ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಪ್ಯಾರೀಸ್ ಫ್ಯಾಷನ್ ವೀಕ್ ನಲ್ಲಿ ಮಿಂಚುತ್ತಿದ್ದಾರೆ. ಅವ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಂದೇ ಬಾಣದಲ್ಲಿ ಎರಡು ಹಕ್ಕಿ ಹೊಡೆದಂತೆ, ಫ್ಯಾಷನ್ ವಿಡಿಯೋದಲ್ಲಿ ತಮ್ಮ ರಿಂಗ್ ತೋರಿಸಿ, ಎಲ್ಲ ಸರಿ ಇದೆ ಎನ್ನುವ ಸಿಗ್ನಲ್ ನೀಡಿದ್ದಾರೆ ಐಶ್. ಆದ್ರೆ ಅವರ ಸ್ಟೈಲ್, ಫ್ಯಾನ್ ಗೆ ಇಷ್ಟವಾಗಿಲ್ಲ.
ಬ್ಯೂಟಿ ಕ್ವೀನ್ ಐಶ್ವರ್ಯ ರೈ ಬಚ್ಚನ್ (Beauty Queen Aishwarya Rai Bachchan) ಸದಾ ಸುದ್ದಿಯಲ್ಲಿರೋ ಬಾಲಿವುಡ್ ಬೆಡಗಿ. ಮಾಜಿ ವಿಶ್ವ ಸುಂದರಿ (former Miss World) ಐಶ್, ಸಿನಿಮಾ ಕಡಿಮೆ ಮಾಡಿದ್ರೂ ಬೇರೆ ಈವೆಂಟ್ ನಲ್ಲಿ ಮಿಂಚ್ತಾ, ಫ್ಯಾನ್ಸ್ ಹೃದಯದಲ್ಲಿ ಮನೆ ಮಾಡಿದ್ದಾರೆ. ದುಬೈ ಅವಾರ್ಡ್ ಫಂಕ್ಷನ್ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಐಶ್ವರ್ಯ ರೈ ಬಚ್ಚನ್ ಈಗ ಪ್ಯಾರಿಸ್ ಫ್ಯಾಷನ್ ವೀಕ್ (Paris Fashion Week ) ನಲ್ಲಿ ಮಿಂಚಲಿದ್ದಾರೆ. ಮಗಳು ಆರಾಧ್ಯ ಬಚ್ಚನ್ (Aaradhya Bachchan) ಜೊತೆ ಈಗಾಗಲೇ ಫ್ಯಾರಿಸ್ ತಲುಪಿರುವ ಐಶ್ವರ್ಯ ರೈ ಬಚ್ಚನ್ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಒಂದು ವಿಡಿಯೋದಲ್ಲಿ ಐಶ್ವರ್ಯ ಫ್ಯಾಷನ್ ವಾಕ್ ಮಾಡ್ತಿರೋದನ್ನು ನೋಡ್ಬಹುದು. ಐಶ್, ಫ್ಲೋರಲ್ ಟ್ರೆಂಚ್ ಕೋಟ್ ಮತ್ತು ಫ್ಲೆರ್ಡ್ ಪ್ಯಾಂಟ್ ಧರಿಸಿ ವಾಕ್ ಮಾಡಿದ್ದಾರೆ. ಅಮ್ಮನ ನಡಿಗೆಗೆ ಆರಾಧ್ಯ ಬೆಂಬಲ ನೀಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ರೈ ಈ ವಾಕ್ ಹಾಗೂ ಮುಂದೆ ಬಂದು ಕ್ಯಾಮರಾಕ್ಕೆ ಫೋಸ್ ನೀಡ್ತಾ, ತಮ್ಮ ಕೈನಲ್ಲಿರುವ ಉಂಗುರು ತೋರಿಸಿ, ಕಣ್ಣು ಹೊಡೆಯುವ ವಿಡಿಯೋಗಳು ವೈರಲ್ ಆಗಿವೆ.
