ವಯಸ್ಕರ ಚಿತ್ರದಿಂದ ಹೊರಬಂದಿದ್ದು ಯಾಕೆ, ಲೀಲಾಜಾಲ ಬಿಟ್ಟ ಸೀಕ್ರೆಟ್ ಹೇಳ್ಬಿಟ್ರು ಸನ್ನಿ ಲಿಯೋನ್..!

Published : Jun 30, 2024, 08:32 PM ISTUpdated : Jun 30, 2024, 08:34 PM IST
ವಯಸ್ಕರ ಚಿತ್ರದಿಂದ ಹೊರಬಂದಿದ್ದು ಯಾಕೆ, ಲೀಲಾಜಾಲ ಬಿಟ್ಟ ಸೀಕ್ರೆಟ್ ಹೇಳ್ಬಿಟ್ರು ಸನ್ನಿ ಲಿಯೋನ್..!

ಸಾರಾಂಶ

ಕೆನಡಾದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಸನ್ನಿ ಲಿಯೋನ್ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲೇ ಕುಟುಂಬದ ಜೀವನ ನಿರ್ವಹಣೆಗೆ ಬೇಕರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಶ್ರೀಮಂತಿಕೆಯ ಕನಸು ಕಂಡಿದ್ದ ಸನ್ನಿಗೆ...

ಮಾದಕ ಚೆಲುವೆ, ಪೊಗದಸ್ತಾದ ಮೈಮಾಟ ಹೊಂದಿರುವ ನಟಿ ಸನ್ನಿ ಲಿಯೋನ್ (Sunny Leone) ಯಾರಿಗೆ ಗೊತ್ತಿಲ್ಲ ಹೇಳಿ? ಹದಿಹರೆಯದ ಹುಡುಗರಿಂದ ಹಿಡಿದು ಮಧ್ಯವಯಸ್ಸು ದಾಟಿ ಮುದಿತನಕ್ಕೆ ಜಾರುತ್ತಿರುವ ಗಂಡಸರಿಗೂ ಸನ್ನಿ ಲಿಯೋನ್ ಗೊತ್ತು ಎಂದು ಧಾರಾಳವಾಗಿ ಹೇಳಬಹುದು. ಪ್ರತಿಯೊಬ್ಬರ ಪುರುಷರ ಕನಸಿನಲ್ಲಿ ಕಾಲಿಡುವ ನಟಿ ಸನ್ನಿ ಲಿಯೋನ್ ನೀಲಿ ತಾರೆ (Adult movie) ಎಂದೂ ಸಹ ಗೊತ್ತು. ಮೊದಮೊದಲು ಹುಟ್ಟಿದ ದೇಶ ಕೆನಡಾ, ಪಕ್ಕದ ಅಮೇರಿಕಾ ಹೀಗೆ ಅಲ್ಲಿನ ವಯಸ್ಕರ ಚಿತ್ರದಲ್ಲಿ ನಟಿಸಿದ ಸನ್ನಿ ಲಿಯೋನ್ ಬಳಿಕವಷ್ಟೇ ಬಾರತಕ್ಕೆ ಬಂದವರು. 

ನಟಿ ಸನ್ನಿ ಲಿಯೋನ್ ಬಾಲ್ಯದಲ್ಲಿ ಬಹಳಷ್ಟು ಬಡತನ ಕಂಡವರು. ಕೆನಡಾದಲ್ಲಿ ಜನಿಸಿ ಅಲ್ಲಿಯೇ ಬಾಲ್ಯವನ್ನು ಕಳೆದಿರುವ ಸನ್ನಿ ಲಿಯೋನ್ ಭಾರತದ ಅಮ್ಮ ಹಾಗು ಕೆನಡಾದ ಅಪ್ಪ ಜೋಡಿಗೆ ಹುಟ್ಟಿದ ಮಗು. ಹೀಗಾಗಿ ಸನ್ನಿಗೆ ಭಾರತದ ಬೇರು ಸಹ ಇದೆ ಎನ್ನಬಹುದು. ಇಡೀ ಪ್ರಪಂಚದ ಗಮನ ಸೆಳೆದಿರುವ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ಇತ್ತೀಚೆಗೆ ಸಾಕಷ್ಟು ಬದಲಾಗಿದ್ದಾರೆ ಎಂಬುದು ಬಹತೇಕರಿಗೆ ಗೊತ್ತು. ಕೆಲವು ವರ್ಷಗಳ ಹಿಂದೆ ಸನ್ನಿ ಲಿಯೋನ್ ಎಂದರೆ ಸೆಕ್ಸ್ ಬಾಂಬ್, ಸೆಕ್ಸ್ ತಾರೆ ಎಂದೇ ಗುರುತಿಸಿಕೊಂಡಿದ್ದರು. 

