ನಟಿ ಮೃಣಾಲ್ ಠಾಕೂರ್ ಅವರು ತಮ್ಮ 'ಕಲ್ಯಾಣಿ ವಚ್ಚಾ ವಚ್ಚಾ' ಸಿನಿಮಾದ ಪಾತ್ರದ ಬಗ್ಗೆ ಕೂಡ ತುಂಬಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ...
ನಟಿ ಮೃಣಾಲ್ ಠಾಗೂರ್ (Mrunal Thakur) ಬಗ್ಗೆ ಈಗ ಇಡೀ ಇಂಡಿಯಾಗೇ ಗೊತ್ತಿದೆ. ಕಾರಣ, ಆಕೆ ಇಂದು ಬಹಳಷ್ಟು ಬೆಳೆದು ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಸೀತಾ ರಾಮಂನಲ್ಲಿ ಮೃಣಾಲ್ ಅಭಿನಯದ ಕಂಡು ಮೆಚ್ಚಿಕೊಳ್ಳದವರೇ ಇಲ್ಲ. ಲವ್ ಸೋನಿಯಾ, ಜೆರ್ಸಿ, ಹಾಗೂ ವಿಜಯ್ ದೇವರಕೊಂಡ ಜತೆ ನಟಿಸಿರುವ 'ದಿ ಫ್ಯಾ,ಮಿಲಿ ಸ್ಟಾರ್' ಯಾವುದೇ ಇರಲಿ, ಸಿನಿಮಾ ಕಥೆ ಒಂದಕ್ಕಿಂತ ಒಂದು ವಿಭಿನ್ನವೇ ಆಗಿದೆ. ಸಿನಿಮಾ ಯಾವುದೇ ಇರಲಿ, ಸೋಲಲಿ ಅಥವಾ ಗೆಲ್ಲಲಿ, ಆದರೆ ನಟಿ ಮೃಣಾಲ್ ಠಾಗೂರ್ ಅಭಿನಯದ ಬಗ್ಗೆ ಮೆಚ್ಚುಗೆ ಕಟ್ಟಿಟ್ಟ ಬುತ್ತಿ ಎನ್ನಬಹುದು.
ಇಂಥ ನಟಿ ಮೃಣಾಲ್ ಠಾಗೂರ್ ಸಂದರ್ಶನವೊಂದರಲ್ಲಿ ಮಾತನಾಡುತ್ತ 'ನನ್ನನ್ನು ನೀವು ಕೇಳಿದರೆ ನಾನು ಈ ಬಗ್ಗೆ ಹೇಳುವುದು ಏನೆಂದರೆ, ನಾನು ಒಂದು ಬಾರಿಗೆ ಒಂದೇ ಒಂದು ಸ್ಟೆಪ್ ಮಾತ್ರ ಹೋಗುತ್ತೇನೆ. ಒಂದು ಸಿನಿಮಾಗೆ ಮಾತ್ರ ಸಹಿ ಮಾಡುತ್ತೇನೆ, ಅದರಲ್ಲಿ ಸಂಪೂರ್ಣವಾಗಿ ಇನ್‌ವಾಲ್ವ್ ಆಗುತ್ತೇನೆ. ನಾನು ಅದರಲ್ಲೇ ಸಂತೋಷ ಕಾಣುತ್ತೇನೆ. ನಾನು ಸಮಾಜದಲ್ಲಿ ಸಣ್ಣ ಬದಲಾವಣೆಯನ್ನು ತರಲು ಇಷ್ಟಪಡುತ್ತೇನೆ. ನಾನು ಮಾಡುವ ಕೆಲಸದಲ್ಲಿ, ನನ್ನ ಜತೆ ಇರುವ ಜೀವಗಳಲ್ಲಿ ಖುಷಿಯನ್ನು ನಾನು ನೋಡಿದರೆ ನನಗದಷ್ಟೇ ಸಾಕು' ಎಂದಿದ್ದಾರೆ ನಟಿ ಮೃಣಾಲ್ ಠಾಕೂರ್.
ಮೃಣಾಲ್ ಸಿನಿಮಾಗಳೆಂದ್ರೆ ಒಳ್ಳೆಯ ಕಥೆಗಳು ಅಂತಾರೆ ಪ್ರೇಕ್ಷಕರು; ಹೀಗಂದಿದ್ದು ಯಾರಿರಬಹುದು ನೋಡಿ!