ರಾಧಿಕಾ ಕುಮಾರಸ್ವಾಮಿಗೆ ಹೂವಿನ ಮಳೆ, ತರಾಟೆ ತೆಗೆದ್ಕೊಂಡ ನೆಟ್ಟಿಗರು
ಫ್ಯಾರಿಸ್ ನಲ್ಲಿರುವ ಐಶ್ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗ್ತಿಲ್ಲ. ಅವರ ಡ್ರೆಸ್, ಹೇರ್ ಸ್ಟೈಲ್ ಹಾಗೂ ಅವರ ಫಿಟ್ನೆಸ್ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಐಶ್ವರ್ಯ ರೈ ಈಗ್ಲೂ ಹೊಳೆಯುವ, ನೆರಿಗೆಯಿಲ್ಲದ ಚರ್ಮ ಹೊಂದಿದ್ದಾರೆ ನಿಜ, ಆದ್ರೆ ತೂಕ ಮಾತ್ರ ಹೆಚ್ಚಾಗ್ತಿದೆ. ರೇಖಾರಂತೆ ಮಿಂಚಬೇಕು ಅಂದ್ರೆ ಹತ್ತು ಕೆಜಿ ತೂಕ ಇಳಿಸಿಕೊಂಡ್ರೆ ಬೆಸ್ಟ್ ಅನ್ನೋದು ಅಭಿಮಾನಿಗಳ ಸಲಹೆ. ಐಶ್ ಹೇರ್ ಸ್ಟೈಲ್ ಕೂಡ ಮತ್ತೆ ಟ್ರೋಲ್ ಆಗಿದೆ. ಎಲ್ಲ ಈವೆಂಟ್ ನಲ್ಲಿ ಒಂದೇ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳೋದು ಫ್ಯಾನ್ಸ್ ಗೆ ಇಷ್ಟವಾಗಿಲ್ಲ. ತಮ್ಮ ವಯಸ್ಸು ಮುಚ್ಚಿಕೊಳ್ಳಲು ಐಶ್ ಒಂದೇ ಹೇರ್ಸ್ಟೈಲ್ ಮಾಡ್ತಿದ್ದಾರೆ ಎಂದ ಫ್ಯಾನ್ಸ್, ದಯವಿಟ್ಟು ಸ್ಟೈಲ್ ಬದಲಿಸಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಐಶ್ ಧರಿಸಿದ್ದ ಡ್ರೆಸ್ ಕೂಡ ಟ್ರೋಲ್ ಆಗಿದೆ. ಐಶ್ವರ್ಯ ರೈ, ಕೆಟ್ಟ ಡ್ರೆಸ್ ಧರಿಸಿ, ಕೆಟ್ಟದಾಗಿ ವಾಕ್ ಮಾಡ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಫ್ಲೋರಲ್ ಟ್ರೆಂಚ್ ಕೋಟ್ ನಲ್ಲಿ ಐಶ್ವರ್ಯ ಮತ್ತಷ್ಟು ದಪ್ಪಕಾಣ್ತಾರೆ. ಡ್ರೆಸ್ ನಿಂದಾಗಿ ಅವರಿಗೆ ವಾಕ್ ಮಾಡೋದು ಕಷ್ಟವಾಗ್ತಿದೆ. ಇದನ್ನು ನೋಡಿದ ಫ್ಯಾನ್ಸ್, ಟೆನ್ಷನ್ ಬಿಟ್ಟು ವರ್ಕ್ ಔಟ್ ಮಾಡಿ ಮೇಡಂ ಎಂದಿದ್ದಾರೆ.
ಇದಾದ ನಂತ್ರ ಐಶ್ ರಿಂಗ್ ಟಚ್ ಮಾಡ್ತಾ ಕಣ್ಣು ಹೊಡೆಯುವ ವಿಡಿಯೋ ನೋಡಿದ ಅಭಿಮಾನಿಗಳು, ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವೂ ಸರಿ ಇದೆ ಎಂಬುದನ್ನು ಸ್ಪಷ್ಟಪಡಿಸಿದಂತಿದೆ ಎನ್ನುತ್ತಿದ್ದಾರೆ. ಐಶ್ ಹಾಗೂ ಅಭಿಷೇಕ್ ಡಿವೋರ್ಸ್ ಪಡೆಯುತ್ತಾರೆ, ಇಬ್ಬರು ದೂರವಾಗಿದ್ದಾರೆ ಎನ್ನುವ ಸುದ್ದಿ ಅನಂತ್ ಅಂಬಾನಿ ಮದುವೆಯಿಂದಲೂ ಹಬ್ಬಿದೆ. ಆದ್ರೆ ಈಗಾಗಲೇ ರಿಂಗ್ ತೋರಿಸಿ ಅಭಿಷೇಕ್ ಸ್ಪಷ್ಟನೆ ನೀಡಿದ್ರು. ಆದ್ರೆ ಐಶ್ವರ್ಯ ರೈ ಬಚ್ಚನ್ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅವರೂ ಇನ್ಡೈರೆಕ್ಟ್ ಆಗಿ ಫ್ಯಾನ್ಸ್ ಗೆ ನೆಮ್ಮದಿ ಸುದ್ದಿ ನೀಡಿದ್ದಾರೆ.
ನನ್ನ ಮನಸ್ಸಿನಲ್ಲಿದ್ದೀರಿ ನೀವು, ನಟಿ ಅಮೂಲ್ಯ ಮಾತಿಗೆ ಅನುಪಮಾ ಶಾಕ್!
ಒಂದ್ಕಡೆ ಐಶ್ ಈ ರಿಯಾಕ್ಷನ್ ಅಭಿಮಾನಿಗಳಿಗೆ ನೆಮ್ಮದಿ ನೀಡಿದ್ರೂ ಆರಾಧ್ಯ ಶಿಕ್ಷಣದ ಮೇಲೆ ಅಭಿಮಾನಿಗಳಿಗೆ ನೋವಿದೆ. ಸದಾ ಅಮ್ಮನ ಜೊತೆ ಅಲ್ಲಿ, ಇಲ್ಲಿ ಅಂತ ಸುತ್ತಾಡುವ ಆರಾಧ್ಯ ಶಾಲೆಗೆ ಹೋಗಲ್ವಾ ಅಂತ ಫ್ಯಾನ್ಸ್ ಎಂದಿನಂತೆ ಪ್ರಶ್ನೆ ಮಾಡಿದ್ದಾರೆ. ಅಂಬಾನಿ ಸ್ಕೂಲ್ ನಲ್ಲಿ ಆರಾಧ್ಯ ಓದುತ್ತಿತು, 12ನೇ ಕ್ಲಾಸ್ ಪಾಸ್ ಮಾಡೋಕೇನು ತೊಂದ್ರೆ ಇಲ್ಲ ಎಂದಿದ್ದಾರೆ ಅಭಿಮಾನಿಗಳು.