ಮಳೆಗಾಲದ ನೈಟ್‌ ಬೆಚ್ಚಗಿರಿಸಲು ಅಡಲ್ಟ್‌ ಸಿನಿಮಾ ನಟಿ ಸನ್ನಿ ಲಿಯೋನ್ ಮಾದಕ ಫೋಟೋಸ್!

ಆದರೆ ಇಂದು ಸನ್ನಿ ಲಿಯೋನ್ ಮೊದಲಿಗೆ ಹೋಲಿಸಿಕೊಂಡರೆ ಬಹಳಷ್ಟು ಗೌರವ ಗಳಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸನ್ನಿಯ ಬಹುಮುಖ ವ್ಯಕ್ತಿತ್ವ ಹಾಗೂ ಸಮಾಜ ಸೇವೆ ಎನ್ನಬಹುದು. ಕೆನಡಾದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಸನ್ನಿ ಲಿಯೋನ್ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲೇ ಕುಟುಂಬದ ಜೀವನ ನಿರ್ವಹಣೆಗೆ ಬೇಕರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಶ್ರೀಮಂತಿಕೆಯ ಕನಸು ಕಂಡಿದ್ದ ಸನ್ನಿಗೆ ಆ ಕೆಲಸದಲ್ಲಿ ಸಂಬಳ ಕಮ್ಮಿ ಎನಿಸಿದಾಗ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ್ದರು. 

ಅದಿಲ್ಲ ಅಂದ್ರೆ ಮನುಷ್ಯ ಸತ್ತೋಗ್ಬಿಡ್ಬೇಕು, ಅದೂ ಒಂದ್ ಜೀವನನಾ; ನಟ ಯಶ್ ಪ್ರಶ್ನೆಗೆ ಉತ್ರ ಇದ್ಯಾ?

ಹೀಗೆ, ಎಲ್ಲಿ ಸಂಬಳ ಹೆಚ್ಚು ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತ ಹಣ ಸಂಪಾದನೆಗೆ ಹೆಚ್ಚು ಆಸಕ್ತಿ ತೋರಿಸಿದ್ದರು ಸನ್ನಿ ಲಿಯೋನ್. ಬಳಿಕ ಮ್ಯಾಗಝಿನ್ ಒಂದಕ್ಕೆ ಕವರ್ ಪೇಜ್‌ ಫೋಟೋಗೆ ಫೋಸ್‌ ಕೊಟ್ಟು ಫೇಮಸ್ ಆಗಿಬಿಟ್ಟರು ಸನ್ನಿ ಲಿಯೋನ್. ಅಲ್ಲಿಂದ ಮುಂದೆ ಖ್ಯಾತ ಮಾಡೆಲ್‌ ಆಗಿ ಬದಲಾದರು ಸನ್ನಿ ಲಿಯೋನ್. ಯಾರದೋ ಸಲಹೆಯ ಮೇರೆಗೆ ನೀಲಿ ಚಿತ್ರಜಗತ್ತಿಗೆ ಅರಿಯದೇ ಕಾಲಿಟ್ಟುಬಿಟ್ಟರು. ಆದರೆ, ಒಮ್ಮೆ ಕಾಲಿಟ್ಟ ಬಳಿಕ ಅದರಲ್ಲಿ ಸಾಕಷ್ಟು ಸಂಪಾದನೆ ಆಗುತ್ತಿದೆ ಎಂಬ ಕಾರಣಕ್ಕೆ ಹಲವು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಬಹಳಷ್ಟು ಹಣ ಸಂಪಾದಿಸಿದರು. 

