ಅಭಿಮಾನಿಗಳ ಹೃದಯ ಗೆದ್ದ ಸಲ್ಮಾನ್ ಖಾನ್ ಈ ನಡೆ; ವಿಡಿಯೋ ವೈರಲ್

By Shruthi KrishnaFirst Published Apr 2, 2023, 3:38 PM IST
Highlights

ನಟ ಸಲ್ಮಾನ್ ಖಾನ್, ಗೌರಿ ಖಾನ್ ಮತ್ತು ಮಕ್ಕಳನ್ನು ಕರೆದು ಕ್ಯಾಮರಾಗೆ ಪೋಸ್ ನೀಡಿದರು. ಬಳಿಕ ಪಾಪರಾಜಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅಭಿಮಾನಿಗಳ ಮೆಚ್ಚುಗೆಗಳಿಸಿದ್ದಾರೆ. 

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸದ್ಯ ಎರಡು ಸಿನಿಮಾಗಳ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಟೈಗರ್-3 ಮುಗಿಸಿದ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾದ ಶೂಟಿಂಗ್ ಸಹ ಮುಗಿಸಿದ್ದಾರೆ. ಈ ಎರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಸಲ್ಮಾನ್ ಖಾನ್ ಸದ್ಯ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಈ ನಡುವೆ ಸಲ್ಮಾನ್ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದರು. ಬಾಲಿವುಡ್‌ನ ಬಹುತೇಕ ಸ್ಟಾರ್ಸ್ ಈ ಸಮಾರಂಭಕ್ಕೆ ಹಾಜರಾಗಿದ್ದರು. ಶಾರುಖ್ ಖಾನ್, ರಣ್ವೀರ್ ಸಿಂಗ್, ರಣಬೀರ್, ಆಲಿಯ್ ಭಟ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರು ಹಾಜರಾಗಿದ್ದರು. 

ಸಲ್ಮಾನ್ ಖಾನ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಪಾಪರಾಜಿಗಳು ಪೋಸ್ ನೀಡುವಂತೆ ಹೇಳಿದರು. ದಬಂಗ್ ಸ್ಟಾರ್ ಎಂಟ್ರಿ ಕೊಡುವ ಮೊದಲು ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆರ್ಯನ್ ಖಾನ್ ಮತ್ತು ಸುಹಾನಾ ಖಾನ್ ಎಂಟ್ರಿ ಕೊಟ್ಟಿದ್ದರು. ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು. ಆಗ ಸಲ್ಮಾನ್ ಖಾನ್ ಎಂಟ್ರಿ ಕೊಟ್ಟರು, ಗೌರಿ ಖಾನ್ ಮತ್ತು ಮಕ್ಕಳನ್ನು ಕರೆದು ಫೋಟೋಗೆ ಪೋಸ್ ನೀಡಿದರು. ಬಳಿಕ ಸಲ್ಮಾನ್ ಖಾನ್ ಕ್ಯಾಮರಾ ಮೆನ್‌ಗಳ ಕಡೆ ಹೋದರು. 

ಜಾಕ್ವೆಲಿನ್‌ಗೆ ಕಿಸ್ ಮಾಡಿ ತನ್ನದೇ ಬಟ್ಟೆಯಿಂದ ಬಾಯಿ ಒರೆಸಿಕೊಂಡ ಸಲ್ಮಾನ್ ಖಾನ್; ವಿಡಿಯೋ ವೈರಲ್

Latest Videos

ಗೌರಿ ಖಾನ್ ಖಾನ್ ಕುಟುಂಬವನ್ನು ಕರೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅಭಿಮಾನಿಗಳ ಹೃದಯ ಗೆದಿದ್ದದರು. ಬಳಿಕ ಕ್ಯಾಮರಾ ಮೆನ್ ಗಳ ಕಡೆ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪಾಪರಾಜಿಗಳು ಸಲ್ಮಾನ್ ಖಾನ್ ಅವರ ಈ ಗುಣವನ್ನು ಹೊಗಳುತ್ತಿದ್ದಾರೆ. ಸಲ್ಮಾನ್ ಖಾನ್ ಯಾವಾಗಲೂ ಗಂಭೀರವಾಗಿ ಇರುತ್ತಾರೆ. ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡುವುದು ಕಡಿಮೆ. ಹೀಗಿರುವಾಗ ಪಾಪರಾಜಿಗಳ ಜೊತೆಯೇ ಫೋಟೋ ಕ್ಲಿಕ್ಕಿಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

NMACC ಗ್ರ್ಯಾಂಡ್ ಓಪನಿಂಗ್: ಶಾರುಖ್ ಕುಟುಂಬದೊಂದಿಗೆ ಪೋಸ್ ನೀಡಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಸಲ್ಮಾನ್ ಖಾನ್ ಪಠಾಣ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಸಲ್ಮಾನ್ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಈಸ ಸಿನಿಮಾದ ಟೀಸರ್ ಮತ್ತು ಹಾಡು ರಿಲೀಸ್ ಆಗಿದೆ. ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಮತ್ತು ಪೂಜಾ ಹೆಗ್ಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

 

click me!