ಸಲ್ಮಾನ್‌ ಖಾನ್‌ಗೂ ಮೊದಲೇ ಐಶ್ವರ್ಯಾ ರೈ ಲವ್ವಲ್ಲಿ ಬಿದ್ದಿದ್ದು ಇವ್ರ ಜೊತೆ!

Published : Aug 23, 2023, 01:26 PM IST
ಸಲ್ಮಾನ್‌ ಖಾನ್‌ಗೂ ಮೊದಲೇ ಐಶ್ವರ್ಯಾ ರೈ ಲವ್ವಲ್ಲಿ ಬಿದ್ದಿದ್ದು ಇವ್ರ ಜೊತೆ!

ಸಾರಾಂಶ

ಎಲ್ಲೆಲ್ಲೂ ಐಶ್ ಬೇಬಿ ಕಣ್ಣಿನ ಬಗ್ಗೆಯೇ ಚರ್ಚೆ. ಮಹಾರಾಷ್ಟ್ರ ಸಚಿವರ ಹೇಳಿಕೆಯೊಂದು ಸಖತ್ ಫೇಮಸ್ ಆಗ್ತಿರೋ ಬೆನ್ನಲ್ಲೇ ಐಶ್ ಬೇಬಿ ಹಳೇ ಲವ್ವರ್ ಸುದ್ದಿಯೊಂದು ಸದ್ದು ಮಾಡ್ತಿದೆ.  

ಮೀನು ಸೇವನೆಯ ಪ್ರಯೋಜನಗಳನ್ನು ವಿವರಿಸೋ ಭರದಲ್ಲಿ ಮಹಾರಾಷ್ಟ್ರದ ಬುಡಕಟ್ಟು ಸಚಿವರ ಮನಸ್ಸಿಗೆ ಬಂದಿದ್ದು ನಮ್ಮ ಐಶ್ ಬೇಬಿ. ಹೌದು, ಐಶ್ವರ್ಯಾ ರೈ ಮಾಡಿರೋ ಮೋಡಿಯೇ ಅಂಥದ್ದು. ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ ಅನ್ನೋ ಗಾದೆಯನ್ನು ಐಶ್‌ ಬೇಬಿ ಥರದವರನ್ನು ನೋಡಿ ಮಾಡಿರಬೇಕು ಅನಿಸುತ್ತೆ. ಏಕೆಂದರೆ ಮೊನ್ನೆ ಮೊನ್ನೆ ರಿಲೀಸ್ ಆದ ಮಣಿರತ್ನಂ ಸಿನಿಮಾ 'ಪೊನ್ನಿಯಿನ್ ಸಿಲ್ವನ್' ಬಾಕ್ಸಾಫೀಸಲ್ಲಿ ಕೋಟಿಗಟ್ಟಲೆ ಬಾಚಿತ್ತು. ಥೇಟ್ ದೇವಲೋಕದ ಕನ್ಯೆಯಂತೆ ನಮ್ ಐಶ್ ಬೇಬಿ ಕಾಣಿಸಿಕೊಂಡರು. ಹೀಗಿರುವಾಗ ಸಚಿವರ ಮನಸ್ಸಲ್ಲಿ ಮೀನಿನ ಬಗ್ಗೆ ಯೋಚಿಸುವಾಗ ನಮ್ ಐಶ್ ಬೇಬಿ ಸೌಂದರ್ಯ ಕಣ್ಮುಂದೆ ಬಂದಿದ್ದರಲ್ಲಿ ಅಪಾರ್ಥ ಮಾಡ್ಕೊಳ್ಳೋವಂಥಾದ್ದು ಏನಿಲ್ಲ ಬಿಡಿ. ಐಶ್ವರ್ಯ ರೈ ಅವರ ಸೌಂದರ್ಯಕ್ಕೆ ಮೀನೂಟವೇ ಕಾರಣ ಅಂತಾ ಸಚಿವರು ವ್ಯಾಖ್ಯಾನಿಸಿದ್ದಾರೆ. ನಿಮ್ಮ ಚರ್ಮ ಮೃದುವಾಗಬೇಕಾ? ಕಣ್ಣುಗಳು ಹೊಳೆಯಬೇಕಾ? ಹಾಗಾದ್ರೆ ದಿನವೂ ಮೀನು ಸೇವಿಸಿ. ಐಶ್ವರ್ಯ ರೈ ಮಂಗಳೂರು ಕಡೆಯವರು. ಅವರು ದಿನವೂ ಮೀನು ಸೇವಿಸುತ್ತಾರೆ ಎಂದು ಮಹಾರಾಷ್ಟ್ರ ಸಚಿವರು ಐಶ್ವರ್ಯ ರೈ ಅವರ ಸೌಂದರ್ಯದ ಗುಣಗಾನ ಮಾಡಿದ್ದಾರೆ. ಇದರ ಹಿಂದಿನ ಮರ್ಮ ಏನು ಅಂತ ಗೊತ್ತಾಯ್ತಲ್ಲಾ.

