
ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡೋದ್ರಿಂದ ಶುರು ಮಾಡಿ ನಿಕ್ ಜೋನಸ್‌ನನ್ನು ಮದುವೆಯಾಗೋ ತನಕ ತಮ್ಮ ರಿಲೇಷನ್‌ಶಿಪ್‌ಗಳ ಬಗ್ಗೆ ಮಾತನಾಡಿದ್ದಾರೆ ಪ್ರಿಯಾಂಕ ಚೋಪ್ರಾ. ಹಲವರ ಜೊತೆ ಡೇಟ್ ಮಾಡಿ ನಂತರ ಡೇಟಿಂಗ್‌ನಿಂದ ಒಂದು ಬ್ರೇಕ್ ತಗೊಳೋಕೆ ನಿರ್ಧರಿಸಿದ್ದರು ಪಿಗ್ಗಿ.
ನಾನು ನನ್ನ ಆರಂಭದ ದಿನಗಳಲ್ಲಿ ವೈಯಕ್ತಿಕ ಮತ್ತು ಔದ್ಯೋಗಿಕ ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟಿದೆ. 10 ವರ್ಷಗಳ ಕಾಲ ವರ್ಷಕ್ಕೆ ನಾಲ್ಕು ಸಿನಿಮಾಗಳಂತೆ ನಾನು ಕೆಲಸ ಮಾಡಿದ್ದೆ. ದಿನಕ್ಕೆ 15ರಿಂದ 18 ಗಂಟೆ ಕೆಲಸ ಮಾಡುತ್ತಿದ್ದೆ, ಇದರಲ್ಲಿ ವೀಕೆಂಡ್ ಕುಡಾ ಸೇರಿರುತ್ತಿತ್ತು ಎಂದಿದ್ದಾರೆ.
ಬ್ರೇಕಪ್ ನಂತ್ರ ಯಾವುದೇ ಚಟ ಹತ್ತಿಸ್ಕೊಳ್ಳಿಲ್ಲ, ಆದ್ರೆ ಸಿಕ್ಕಾಪಟ್ಟೆ ಡುಮ್ಮಿಯಾದ್ರು ಪ್ರಿಯಾಂಕ
2016ರಲ್ಲಿ ನನ್ನ ಕೊನೆಯ ಬ್ರೇಕಪ್ ನಂತರ ನಾನು ಡೇಟಿಂಗ್ ಮಾಡೋದಕ್ಕೆ ಫುಲ್ ಸ್ಟಾಪ್ ಕೊಟ್ಟೆ. ರಿಲೇಷನ್‌ಶಿಪ್ ನನಗೆ ವರ್ಕೌಟ್ ಆಗುತ್ತಿಲ್ಲ ಎಂದು ಅರ್ಥವಾಯ್ತು ಎಂದಿದ್ದಾರೆ.
ಬ್ಯಾಕ್ ಟು ಬ್ಯಾಕ್ ರಿಲೇಷನ್‌ಶಿಪ್‌ಗಳ ನಂತರ ಇನ್ನು ಸ್ವಲ್ಪ ಗ್ಯಾಪ್ ಬೇಕು, ಒಬ್ಬಳೇ ಇರಬೇಕೆಂದು ಪ್ರಿಯಾಂಕ ಪಾಸ್ ಬಟನ್ ಒತ್ತಿದ್ದರು. ಪ್ರಿಯಾಂಕ ಚೋಪ್ರಾ 2018 ಡಿಸೆಂಬರ್ 2ರಂದು ನಿಕ್ ಜೋನಸ್ ಅವರನ್ನು ಜೋಧಪುರದ ಮೆಜೆಸ್ಟಿಕ್ ಉಮೈದ್ ಭವನ್ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.