ಕಾಂಗ್ರೆಸ್​ನಿಂದ ಹೆಸರು ದುರುಪಯೋಗ: ಆಮೀರ್​, ರಣವೀರ್​ ಬಳಿಕ ಅಲ್ಲು ಅರ್ಜುನ್ ಗರಂ-ತಪ್ಪಿತಸ್ಥರಿಗೆ ಶಿಕ್ಷೆ ಏನು?

By Suvarna NewsFirst Published Apr 23, 2024, 12:11 PM IST
Highlights

ಕಾಂಗ್ರೆಸ್​ ಪರವಾಗಿ ಮತಯಾಚಿಸುವಂತೆ ನಟರ ನಕಲಿ ವಿಡಿಯೋ ಶೇರ್​ ಆಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಇದರ ವಿಡಿಯೋ ನಟರು ಕಾನೂನು ಸಮರ ಸಾರುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಏನು?
 

ಬಾಲಿವುಡ್​ ನಟರಾದ ಆಮೀರ್​ ಖಾನ್​, ರಣವೀರ್​ ಸಿಂಗ್​ ಬಳಿಕ ಇದೀಗ ಇನ್ನೋರ್ವ ಸ್ಟಾರ್​ ನಟ ಅಲ್ಲು ಅರ್ಜುನ್​ ಅವರ ಹೆಸರನ್ನು ಬಿಜೆಪಿ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ.   ಇದಾಗಲೇ ಆಮೀರ್​ ಮತ್ತು ರಣವೀರ್​ ಸಿಂಗ್​ ಕಾಂಗ್ರೆಸ್ಸಿಗರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಇದೀಗ  ಅಲ್ಲು ಅರ್ಜುನ್​ ಅವರ ಸರದಿ.  ತೆಲಂಗಾಣದಲ್ಲಿ ಮೇ 13 ರಂದು ಚುನಾವಣೆ ನಡೆಯುತ್ತಿದೆ. ಈ ನಡುವೆಯೇ,  ನಟ ಅಲ್ಲು ಅರ್ಜುನ್ ಅವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುತ್ತಿರುವಂತೆ ತಿರುಚಿದ ವಿಡಿಯೋ ಶೇರ್​ ಮಾಡಲಾಗುತ್ತಿದೆ. ಅಸಲಿಗೆ ಇದು ಫೇಕ್​ ವಿಡಿಯೋ ಎಂದು ನಟ ಕಿಡಿ ಕಾರಿದ್ದಾರೆ. ಇದಾಗಲೇ ಸಾಕಷ್ಟು ಬಾರಿ ವಿವಾದಾತ್ಮಕ ಟ್ವೀಟ್​ ಕಾರಣಗಳಿಂದ ಜೈಲಿಗೂ ಹೋಗಿಬಂದಿರುವ ಕಮಾಲ್ ಆರ್ ಖಾನ್ 'ಕೆಆರ್ ಕೆ' ಸೇರಿದಂತೆ ಹಲವು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು  ಅಲ್ಲು ಅರ್ಜುನ್​ ಕ್ಯಾಂಪೇನ್ ಮಾಡುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದು ಡೀಪ್​ಫೇಕ್​ ವಿಡಿಯೋ ಎಂಬುದು ಬಹಿರಂಗಗೊಂಡಿದೆ. 

