ಮದುವೆಗೆ 5 ದಿನಗಳಿರುವಾಗಲೇ ಕಾರು ಅಪಘಾತದಲ್ಲಿ ಗಾಯಗೊಂಡ ನಟ ಶರ್ವಾನಂದ್

Published : May 28, 2023, 02:54 PM IST
ಮದುವೆಗೆ 5 ದಿನಗಳಿರುವಾಗಲೇ ಕಾರು ಅಪಘಾತದಲ್ಲಿ ಗಾಯಗೊಂಡ ನಟ ಶರ್ವಾನಂದ್

ಸಾರಾಂಶ

ಮದುವೆಗೆ 5 ದಿನಗಳಿರುವಾಗಲೇ ನಟ ಶರ್ವಾನಂದ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

ಟಾಲಿವುಡ್ ಖ್ಯಾತ ನಟ ಶರ್ವಾನಂದ್ ಅವರ ಕಾರು ಅಪಘಾತಕ್ಕೀಡಾಗಿದೆ ಎನ್ನುವ ಸುದ್ದು ವರದಿಯಾಗಿದೆ. ಹೈದಾರಾಬಾದ್‌ ಫಿಲ್ಮ್ ನಗರ್‌ ಜಂಕ್ಷನ್ ಬಳಿ ಶರ್ವಾನಂದ್ ಅವರ ರೇಂಜ್ ರೋವರ್ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಶರ್ವಾನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕ ಪುಟ್ಟ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಅಪಘಾತ ಸ್ಥಳದಿಂದ ಶರ್ವಾನಂದ್ ಅವರ ಕಾರನ್ನು ಕುಟುಂಬ ಸದಸ್ಯರು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.  ಶರ್ವಾಂದ್ ಇತ್ತೀಚೆಗಷ್ಟೆ ರಕ್ಷಿತಾ ರೆಡ್ಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜೂನ್ 2 ಮತ್ತು 3 ರಂದು ನಡೆಯುವ ಶರ್ವಾನಂದ್ ಮದುವೆ ಇದ್ದು ಮದುವೆಯಗೂ 5 ದಿನಗಳು ಬಾಕಿ ಇರುವಾಗ ಈ ದುರಂತ ಸಂಭವಿಸಿದೆ. 

ಹೈದರಾಬಾದ್‌ನ ಫಿಲ್ಮ್ ನಗರ್ ಜಂಕ್ಷನ್‌ ಬಳಿ ಬರುವಾಗ ಶರ್ವಾನಂದ್ ಕಾರು ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಸ್ಥಳೀಯ ನಿವಾಸಿಗಳು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.  ಸದ್ಯ ಶರ್ವಾನಂದ್ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಹಾನಿಯಿಲ್ಲ ಎನ್ನುವ ವಿಚಾರ ತಿಳಿದು ಅಭಿಮಾನಿಗಳು ನಿರಾಳರಾಗಿದ್ದಾರೆ. 

ಶರ್ವಾನಂದ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶ್ರೀರಾಮ್ ಆದಿತ್ಯ ಅವರೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮದುವೆಯ ಬ್ಯುಸಿಯಲ್ಲಿದ್ದ ಶರ್ವಾನಂದ್ ಸಿನಿಮಾಗಳ ಶೂಟಿಂಗ್ ಬೇಗ ಮುಗಿಸುವ ತರಾತುರಿಯಲ್ಲಿದ್ದಾರೆ. ಈ ನಡುವೆ ಕಾರು ಅಪಘಾತಕ್ಕೀಡಾಗಿರುವುದು ಶರ್ವಾನಂದ್ ಸ್ಪೀಡ್‌ಗೆ ಬ್ರೇಕ್ ಹಾಕಿದೆ. 

ಜೂನ್ 3ಕ್ಕೆ ಮದುವೆ 

ಅಂದಹಾಗೆ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ಜೂನ್ 2 ಮತ್ತು 3ರಂದು ಮದುವೆಯಾಗುತ್ತಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಲೀಲಾ ಪ್ಯಾಲೇಸ್‌ನಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್ ನಡೆಯುತ್ತಿದೆ. ಈ ನಡುವೆ ಶರ್ವಾನಂದ್ ಕಾರಿಗೆ ಅಪಘಾತವಾಗಿರುವುದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶರ್ವಾನಂದ್ ಕ್ಷೇಮವಾಗಿದ್ದಾರೆ ಎಂದು ಅವರ ತಂಡ ಸ್ಪಷ್ಟನೆ ನೀಡಿದೆ.

 ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ನಟ ಶರ್ವಾನಂದ್ ನಿಶ್ಚಿತಾರ್ಥ ಮುರಿದು ಬಿತ್ತಾ? ಹೀಗೊಂದು ಸುದ್ದಿ ವೈರಲ್

ಅದ್ದೂರಿ ನಿಶ್ಚಿತಾರ್ಥ

ಹೈದಾರಾಬಾದ್‌ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥದಲ್ಲಿ ಆಪ್ತರು, ಕುಟುಂಬದವರು ಭಾಗಿಯಾಗಿದ್ದರು.  ಸಿನಿ ಗಣ್ಯರಾದ ರಾಮ್ ಚರಣ್, ಅದಿತಿ ರಾವ್ ಹೈದರಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದ್ದರು. ರಕ್ಷಿತಾ ರೆಡ್ಡಿ ಅಮೆರಿಕಾ ಮೂಲದ ಟೆಕ್ಕಿ. ರಕ್ಷಿತಾ ಆಂಧ್ರಪ್ರದೇಶ ಮೂಲದವರಾಗಿದ್ದು ರಾಜಕೀಯ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. 

ಮದುವೆನೇ ಆಗೋಲ್ಲ ಅಂತಿದ್ದ ನಟ ಶರ್ವಾನಂದ್; ನಿಶ್ಚಿತಾರ್ಥ ಫೋಟೋ ನೋಡಿ ನೆಟ್ಟಿಗರು ಶಾಕ್

ನಟ ಶರ್ವಾನಂದ್ ತನ್ನ ಅದ್ಭುತ ಪ್ರತಿಭೆ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ಎರಡು ಸಿನಿಮಾಗಳು ಸಹ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ರಶ್ಮಿಕಾ ಮಂದಣ್ಣ ಜೊತೆ ಆಡವಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ನಿರೀಕ್ಷೆಯ ಗೆಲುವು ಕಂಡಿಲ್ಲ. ಸದ್ಯ ಶರ್ವಾಂದನ್ ಕನಮ್ ಮತ್ತು ಇನ್ನೂ ಹೆಸರಿಡದ 35ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!