ಕೊನೆಗೂ 200 ಕೋಟಿ ಕ್ಲಬ್ ಸೇರಿದ 'ದೃಶ್ಯಂ-2'; ಹೆಚ್ಚು ಕಲೆಕ್ಷನ್ ಮಾಡಿದ ಅಜಯ್ ದೇವಗನ್ 3ನೇ ಸಿನಿಮಾ

By Shruthi KrishnaFirst Published Dec 11, 2022, 10:26 AM IST
Highlights

ಅಜಯ್ ದೇವಗನ್ ನಟನೆಯ ದೃಶ್ಯಂ-2 ಸಿನಿಮಾ ಕೊನೆಗೂ 200 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಅಜಯ್ ದೇವನ್ ನಟನೆಯ 3ನೇ ಸಿನಿಮಾ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

2022, ಬಾಲಿವುಡ್‌ಗೆ ಪಾಲಿಗೆ ಭಾರಿ ನಿರಾಸೆಯ ವರ್ಷವಾಗಿದೆ. ಈ ವರ್ಷ ಹಿಂದಿ ಸಿನಿಮಾಗಳ ಯಶಸ್ಸು ತುಂಬಾ ಕಡಿಮೆ. ಸ್ಟಾರ್ ಕಲಾವಿದರು, ಬಿಗ್ ಬಜೆಟ್ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕೆಲವೇ ಕೆಲವು ಸಿನಿಮಾಗಳಲ್ಲಿ ಅಜಯ್ ದೇವಗನ್ ನಟನೆಯ ದೃಶ್ಯಂ-2 ಕೂಡ ಒಂದು. ದೃಶ್ಯಂ-2 ರಿಲೀಸ್ ಆಗಿ 23 ದಿನಕ್ಕೆ ಬರೋಬ್ಬರಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸತತ ಸೋಲಿನ ಸುಳಿಯಲ್ಲಿದ್ದ ಬಾಲಿವುಡ್‌ಗೆ ದೃಶ್ಯಂ-2 ಗೆಲುವು ಸಂತಸ ತಂದಿದೆ. ದೃಶ್ಯಂ-2 ಬಿಡುಗಡೆ ನಂತರ ಬಂದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ಆದರೆ ಅಜಯ್ ದೇವಗನ್ ಸಿನಿಮಾ ಹಿಂದಿ ಅಭಿಮಾನಿಗಳ ಹೃದಯ ಗೆದ್ದಿದೆ. ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್ ಆದರೂ ಸಹ ಹಿಂದಿಯಲ್ಲಿ ವರ್ಕೌಟ್ ಆಗಿರುವುದು ಅಚ್ಚರಿ ಮೂಡಿಸಿದೆ. 

ಅಜಯ್ ದೇವನ್ ನಟನೆಯ ದೃಶ್ಯಂ-2 23ನೇ ದಿನ 4.10 ಕೋಟಿ ರೂಪಾಯಿ ಗಳಿಕೆ ಮಾುವ ಮೂಲಕ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸಿನಿಮಾ ಬಿಡುಗಡೆಯಾದಾಗಿನಿಂದ ಉತ್ತಮ ಕಲೆಕ್ಷನ್ ಮಾಡುತ್ತಲ್ಲೇ ಬಂದಿದ್ದ ದೃಶ್ಯಂ-2 ಕೊನೆಗೂ 200 ಕೋಟಿಯ ಗಡಿ ದಾಟಿದ್ದು ಸಿನಿಮಾತಂಡಕ್ಕೆ ಹಾಗೂ ಬಾಲಿವುಡ್‌ಗೆ ಸಂತಸದ ವಿಚಾರವಾಗಿದೆ. 

ಅಜಯ್‌ ದೇವಗನ್‌ ಕೋಟಿಗಟ್ಟಲೆ ಆಸ್ತಿ ಮಾಡಿದ್ದು ಹೇಗೆ ಗೊತ್ತಾ?

ಅಂದಹಾಗೆ ಅಜಯ್ ದೇವಗನ್ ನಟನೆಯ ಮೂರನೇ ಸಿನಿಮಾ 200 ಕೋಟಿ ಕ್ಲಬ್ ಸೇರಿದೆ. ಅಜಯ್ ದೇವಗನ್ ನಟಿಸಿದ್ದ ಸಿನಿಮಾಗಳಲ್ಲಿ ಕೇವಲ 3 ಸಿನಿಮಾಗಳು ಮಾತ್ರ 200 ಕೋಟಿಯ ಗಡಿ ದಾಟುವಲ್ಲಿ ಯಶಸ್ವಿಯಾಗಿವೆ. ಗೋಲ್ಮಾಲ್ ಎಗೇನ್, ತನ್ಹಾಜಿ ಮತ್ತು ದೃಶ್ಯಂ-2 ಸಿನಿಮಾಗಳು. ದೃಶ್ಯಂ-2 ಸಿನಿಮಾ 125 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಅವತಾರ್-2 ರಿಲೀಸ್‌ಗೆ ಒಂದು ವಾರ ಮಾತ್ರ ಬಾಕಿ ಇದೆ. 

ಶ್ರಿಯಾ ಸರನ್ ಬಾಲಿವುಡ್ ವೃತ್ತಿಜೀವನದ ಯಶಸ್ಸಿಗೆ ಅಜಯ್ ದೇವಗನ್ ಕಾರಣ

ದೃಶ್ಯಂ ಮಲಯಾಳಂನ ಸೂಪರ್ ಹಿಟ್ ಸಿನಿಮಾ. 2014ರಲ್ಲಿ ಮೊದಲ ಭಾಗ ರಿಲೀಸ್ ಆಗಿತ್ತು. ಈ ಸಿನಿಮಾ ಸೌತ್‌ನಲ್ಲಿ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಮೇಕ್ ಆಗಿ ಬಿಡುಗಡೆ ಆಗಿತ್ತು. ಪಾರ್ಟ್-2 ಕೂಡ ಅಷ್ಟೇ ದೊಡ್ಡ ಮಟ್ಟದಲ್ಲ ಸಕ್ಸಸ್ ಆಗಿದೆ. ಹಿಂದಿಯಲ್ಲಿ ಅಜಯ್ ದೇವಗನ್, ಶ್ರೀಯಾ ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಅನೇಕ ಸಿನಿಮಾಗಳು ಹಿಂದಿಗೆ ರಿಮೇಕ್ ಆಗಿವೆ ಮತ್ತು ಈಗಲೂ ಆಗುತ್ತಿವೆ. ಸದ್ಯ ದೃಶ್ಯಂ-2ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮೂಲಕ ಹಿಂದಿ ಸಿನಿಮಾರಂಗ ಒಂದು ಹಿಟ್ ಸಿನಿಮಾದೊಂದಿಗೆ  ಈ ವರ್ಷವನ್ನು ಬೀಳ್ಕೊಡುತ್ತಿದೆ. ಮುಂದಿನ ವರ್ಷವಾದರೂ ಹಿಂದಿ ಸಿನಿಮಾಗಳು ಅಭಿಮಾನಿಗಳನ್ನು ಸೆಳೆಯುತ್ತಾ ಕಾದು ನೋಡಬೇಕು.  

click me!