
ಸೌತ್ ಮತ್ತು ನಾರ್ತ್ ಎರಡೂ ಕಡೆ ಸಲ್ಲುತ್ತಿರುವ ನಟಿ ಪೂಜಾ ಹೆಗಡೆ (Pooja Hegde) ಸಂದರ್ಶನವೊಂದರಲ್ಲಿ ತಮ್ಮ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ನಿರೂಪಕಿ ಜತೆ ಮಾತನಾಡುತ್ತ ಪೂಜಾ ಹೆಗಡೆ 'ನನಗೆ ಬಾರ್ಗೇನಿಂಗ್ ಮಾಡಲು ಬರುವುದೇ ಇಲ್ಲ. ನಾನು ಬಾರ್ಗೇನಿಂಗ್ ಮಾಡುವುದರಲ್ಲಿ ತುಂಬಾ ವೀಕ್' ಎಂದಿದ್ದಾರೆ. ಶಾಪಿಂಗ್ ಹೋದರೆ ಅಂಗಡಿಯವರು ಹೇಳಿದಷ್ಟನ್ನು ಕೊಟ್ಟು ಖರೀದಿ ಮಾಡಿಕೊಂಡು ಬರುತ್ತಿದ್ದರಂತೆ ಪೂಜಾ ಹೆಗಡೆ. ಆದರೆ ಈಗ ಹಾಗಿಲ್ಲ ಎನ್ನಬಹುದು. ಏಕೆಂದರೆ, ಅದಕ್ಕೊಂದು ಪರ್ಯಾಯ ಕಂಡುಕೊಂಡಿದ್ದಾರೆ ಪೂಜಾ.
ನಟಿ ಪೂಜಾ ಹೆಗಡೆ ಈ ಬಗ್ಗೆ ಮಾತನಾಡುತ್ತ 'ನಾನು ಶಾಪಿಂಗ್‌ಗೆ ಹೋದರೆ ನಾನು ಯಾವತ್ತೂ ಬಾರ್ಗೆನಿಂಗ್ ಮಾಡುತ್ತಿರಲಿಲ್ಲ. ಅಂಗಡಿಯವರು 200 ರೂಪಾಯಿಗಳು ಎಂದರೆ ಅಷ್ಟನ್ನೇ ಕೊಟ್ಟು ಬರುತ್ತಿದ್ದೆ. ನನಗೆ ಬಾರ್ಗೇನಿಂಗ್ ಮಾಡುವುದೇ ಗೊತ್ತಿರಲಿಲ್ಲ. ಆದರೆ ನನ್ನ ಫ್ರೆಂಡ್ ಮಿಟ್ಟಿ ಚೌಕಾಸಿ ಮಾಡುವುದರಲ್ಲಿ ಎತ್ತಿದ ಕೈ. ಆಕೆಯೇ ನನಗೆ ಹೇಳಿದ್ದು, ನಾನು ಬಾರ್ಗೇನಿಂಗ್ ಮಾಡದಿದ್ದರೆ ಮೋಸ ಹೋಗುತ್ತೇನೆ' ಎಂದು. ನಾನು ಅವಳನ್ನು ಒಮ್ಮೆ ಶಾಪಿಂಗ್ ಮಾಡಲು ಹೋಗುವಾಗ ಕರೆದುಕೊಂಡು ಹೋದೆ. ಅವಳು ಯಾವ ರೀತಿಯಲ್ಲಿ ಹೇಗೆ ಮಾತನಾಡುತ್ತಾಳೆ ಎಂಬುದನ್ನು ನೋಡಿ ತಿಳಿದುಕೊಂಡೆ.
ಉತ್ತರದ ಅಂಗಳದಲ್ಲಿ ಕುಳಿತು 'ಕೆಜಿಎಫ್' ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತು ಕೇಳಿ ಹೌಹಾರಿದೆ ಜಗತ್ತು!
