ಸರಣಿ ಸೋಲು: ಟೆಂಪಲ್ ರನ್ ಮಾಡುತ್ತಿರುವ ನಟ ಅಕ್ಷಯ್ ಕುಮಾರ್, ಕೇದಾರನಾಥ, ಬದರಿನಾಥ್‌ಗೆ ಭೇಟಿ

Published : May 28, 2023, 04:50 PM IST
ಸರಣಿ ಸೋಲು: ಟೆಂಪಲ್ ರನ್ ಮಾಡುತ್ತಿರುವ ನಟ ಅಕ್ಷಯ್ ಕುಮಾರ್, ಕೇದಾರನಾಥ, ಬದರಿನಾಥ್‌ಗೆ ಭೇಟಿ

ಸಾರಾಂಶ

ಸರಣಿ ಸೋಲು ನಂತರ ನಟ ನಟ ಅಕ್ಷಯ್ ಕುಮಾರ  ಟೆಂಪಲ್ ರನ್ ಮಾಡುತ್ತಿದ್ದಾರೆ. ಕೇದಾರನಾಥ, ಬದರಿನಾಥ್‌ಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. 

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಸರಣಿ ಸೋಲಿನ ಸುಳಿಯಲ್ಲಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಸಾಲು ಸಾಲು ಸಿನಿಮಾಗಳು ನೆಲ ಕಚ್ಚಿವೆ. 2022 ಅಕ್ಷಯ್ ಕುಮಾರ್ ಪಾಲಿಗೆ ನಿರಾಶದಾಯಕ ವರ್ಷವಾಗಿತ್ತು. ಕಳೆದ ಬಂದ 6 ಸಿನಿಮಾಗಳಲ್ಲಿ ಒಂದು ಸಿನಿಮಾವೂ ಅಭಿಮಾನಿಗಳ ಹೃದಯ ಗೆದ್ದಿಲ್ಲ, ಬಾಕ್ಸ್ ಆಫೀಸ್‌ನಲ್ಲೂ ಕಮಾಲ್ ಮಾಡಿಲ್ಲ. ಹಾಗಂತ ಅಕ್ಷಯ್ ಕುಮಾರ್ ಬೇಡಿಕೆ ಕಡಿಮೆಯಾಗಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ನಡುವೆ ಅಕ್ಷಯ್ ಟೆಂಪಲ್ ರನ್ ಮಾಡುತ್ತಿದ್ದಾರೆ. 

ಪ್ರಸಿದ್ಧ ದೇವಾಲಯಗಳಿಗೆ ಅಕ್ಷಯ್ ಕುಮಾರ್ ಭೇಟಿ ನೀಡುತ್ತಿದ್ದಾರೆ.  ಕೇದಾರನಾಥ್,  ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಅಕ್ಷಯ್ ಕುಮಾರ್ ಸದ್ಯ ಉತ್ತರ ಖಂಡದಲ್ಲಿದ್ದಾರೆ. ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶೂಟಿಂಗ್‌ನಿಂದ ಕೊಂಚ ಬಿಡುವು ಪಡೆದು ಅಕ್ಷಯ್ ಕುಮಾರ್ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗಷ್ಟೆ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಅಕ್ಷಯ್ ಕುಮಾರ್, ಇಂದು ಬದರಿನಾಥಕ್ಕೆ ಹೋಗಿದ್ದಾರೆ. 

ಇಂದು (ಮೇ 28) ಬೆಳಗ್ಗೆ 6.30ರ ಸುಮಾರಿಗೆ ಬದರಿನಾಥ ದೇವಸ್ಥಾನಕ್ಕೆ ತೆರಳಿದ್ದರು. ನಟ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಅಕ್ಷಯ್ ಕುಮಾರ್ ನೋಡಿ ಅಭಿಮಾನಿಗಳು ಪುಲ್ ಖುಷ್ ಆದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮತ್ತು ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಕ್ಷಯ್ ಕುಮಾರ್ ಅಭಿಮಾನಿಗಳತ್ತ ಕೈ ಬೀಸುತ್ತಾ 'ಹರ್ ಹರ್ ಮಹಾದೇವ್..' ಎಂದು ಹೇಳುತ್ತಾ ದೇವರ ದರ್ಶನಕ್ಕೆ ತೆರಳಿದರು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

20 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಾಜಿ ಜೋಡಿ ಅಕ್ಷಯ್- ರವೀನಾ: ಇಬ್ಬರೂ ತಬ್ಬಿ ಮಾತಾಡಿದ ವಿಡಿಯೋ ವೈರಲ್

ಬದರಿನಾಥ ದೇವಸ್ಥಾನದಲ್ಲಿ ಆಶೀರ್ವಾದ ಪಡೆದ ನಂತರ ಅಕ್ಷಯ್ ಜಾಗೇಶ್ವರ ಧಾಮಕ್ಕೆ ಭೇಟಿ ನೀಡಿದರು. ಅಕ್ಷಯ್ ತಮ್ಮ ಭೇಟಿಯ ಒಂದು ನೋಟವನ್ನು ಹಂಚಿಕೊಂಡಿದ್ದಾರೆ ಮತ್ತು 'ಜಗೇಶ್ವರ ಧಾಮ, ಶಾಂತ ಮತ್ತು ಆನಂದದಾಯಕ' ಎಂದು ಬರೆದುಕೊಂಡಿದ್ದಾರೆ.

 ಆಮೀರ್​ ಖಾನ್​ ಚಿತ್ರ ಹಿಟ್​ ಆಗಿದ್ರೆ ಅಕ್ಷಯ್​ ಕುಮಾರ್​ ಮದ್ವೆನೇ ಆಗ್ತಿರಲಿಲ್ಲ, ಯಾಕೆ ಗೊತ್ತಾ?

ಅಕ್ಷಯ್ ಕುಮಾರ್ ಕೊನೆಯದಾಗಿ ಇಮ್ರಾನ್ ಹಶ್ಮಿ ಜೊತೆ ಸೆಲ್ಫಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಸಲ್ಫಿ ಚಿತ್ರಮಂದಿರಕ್ಕೆ ಬಂದ ಸ್ಪೀಡ್‌ನಲ್ಲೇ ಹೊರಟು ಹೋಗಿದೆ. ಸದ್ಯ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಬಡೇ ಮಿಯಾನ್ ಚೋಟೆ ಮಿಯಾನ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಈದ್ 2024 ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಇದರ ಹೊರತಾಗಿ, ಅವರು ಹೇರಾ ಫೆರಿ 3, ಓ ಮೈ ಗಾಡ್ 2 ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?