'ಹೈದ್ರಾಬಾದ್ ನನ್ನ ಪ್ರಾಣ, ನಿತ್ಯ ನಮಾಜ್ ಮಾಡ್ತೇನೆ' ಸಂಜನಾ ಲೈವ್!

Published : Feb 12, 2021, 04:50 PM ISTUpdated : Feb 12, 2021, 04:51 PM IST
'ಹೈದ್ರಾಬಾದ್ ನನ್ನ ಪ್ರಾಣ, ನಿತ್ಯ ನಮಾಜ್ ಮಾಡ್ತೇನೆ'  ಸಂಜನಾ ಲೈವ್!

ಸಾರಾಂಶ

ಏಷ್ಯಾನೆಟ್ ಸುವರ್ಣ ನ್ಯೂಸ್ ಬಹಿರಂಗ ಮಾಡಿದ್ದ ಸುದ್ದಿ/ ನಮಾಜ್  ಮಾಡುತ್ತೇನೆ ಎಂದು ಒಪ್ಪಿಕೊಂಡ ಸಂಜನಾ/ ಲೈವ್ ನಲ್ಲಿ ಅವರೇ ಹೇಳಿದರು/ ಪೂಜೆ ಮತ್ತು ನಮಾಜ್ ಎರಡು ವಿಚಾರ

ಬೆಂಗಳೂರು(ಫೆ. 12 ) ದಿನ ನಿತ್ಯ ನಮಾಜ್ ಮಾಡ್ತಾರ ನಟಿ ಸಂಜನಾ..?  ಹೌದು ಫೇಸ್ ಬುಕ್ ಲೈವ್ ನಲ್ಲಿ ನಮಾಜ್ ಮಾಡುತ್ತೇನೆ ಎಂದು ನಟಿ  ಹೇಳಿಕೊಂಡಿದ್ದಾರೆ. ಸಂಜನಾ ಅವರೇ ಲೈವ್ ನಲ್ಲಿ ವಿಚಾರ ಹೇಳಿಕೊಂಡಿದ್ದಾರೆ.

ನಟಿ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್ ಸುದ್ದಿ ಬ್ರೇಕ್ ಮಾಡಿತ್ತು. ವೈದ್ಯ ಅಜೀಝ್ ಜೊತೆ ಸಂಜನಾ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಬ್ರೇಕ್ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಹ ವೈರಲ್ ಆಗಿತ್ತು.

ಒಂದೆರಡು ಮಾತು ಹೇಳಿದ್ದರೆ ಸ್ಪಷ್ಟನೆ ಕೊಡಬಹುದು.. ಸಾವಿರಾರು ಮಾತು ಹೇಳಿದರೆ ಯಾರಿಗೆ ಸ್ಪಷ್ಟನೆ ಕೊಡೋಣ ಎಂದು ಸಂಜನಾ ಹೇಳಿಕೊಂಡು  ಹೋಗಿದ್ದಾರೆ.

ಸಂಜನಾ ಇಸ್ಲಾಂಗೆ ಮತಾಂತರ..ದಾಖಲೆ ಸಮೇತ ವರದಿ ಬ್ರೇಕ್!

ನಮಾಜ್‌ ಮಾಡುವಾಗ ನಾನು ಕೇಳಿಕೊಂಡಿದ್ದು‌ ಭಗವಂತ ನನಗೆ ಸಾವು ಕೊಡು ಅಂತ  ಎಂದು  ಸಂಜನಾ ಹೇಳಿದ್ದಾರೆ. ಆದರೆ ಈಗಲೂ ಸಂಜನಾ ತಾವು ಮದುವೆ ಆಗಿಲ್ಲ ಎಂದೇ ವಾದ ಮಾಡುತ್ತಿದ್ದಾರೆ. 

ಅರ್ಚನಾ ಮನೋಹರ್ ಗರ್ಲಾನಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡುವಾಗ ಸಂಜನಾ ಗರ್ಲಾನಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಂಜನಾ, ವೈದ್ಯ ಅಜೀಝ್ ಪಾಶಾ ಮದುವೆಯಾಗಿರುವ ವಿಚಾರ ಇತ್ತೀಚೆಗೆ ಬಹಿರಂಗೊಂಡಿತ್ತು. ಸಂಜನಾಳ  ಈ ಪ್ರೀತಿ ಹಾಗೂ ಮದುವೆ ಇಷ್ಟಕ್ಕೆ ನಿಲ್ಲಲಿಲ್ಲ. 2018ರಲ್ಲಿ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲೂಮ್ ಶಾಹ್ ವಲ್ಲಿಉಲ್ಲಾ ಮಸೀದಿಯಲ್ಲಿ ಸಂಜನಾ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು.

ಸಂಜನಾ ಅಲ್ಲ..ಮಹೀರಾ.. ಏನಿದು ಮತಾಂತರದ ಕತೆ?

ನಟಿ ಸಂಜನಾ ಗಲ್ರಾ​ನಿ​ಯನ್ನು ಬಲ​ವಂತ​ವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡ​ಲಾ​ಗಿದೆ ಎಂದು ಆರೋ​ಪಿಸಿ ವಕೀಲ ಎನ್‌.​ಪಿ.​ಅ​ಮೃ​ತೇಶ್‌ ಅವರು ಗೃಹ ಸಚಿವ ಬಸ​ವ​ರಾಜ ಬೊಮ್ಮಾಯಿ, ಕಾಟನ್‌ ಪೇಟೆ ಪೊಲೀಸ್‌ ಠಾಣೆ, ಕೇಂದ್ರ ಅಪ​ರಾಧ ವಿಭಾ​ಗ​ದ (​ಸಿ​ಸಿ​ಬಿ) ಪೊಲೀ​ಸ​ರಿಗೆ ರಿಜಿ​ಸ್ಟರ್‌ ಪೋಸ್ಟ್‌ ಮೂಲಕ ಡಿಸೆಂಬರ್ ನಲ್ಲಿ ದೂರು ನೀಡಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?