ಬಾಡಿಶೇಮಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರಾಮ್ ಚರಣ್ ಪತ್ನಿ; ಟ್ರೋಲ್‌ಗಳ ಬಗ್ಗೆ ಹೇಳಿದ್ದೇನು?

Published : Apr 02, 2023, 02:53 PM IST
ಬಾಡಿಶೇಮಿಂಗ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ರಾಮ್ ಚರಣ್ ಪತ್ನಿ; ಟ್ರೋಲ್‌ಗಳ ಬಗ್ಗೆ  ಹೇಳಿದ್ದೇನು?

ಸಾರಾಂಶ

ಮೊದಲ ಬಾರಿಗೆ ರಾಮ್ ಚರಣ್ ಪತ್ನಿ ಉಪಾಸನಾ ಟ್ರೋಲ್‌ಗಳ ಬಗ್ಗೆ ಮತ್ತು ಬಾಡಿಶೇಮಿಂಗ್ ಬಗ್ಗೆ ಮೌನ ಮುರಿದಿದ್ದಾರೆ. 

ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಸದ್ಯ ತಂದೆಯಾಗುತ್ತಿರುವ ಸತಂಸದಲ್ಲಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ತಾಯಿಯಾಗುತ್ತಿದ್ದಾರೆ. ಮದುವೆಯಾಗಿ 10 ವರ್ಷದ ನಂತರ ಬಳಿಕ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ. ಗರ್ಭಿಣಿ ಉಪಾಸನಾ ಸದ್ಯ ತನ್ನ ತಾಯ್ತಿತನ ಜರ್ನಿ ಎಂಜಾಯ್ ಮಾಡುತ್ತಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ ಇಬ್ಬರೂ ಇತ್ತೀಚಿಗಷ್ಟೆ ವಿದೇಶಕ್ಕೆ ಹಾರಿದ್ದಾರೆ. ಒಂದಿಷ್ಟು ಸಮಯ ಅಲ್ಲೇ ಕಳೆದು ಭಾರತಕ್ಕೆ ಪಾವಾಸ್ ಆಗಲಿದ್ದಾರೆ. 

ಉಪಾಸನಾ ಸಿನಿಮಾರಂಗಕ್ಕೆ ಸೇರಿದವರಲ್ಲ. ಖ್ಯಾತ ಉದ್ಯಮಿಯ ಪತ್ರಿ. ಉಪಾಸನಾ ಕೂಡ ಉದ್ಯಮಿ. ರಾಮ್ ಚರಣ್ ಅವರನ್ನು ಮದುವೆಯಾದ  ನಂತರ ಉಪಾಸನಾ ಅವರಿಗೆ ಸಿನಿಮಾರಂಗ ಚಿರಪರಿಚಿತ. ಉಪಾಸನಾ ಮದುವೆಯಾದ ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಬಾಡಿಶೇಮಿಂಗ್‌ಗೆ ಒಳಗಾಗಿದ್ದರು. ಈ ಬಗ್ಗೆ ಮೊದಲ ಬಾರಿಗೆ ಉಪಾಸನಾ ಮೌನ ಮುರಿದಿದ್ದಾರೆ. ಪ್ರಾರಂಭಿಕ ದಿನಗಳಲ್ಲಿ ಉಪಾಸನಾ ಅವರು ಪ್ರಾರಂಭಿಕ ದಿನಗಳಲ್ಲಿ ತೂಕ ಮತ್ತು ದೈಹಿಕಾ ನೋಟದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. 

ಸಿಕ್ಕಾಪಟ್ಟೆ ಟ್ರೋಲ್‌ಗಳಿಂದ ಮಾನಸಿಕ ಆರೋಗ್ಯದ ಮೇಲೆ ಬೀರುತ್ತಿತ್ತು ಎಂದು ಉಪಾಸನಾ ಹೇಳಿದ್ದಾರೆ. ಟ್ರೋಲ್‌ಗಳನ್ನು ಎದುರಿಸಲು ಸಿಕ್ಕಾಪಟ್ಟೆ ಕಷ್ಟವಾಯಿತು ಎಂದು ಹೇಳಿದ್ದಾರೆ. ನಂತರದ ದಿನಗಳಲ್ಲಿ ನೆಗೆಟಿವ್ ಕಾಮೆಂಟ್‌ಗಳನ್ನು ನಿರ್ಲಕ್ಷಿಸುವುದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ. ಇತರರು ಏನು ಹೇಳುತ್ತಾರೆಂದು ಚಿಂತಿಸುವುದಕ್ಕಿಂತ ತನ್ನ ಕೆಲಸ ಮತ್ತು ಆರೋಗ್ಯದ ಮೇಲೆ ಹೆಚ್ಚು ಗಮನ ಕೊಡುವುದು ಮುಖ್ಯ ಎಂದು ಉಪಾಸನಾ ಹೇಳಿದರು. ಅನೇಕ ನಟಿಯರು ಬಾಡಿಶೇಮಿಂಗ್‌ಗೆ ಒಳಗಾಗಿದ್ದಾರೆ. ಅನೇಕರು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ರಾಮ್ ಚರಣ್ ಪತ್ನಿ ಕೂಡ ಹೊರತಾಗಿಲ್ಲ. 

ರಾಮ್‌ ಚರಣ್‌ ಹುಟ್ಟುಹಬ್ಬ; ಬಾಡಿಫಿಟ್ ಬಟ್ಟೆಯಲ್ಲಿ ಹೊಟ್ಟೆ ತೋರಿಸಿದ ಉಪಾಸನಾ

ರಾಮ್ ಚರಣ್ ಸದ್ಯ ಪತ್ನಿ ಜೊತೆ ಸಮಯ ಕಳೆಯುತ್ತಿದ್ದಾರೆ. ವಿದೇಶಕ್ಕೆ ಹಾರಿರುವ ರಾಮ್ ಚರಣ್ ದಂಪತಿ ಅಲ್ಲೇ ಸಮಯ ಕಳೆಯುತ್ತಿದ್ದಾರೆ. ಉಪಾಸನಾ ಗರ್ಭಿಣಿ ಎಂದು ಗೊತ್ತಾದ ಬಳಿಕ ಬೇಬಿ ಬಂಪ್ ಕಾಣುತ್ತಿಲ್ಲ ಎಂದು ಸುದ್ದಿಯಾಗಿತ್ತು. ನಿಜಕ್ಕೂ ಗರ್ಭಿಣಾ ಎನ್ನುವ ಅನುಮಾನ ಮೂಡಿಸಿತ್ತು. ಇತ್ತೀಚಿಗಷ್ಟೆ ರಾಮ್ ಚರಣ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪಾಸನಾ ಬೇಬಿ ಬಂಪ್ ತೋರಿಸುವ ಮೂಲಕ ಅನುಮಾನಗಳಿಗೆ ತೆರೆ ಎಳಿದರು. ಉಪಾಸನಾ ಫೋಟೋಗಳು ವೈರಲ್ ಆಗಿತ್ತು. 

ಅಮೆರಿಕಾದಲ್ಲೇ ಮಗುವಿಗೆ ಜನ್ಮ ನೀಡ್ತಾರಾ ಉಪಾಸನಾ? ಡೆಲಿವರಿ ಮಾಡಿಸುವ ವೈದ್ಯೆಯನ್ನು ಪರಿಚಯಿಸಿದ ರಾಮ್ ಚರಣ್

ರಾಮ್ ಚರಣ್ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಳಿಕ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್  ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!