2022ರಲ್ಲಿ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನಡೆದ ವಾರ್ಷಿಕ ಭಾರತೀಯ ದಿನದ ಪರೇಡ್‌ನಲ್ಲಿ ಅಲ್ಲು ಅರ್ಜುನ್ ಅವರು ಗ್ರಾಂಡ್ ಮಾರ್ಷಲ್ ಆಗಿ ಭಾಗಿಯಾಗಿದ್ದ ಕಾರ್ಯಕ್ರಮದ ದೃಶ್ಯ ಇದು. ಆದರೆ ಅದನ್ನು ಕಾಂಗ್ರೆಸ್​ ಪರ ಪ್ರಚಾರ ಎಂದು ಬಿಂಬಿಸಲಾಗುತ್ತಿದೆ. ಇದಾಗಲೇ ಇದೇ ರೀತಿ ಬಿಜೆಪಿ ಮತ್ತು ಪ್ರಧಾನಿ ವಿರುದ್ಧ ಮಾತನಾಡಿರುವಂತೆ ಡೀಪ್​ಫೇಕ್​ ವಿಡಿಯೋ ಹರಿಬಿಟ್ಟವರ ವಿರುದ್ಧ ನಟರಾದ ಆಮೀರ್​ ಖಾನ್​ ಮತ್ತು ರಣವೀರ್​ ಸಿಂಗ್​ ದೂರು ದಾಖಲು ಮಾಡಿದ್ದು, ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ.  ತಮ್ಮ ಪ್ರಸಿದ್ಧ ಷೋ ಒಂದನ್ನು ಬಳಸಿಕೊಂಡು ಕಾಂಗ್ರೆಸ್‌ ಡೀಪ್‌ಫೇಕ್‌ ಮಾಡಿದೆ ಎಂದು ಕೆಲ ದಿನಗಳ ಹಿಂದೆ ಆಮೀರ್‌ ಖಾನ್‌ ಅವರ ಆರೋಪಿಸಿದ್ದರು. ಆಮಿರ್ ಖಾನ್ ಅವರು ಈ ಹಿಂದೆ 'ಸತ್ಯಮೇವ ಜಯತೇ' ಎಂಬ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದರು. ಆ ಕಾರ್ಯಕ್ರಮದ ದೃಶ್ಯವನ್ನು ಇಟ್ಟುಕೊಂಡು ಕಾಂಗ್ರೆಸ್​​ ಪಕ್ಷವು  ಬಿಜೆಪಿ ವಿರುದ್ಧ ಜಾಹೀರಾತು ಮಾಡಿದೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌,  ಡೀಪ್‌ ಫೇಕ್​​ ತಂತ್ರಜ್ಞಾನದ ಮೂಲಕ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದೆ ಎಂದು ಆಮೀರ್‌ ಖಾನ್‌ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿರುದ್ಧ  ಆಮೀರ್ ಖಾನ್​ ವಕ್ತಾರ ಮುಂಬೈ ಪೊಲೀಸ್​ ಠಾಣೆಯಲ್ಲಿ  ದೂರು ದಾಖಲು ಮಾಡಿದ್ದಾರೆ. 

ಪ್ರಧಾನಿ ವಿರುದ್ಧ ಅಪಪ್ರಚಾರಕ್ಕೆ ನಟರ ಹೆಸರು ದುರ್ಬಳಕೆ! ಆಮೀರ್​ ಬಳಿಕ ರಣವೀರ್​ ಸಿಂಗ್​ ಎಫ್​ಐಆರ್​

ಇತ್ತೀಚೆಗೆ ರಣವೀರ್ ಸಿಂಗ್ ಅವರು ವಾರಣಾಸಿಗೆ ಭೇಟಿ ನೀಡಿದ್ದರು. ಈ ವೇಳೆ   ಸುದ್ದಿ ಸಂಸ್ಥೆಗೆ ಅವರು ಸಂದರ್ಶನ ನೀಡಿದ್ದರು. ಈ ಸಂದರ್ಶನದ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ತಿರುಚಲಾಗಿದೆ ಎನ್ನುವುದು ಅವರ ಆರೋಪ.  ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ರಣವೀರ್ ಸಿಂಗ್ ಹೊಗಳಿದ್ದರು. ಆದರೆ ಆ ಅಸಲಿ ವಿಡಿಯೋವನ್ನು ತಿರುಚಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ರಣವೀರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ ರೀತಿ ಬದಲಿಸಲಾಗಿದೆ.  ಇದಕ್ಕೆ ಸಂಬಂಧಿಸಿದಂತೆ ಇದೀಗ ವಿಡಿಯೋ ತಿರುಚಿದವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಡೀಪ್ ಫೇಕ್ ವಿಡಿಯೋದಲ್ಲಿ ರಣವೀರ್ ಸಿಂಗ್ ಅವರ ಧ್ವನಿಯನ್ನು ನಕಲು ಮಾಡಿ ಆಡಿಯೋ ಮರುಸೃಷ್ಟಿ ಮಾಡಲಾಗಿದೆ. ಅದರಲ್ಲಿ ನಟ, ಪ್ರಧಾನಿಯವರನ್ನು ಟೀಕಿಸುವಂತೆ ಮಾಡಲಾಗಿದೆ.  ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೀತಿ ಆಡಿಯೋ ತಿರುಚಿ ವೈರಲ್​ ಮಾಡಲಾಗುತ್ತಿದ್ದು, ಇದರ ವಿರುದ್ಧ  ದೂರು ದಾಖಲಾಗಿದೆ. 