ಸೀತಾ ರಾಮಂ, ಹಾಯ್ ನನ್ನಾ, ದಿ ಫ್ಯಾಮಿಲಿ ಸ್ಟಾರ್, ಜೆರ್ಸಿ, ಕುಂಕಮ್ ಭಾಗ್ಯ,, ಲಸ್ಟ್ ಸ್ಟೋರೀಸ್, ಲವ್ ಸೋನಿಯಾ, ಸೂಪರ್ 30, ಗುಮ್ರಾಹ್, ಪಿಪ್ಪಾ ಹೀಗೆ ಲಿಸ್ಟ್‌ನಲ್ಲಿ ಸಾಕಷ್ಟಿವೆ. ತೆಲುಗು ಸಿನಿಮಾಗಳಿರಲಿ ಅಥವಾ ಹಿಂದಿ ಚಿತ್ರಗಳಿರಲಿ, ಅವುಗಳಲ್ಲಿ ನಟಿ ಮೃಣಾಲ್ ಠಾಕೂರ್ ಪಾತ್ರಗಳು ಮತ್ತೆ ಮತ್ತೆ ಸಿನಿಮಾ ನೋಡಬೇಕು ಎನ್ನುವಂತೆ ಮಾಡುತ್ತವೆ ಎನ್ನಬಹುದು.
ಸೂಪರ್ ಹಿಟ್ 'ಹನುಮಾನ್' ಸಿನಿಮಾ ಮಾಡಿದ್ದೇಕೆ; ಭಾರೀ ಸೀಕ್ರೆಟ್ ಬಿಚ್ಚಿಟ್ಟ ತೇಜಾ ಸಜ್ಜಾ!
ನಟಿ ಮೃಣಾಲ್ ಠಾಕೂರ್ ಅವರು ತಮ್ಮ 'ಕಲ್ಯಾಣಿ ವಚ್ಚಾ ವಚ್ಚಾ' ಸಿನಿಮಾದ ಪಾತ್ರದ ಬಗ್ಗೆ ಕೂಡ ತುಂಬಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ. ಸೌತ್ ಸಿನಿಮಾಗಳಲ್ಲಿ, ಅದರಲ್ಲೂ ನಾನು ನಟಿಸಿರುವ ತೆಲುಗು ಸಿನಿಮಾಗಳಲ್ಲಿ ಸಂಬಂಧಗಳ ಬಗ್ಗೆ, ಸಾಮಾಜಿಕ ಜವಾಬ್ದಾರಿ ಬಗ್ಗೆ ತುಂಬಾ ಚೆನ್ನಾಗಿ ಕಥೆಯಲ್ಲಿ ನಿರೂಪಿಸಿದ್ದಾರೆ. ನನಗದು ಇಷ್ಟವಾಗುತ್ತದೆ. ಏಕೆಂದರೆ, ನಮ್ಮ ಬದುಕು ಜನರ ಸುತ್ತಲೂ ಜನರಿಗಾಗಿಯೇ ನಡೆಯುತ್ತಾ ಇರುತ್ತದೆ.
ಕೋವಿಡ್ ಬಳಿಕ ಭಾಷೆ ಬ್ಯಾರಿಕೇಡ್ ಕಿತ್ತೆಸೆದು ನಟಿಸಿದೆ; ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ಯಾಕೆ?
ಅದನ್ನು ಸಿನಿಮಾ ಮೂಲಕ ಇಡಿ ಸಮಾಜ ಅನುಭವಿಸಿ ಅದೇ ಹ್ಯಾಂಗೋವರ್‌ನಲ್ಲಿ ತಮ್ಮವರ ಜತೆ ಇನ್ನೂ ಹೆಚ್ಚಿನ ಜನರನ್ನು ತಮ್ಮವರು ಎಂದುಕೊಂಡು ಸಹಬಾಳ್ವೆಗೆ ಹೆಚ್ಚಿನ ಒತ್ತು ಕೊಟ್ಟು ಲೈಫ್ ಲೀಡ್ ಮಾಡಿದರೆ ಅದು ನನಗೆ ಖುಷಿ ಕೊಡುತ್ತದೆ' ಎಂದಿದ್ದಾರೆ ನಟಿ ಮೃಣಾಲ್ ಠಾಕೂರ್. ಅಂದಹಾಗೆ, ಅವರು ನಟಿಸಿರುವ ಚಿತ್ರಗಳು ಸಾಕಷ್ಟಿವೆ ಹಾಗೂ ಅವುಗಳಲ್ಲಿ ಹೆಚ್ಚಿನವು ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿವೆ., ಜತೆಗೆ, ಮೃಣಾಲ್ ಠಾಕೂರ್ ನಟಿಸಿರುವ ಪಾತ್ರಗಳು ಜನಮೆಚ್ಚುಗೆ ಗಳಿಸಿವೆ.
'ಆಫ್ರಿಕಾದಲ್ಲಿ ಶೀಲಾ, ಭಾರತದಲ್ಲಿ ಸಾಲ' ಆಗಿದ್ದೇಕೆ, ವಿಕ್ಟೋರಿಯಾ ಫಾಲ್ಸ್ ಮೇಲೆ ಕ್ಯಾಮೆರಾ ಇಟ್ಟಿದ್ರಾ ದ್ವಾರಕೀಶ್!