ಇಂಥಾ ಐಶ್ ಬೇಬಿ ಮಾಜಿ ಲವ್ವರ್ ಇಂದಿಗೂ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಲೂ ಭಾಯ್. ಅವ್ರಿಗಿಂತ ಮೊದ್ಲು? ಯೆಸ್ ಅವ್ರಿಗಿಂತ ಮೊದಲು ನಮ್ ಐಶ್ವರ್ಯಾ ರೈ ಒಬ್ಬ ವ್ಯಕ್ತಿ ಜೊತೆಗೆ ಲವ್ವಲ್ಲಿ ಬಿದ್ದಿದ್ದರು. ಆ ಕತೆಯನ್ನೇ ಹೇಳಲಿಕ್ಕೆ ಹೊರಟಿರೋದು. ಹಾಗೆ ನೋಡಿದರೆ 90 ರ ದಶಕವನ್ನು ಬಾಲಿವುಡ್‌ನ ಯುಗವೆಂದು ಹೇಳಬಹುದು. ಆ ಹೊತ್ತಿಗೆ ಅಲ್ಲಿ ನಟಿಯರ ನಡುವೆ ಕ್ಯಾಟ್‌ ಫೈಟ್ ಹೆಚ್ಚಾಗಿ ನಡೆಯುತ್ತಿದ್ದವು. ಈ ವೈಮನಸ್ಸು ಎಷ್ಟರಮಟ್ಟಿಗೆ ಹೆಚ್ಚಾಗುತ್ತಿತ್ತೆಂದರೆ, ಈ ನಟಿಯರಿಗೆ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಸಹಿಸಲೂ ಆಗುತ್ತಿರಲಿಲ್ಲ. 90 ರ ದಶಕದ ಇಬ್ಬರು ಟಾಪ್ ನಟಿಯರಾದ ಮನಿಷಾ ಕೊಯಿರಾಲಾ ಮತ್ತು ಐಶ್ವರ್ಯಾ ರೈ ನಡುವೆ ಇದೇ ರೀತಿಯ ಘಟನೆ ನಡೆದಿದೆ.