ಶಿಕ್ಷೆ ಏನು? 
ಈ ರೀತಿ ಡೀಪ್​ ಫೇಕ್​ ವಿಡಿಯೋ ಹರಿಬಿಟ್ಟು ವ್ಯಕ್ತಿಗಳ ಘನತೆಗೆ ಕುಂದು ತಂದರೆ, ವಿವಿಧ ಕಾನೂನುಗಳ ಅಡಿಯಲ್ಲಿ ಹಲವು ಬಗೆಯ ಶಿಕ್ಷೆಗಳಿವೆ. ಐಟಿ ಕಾಯ್ದೆಯ  ಸೆಕ್ಷನ್ 66E ಪ್ರಕಾರ, ವ್ಯಕ್ತಿಗಳ ಅನುಮತಿ ಇಲ್ಲದೇ ಅವರ ವಿಡಿಯೋ ಅಥವಾ ಚಿತ್ರ ಪ್ರಕಟಿಸಿದರೆ ಅಂಥವರಿಗೆ  ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು  2 ಲಕ್ಷ ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಅದೇ ರೀತಿ, ಅಶ್ಲೀಲ ವಿಡಿಯೋ ಹರಿಬಿಟ್ಟರೆ ಇಲ್ಲವೇ ಇದೀಗ ನಟರಿಗೆ ಮಾಡಿದಂತೆ  ಕೃತಕವಾಗಿ ಮಾರ್ಫ್ ಮಾಡಿದ ಚಿತ್ರ, ವಿಡಿಯೋ ಹರಿಬಿಟ್ಟರೆ,  ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಐಟಿ  ಕಾಯ್ದೆಯ  ಸೆಕ್ಷನ್ 67, 67A ಮತ್ತು 67 B ಪ್ರಕಾರ ಕ್ರಮಮಕ್ಕೆ  ಸೂಚಿಸಲಾಗಿದೆ.  ಐಟಿ ಕಾಯ್ದೆಯ  ಸೆಕ್ಷನ್ 66D ಪ್ರಕಾರ,  ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಮೂಲಕ ಈ ರೀತಿ ಮಾರ್ಫ್​ ವಿಡಿಯೋ ಹರಿಬಿಟ್ಟು ಸುಳ್ಳು ಸುದ್ದಿ ಹರಡಿದರೆ ಅಂಥವರಿಗೆ  ಮೂರು ವರ್ಷಗಳವರೆಗೆ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇದೆ. 

ಕಾಂಗ್ರೆಸ್‌ನಿಂದ ಆಮೀರ್‌ ಖಾನ್ ಹೆಸರು ದುರ್ಬಳಕೆ: ಡೀಪ್‌ಫೇಕ್‌ ವಿರುದ್ಧ ನಟನಿಂದ ದೂರು- ಎಫ್‌ಐಆರ್‌

 

कांग्रेस के सम्मान में अल्लू अर्जून मैदान में। pic.twitter.com/7DUvAyjbLf

— Er. Priyanka Jha (@JhaPriyankha)
click me!