ಆದರೂ ಕೂಡ ನನ್ನ ಸ್ನೇಹಿತೆ ರೀತಿ ನನಗೆ ಬಾರ್ಗೇನಿಂಗ್ ಮಾಡಲು ಬರುತ್ತಿರಲಿಲ್ಲ. ಅದಕ್ಕಾಗಿ ನಾನೊಂದು ಐಡಿಯಾ ಮಾಡಿದೆ. 'ನಾನು ಶಾಪಿಂಗ್ ಹೋಗುವಾಗ ಅವಳನ್ನೇ ಕರೆದುಕೊಂಡು ಹೋಗಲು ಪ್ರಾರಂಭಿಸಿದೆ. ನನಗೆ ಅಚ್ಚರಿಯಾಯಿತು. 200 ರೂಪಾಯಿ ಐಟಮ್ ಅನ್ನು ಆಕೆ 50 ರೂಪಾಯಿಗೆ ಕೊಡುವಂತೆ ಕೇಳಿದಳು. ನಾನು ಶಾಕ್ ಆಗಿ ಬಾಯಿಬಾಯಿ ಬಿಡುತ್ತಿದ್ದಂತೆ ಆಕೆ, ಸುಮ್ಮನಿರು, ಇನ್ನೂ ಸ್ವಲ್ಪವೇ ಹೆಚ್ಚಿನ ರೇಟಿಗೆ ಕೊಡುತ್ತಾರೆ ಎಂದಳು. ಆಕೆ ಹೇಳಿದಂತೆ ಶಾಪ್‌ನವರು ನಮಗೆ 80 ರೂಪಾಯಿಗೇ ಅದನ್ನು ಕೊಟ್ಟರು. ನನ್ನ ಸ್ನೇಹಿತೆ ಜಾಗದಲ್ಲಿ ನಾನು ಇದ್ದರೆ ನಾನು ಅದೇ ಐಟಮ್‌ಗೆ 200 ರೂಪಾಯಿಯನ್ನೇ ಕೊಟ್ಟು ಬರುತ್ತಿದ್ದೆ' ಎಂದಿದ್ದಾರೆ ನಟಿ ಪೂಜಾ ಹೆಗಡೆ.
ಸ್ಟಾರ್ ನಟಿ ಸಿನಿಮಾ ನಟನೆಗೂ ಮೊದಲು ಯಾಕೆ ನೆಲದ ಮೇಲಿನ ವಾಂತಿ ಒರೆಸಿದ್ದರು, ಕಸ ಗುಡಿಸಿದ್ದರು?
ಅಂದಹಾಗೆ, ಪೂಜಾ ಹೆಗಡೆ ಸೌತ್ ಸಿನಿಮಾ, ನಾರ್ತ್ ಸಿನಿಮಾ ಎಂಬ ಭೇದಭಾವ ಇಲ್ಲದೇ ನಟನೆ ಮಾಡುತ್ತಿದ್ದಾರೆ. ಸೌತ್ ನಟ ಪ್ರಭಾಸ್ ನಾಯಕತ್ವದ ಬಾಲಿವುಡ್ ಸಿನಿಮಾ 'ರಾಧೆ ಶ್ಯಾಮ್' ಚಿತ್ರದಲ್ಲಿ ನಟಿಸಿದ್ದ ಪೂಜಾ, ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ನಾಯಕತ್ವದ 'ಮಹರ್ಷಿ' (Maharshi) ಹಾಗೂ ಗುಂಟೂರು ಖಾರಂ' (Gunturu Kharam) ತೆಲುಗು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯ ಸಾಕಷ್ಟು ಬೇಡಿಕೆಯಲ್ಲಿರುವ ನಟಿ ಪೂಜಾ ಹೆಗಡೆ, ಒಂದಾಬ ಬಳಿಕ ಇನ್ನೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಬಾಹುಬಲಿ ಸಿನಿಮಾದ ಮಹಾ ಸೀಕ್ರೆಟ್ ಹೇಳಿಬಿಟ್ರು ರಾಣಾ ದಗ್ಗುಬಾಟಿ; ರಾಜಮೌಳಿ ಸುಮ್ಮನಿರ್ತಾರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.