ಐಶ್ವರ್ಯ ರೈ ಕಣ್ಣುಗಳನ್ನು ಹೊಗಳಿದ ಸಚಿವರಿಗೆ ಸಂಕಷ್ಟ: ಮಹಿಳಾ ಆಯೋಗದಿಂದ ನೋಟಿಸ್‌

ಐಶ್ವರ್ಯಾ ಹೆಸರು ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ತಳಕು ಹಾಕಿಕೊಂಡಿದ್ದಲ್ಲ. ನಟಿ ಮನೀಶಾ ಕೊಯಿರಾಲಾ ಅವರ ಸಂದರ್ಶನದ ಪ್ರಕಾರ, ಮಾಡೆಲ್‌ ರಾಜೀವ್​ ಮುಲ್ಚಂದಾನಿ ಜೊತೆ ಐಶ್ವರ್ಯಾ ರೈ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಆದರೆ ಐಶ್ವರ್ಯಾ ಯಾವಾಗಲೂ ತಾನು ಮತ್ತು ರಾಜೀವ್ ಉತ್ತಮ ಸ್ನೇಹಿತರು (friends) ಮತ್ತು ಬೇರೇನೂ ಅಲ್ಲ ಎಂದು ಸಮರ್ಥಿಸಿಕೊಂಡರು. ಐಶ್ವರ್ಯಾ 1997 ರಲ್ಲಿ 'ಔರ್ ಪ್ಯಾರ್ ಹೋ ಗಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅದಕ್ಕೂ ಮೊದಲು ಮಾಡೆಲಿಂಗ್ ಮಾಡುತ್ತಿದ್ದರು. ಅಲ್ಲಿ ಪರಿಚಯ ಆದದ್ದು ರಾಜೀವ್. ಐಶ್ವರ್ಯಾ ರೈ ಬಾಲಿವುಡ್ ಮಾಡೆಲಿಂಗ್ (modeling) ​ ಕ್ಷೇತ್ರದಲ್ಲಿದ್ದ ಸಂದರ್ಭದಲ್ಲಿ ರಾಜೀವ್​ ಮುಲ್ಚಂದಾನಿ ಕೂಡ ಮಾಡೆಲ್​ ಆಗಿದ್ದರು.

ಐಶ್ವರ್ಯಾ ರೈನಂತೆ ಕಣ್ಣುಗಳನ್ನ ಪಡೆಯಲು ನೀವು ಹೀಗೆ ಮಾಡಿ: ಸಚಿವರ ಐಡಿಯಾ ಸಿಕ್ಕಾಪಟ್ಟೆ ವೈರಲ್..!

ರಾಜೀವ್​ ಮತ್ತು ಐಶ್ವರ್ಯಾ ಹೆಚ್ಚು ಆಪ್ತರಾಗಿದ್ದರು. ಆದರೆ ಅವರಿಬ್ಬರ ನಡುವೆ ನಟಿ ಮನಿಷಾ ಕೊಯಿರಾಲಾ ಬಂದಿದ್ದರು. ಮನಿಷಾ ಮತ್ತು ರಾಜೀವ್​ ನಡುವೆ ಒಡನಾಟ ಹೆಚ್ಚಿದ ಬಳಿಕ ಐಶ್ವರ್ಯಾ ಸುಮ್ಮನಾಗಿದ್ದರು. ಆದರೆ ರಾಜೀವ್​ ಜೊತೆ ಮನಿಷಾ ಹೆಚ್ಚು ಕಾಲ ಇರಲಿಲ್ಲ. ಆದರೆ ಈ ಬ್ರೇಕಪ್‌ಗೆ ಐಶ್ವರ್ಯಾ ರೈ ಕಾರಣ ಎಂದು ಮನಿಷಾ ಕೊಯಿರಾಲಾ ಆರೋಪಿಸಿದ್ದರು. ಇತ್ತ ನಮ್ಮ ಐಶ್ ಬೇಬಿ ಮಾತ್ರ ಮನಿಶಾ ಕೊಯಿರಾಲಾ ತಮ್ಮ ಮತ್ತು ರಾಜೀವ್ ಅವರ ಹೆಸರನ್ನು ಲಿಂಕ್ (link)  ಮಾಡಿದ್ದಾರೆ, ನಮ್ಮ ನಡುವೆ ಅಂತಹದ್ದೇನೂ ಇಲ್ಲ ಎಂದಿದ್ದರು. ಈಗ ಹಳೇ ವಿಚಾರಕ್ಕೆ ಮತ್ತೆ ಜೀವ ಬಂದಿದೆ. ಅದಕ್ಕೆ ಐಶ್ ಬೇಬಿ ಕಣ್ಣಿನ (eyes) ಸೌಂದರ್ಯದ ವಿಚಾರವೂ ಕಾರಣ ಅಂತ ಮತ್ತೆ ಹೇಳ್ಬೇಕಿಲ್ಲ ತಾನೇ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?