಗಾಗಿ ಬಾಯ್‌ಫ್ರೆಂಡ್ ಅಲಿಯಾಳಿಂ ದೂರವಾಗಿದ್ದ. ಆದರೆ ಇದನ್ನು ಅಲಿಯಾಗೆ ಸಹಿಸಲು ಸಾಧ್ಯವಾಗದೆ ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಹತ್ಯೆ ಮಾಡಿದ್ದಾಳೆ ಅನ್ನೋ ಆರೋಪ ಎದುರಿಸುತ್ತಿದ್ದಾರೆ.

ತನ್ನಿಂದ ದೂರವಾದ ಕಾರಣದಿಂದ ಆಕ್ರೋಶಗೊಂಡಿದ್ದ ಆಲಿಯಾ ಫಾಖ್ರಿ, ಮಾಜಿ ಬಾಯ್‌ಫ್ರೆಂಡ್ ವಾಸವಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಕೆಳಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದಾಳೆ. ದಟ್ಟ ಹೊಗೆ, ಗ್ಯಾಸೋಲಿನ್ ಹಾಗೂ ಸುಟ್ಟ ಗಾಯಗಳಿಂದ ಆಲಿಯಾ ಫಾಖ್ರಿ ಮಾಜಿ ಬಾಯ್‌ಪ್ರೆಂಡ್ ಹಾಗೂ ಆತನ ಗೆಳತಿ ಇಬ್ಬರು ಮೃತಪಟ್ಟಿದ್ದಾರೆ. 

ಸ್ಥಲೀಯರು ಆಲಿಯಾ ಫಾಖ್ರಿ ವಿರುದ್ಧ ಸಾಕ್ಷಿ ಹೇಳಿದ್ದಾರೆ. ಮಾಜಿ ಬಾಯ್‌ಪ್ರೆಂಡ್ ಮನೆಗೆ ಆಗಮಿಸುತ್ತಿದ್ದ ಅಲಿಯಾ ಫಾಖ್ರಿ ಸಂಬಂಧ ಬಿರುಕು ಬಿಟ್ಟ ಬಳಿಕ ಆಗಮಿಸಿ ರಂಪಾಟ ಮಾಡಿದ್ದರು ಎಂದಿದ್ದಾರೆ. ಈ ವೇಳೆ ತನಗೆ ಮೋಸ ಮಾಡಿದ ಗೆಳೆಯನ ಸುಮ್ಮನೆ ಬಿಡುವುದಿಲ್ಲ ಎಂದಿದ್ದರು. ಈ ಮನೆಗೆ ಬೆಂಕಿ ಹಚ್ಚಿ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಘಟನೆ ಕುರಿತು ನರ್ಗಿಸ್ ಫಾಕ್ರಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಆಲಿಯಾ ಫಾಖ್ರಿ ಯಾರನ್ನು ಕೊಲ್ಲುವ ಮನಸ್ಥಿತಿ ಇರುವ ಹುಡುಗಿಯಲ್ಲ. ಆಕೆ ಎಲ್ಲರನ್ನೂ ಪ್ರೀತಿಸುತ್ತಾಳೆ. ಎಲ್ಲರಿಗೂ ತನ್ನ ಕೈಲಾದ ಸಹಾಯ ಮಾಡುತ್ತಾಳೆ. ಈ ಪ್ರಕರಣದಲ್ಲಿ ನನ್ನ ಮಗಳನ್ನು ಸಿಲುಕಿಸಿರುವ ಸಾಧ್ಯತೆ ಇದೆ ಎಂದು ತಾಯಿ ಹೇಳಿದ್ದಾರೆ. ಆಲಿಯಾ ಫಾಕ್ರಿಗೆ ದಂತ ಶಸ್ತ್ರಚಿಕಿತ್ಸೆ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಆದರೆ ಯಾರನ್ನೂ ನೋಯಿಸುವ ಮನಸ್ಥಿತಿಹೊಂದಿಲ್ಲ ಎಂದು ತಾಯಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಕುರಿತು ನರ್ಗಿಸ್ ಫಾಖ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?