ದರ್ಶನ್‌ ಪ್ರಾಣಕ್ಕೇ ಕಂಟಕವಿತ್ತು, ಅದು ತಪ್ಪಿಹೋಗಿ ಜೈಲಿನಲ್ಲಿ ಸೇಫ್ ಆಗಿದ್ದಾರೆ; ಹೀಗೊಂದು ಸುದ್ದಿ ವೈರಲ್!

ಆದರೆ, ಕತ್ತಲೆ ಕೋಣೆಯಲ್ಲಿ ಮಾಡುವ ಕೆಲಸ ಬೇಸರವಾಗಿ ಬೆಳಕಿನ ಜಗತ್ತಿಗೆ ಬರಬೇಕೆಂದು ಅನ್ನಿಸಿತಂತೆ ಸನ್ನಿ ಲಿಯೋನ್‌ಗೆ. ಕಾರಣ, ಅವರೇ ಹೇಳಿಕೊಂಡಂತೆ, 'ನಾನು ಬಾಲ್ಯದಲ್ಲಿದ್ದಾಗ ತುಂಬಾ ಬಡತನ ನೋಡಿದ್ದೆ. ಹೀಗಾಗಿ ಹಣ ಮಾಡಲು ಕತ್ತಲ ಜಗತ್ತಿನಲ್ಲಿ ಕೆಲಸ ಮಾಡಿದೆ. ಆದರೆ, ಬದುಕಿನ ಒಂದು ಹಂತದಲ್ಲಿ ನನಗೆ ಹಣವೇ ಎಲ್ಲವೂ ಅಲ್ಲ, ಅದನ್ನು ಮೀರಿದ ಜೀವನವಿದೆ ಎಂದು ಅರ್ಥವಾಯಿತು. ಹಣದಿಂದ ವಸ್ತಗಳನ್ನು ಕೊಳ್ಳಬಹುದೇ ಹೊರತೂ ಮಾನಸಿಕ ನೆಮ್ಮದಿ ಹಾಗೂ ಮನಶ್ಯಾಂತಿಯನ್ನಲ್ಲ. ಈಗಾಗಲೇ ನನ್ನಲ್ಲಿ ಹೇರಳವಾಗಿ ಹಣವಿದೆ. ಅದನ್ನೇ ದುಡಿಸಿಕೊಂಡರೂ ಬದುಕಿಗೆ ಸಾಕು ಎನ್ನಿಸಿತು, ಹೀಗಾಗಿ ನೀಲಿ ಚಿತ್ರಜಗತ್ತನ್ನು ತೊರೆದೆ' ಎಂದಿದ್ದಾರೆ.

ದೇವಿ ಭಕ್ತೆಯೊಬ್ಬರ ಮೂಲಕ ಭವಿಷ್ಯ ನುಡಿಸಿದ್ದರೂ, ಗೊತ್ತಿದ್ದೂ ನಟ ದರ್ಶನ್ ಕೇರ್‌ಲೆಸ್ ಮಾಡಿದ್ದೇಕೆ..?

ನಿಧಾನವಾಗಿ ಕತ್ತಲೆ ಲೋಕದಿಂದ ಬೆಳಕಿನ ಲೋಕಕ್ಕೆ ಬರಲು ಪ್ರಯತ್ನಿಸತೊಡಗಿದರು ಸನ್ನಿ ಲಿಯೋನ್. ನಿಧಾನವಾಗಿ ನಟಿ ಸನ್ನಿ ಲಿಯೋನ್ ಅವರಿಗೆ ತಮ್ಮಿಷ್ದಂತೆಯೇ ಬೆಳಕಿನ ಲೋಕ ತೆರೆದುಕೊಂಡಿತು. ಅಷ್ಟರಲ್ಲಾಗಲೇ ನಟಿ ಸನ್ನಿ ಲಿಯೋನ್ ನೀಲಿ ಚಿತ್ರದ ನಿರ್ಮಾಪಕರಾದ ಡೇನಿಯಲ್ ವೆಬರ್ (Daniel Weber) ಜತೆ ವಿವಾಹವಾಗಿ ಸಂಸಾರವನ್ನೂ ಶುರುವಿಟ್ಟುಕೊಂಡಿದ್ದರು. ಗಂಡ-ಹೆಂಡತಿ ತುಂಬಾ ಅನ್ಯೋನ್ಯವಾಗಿದ್ದರು. ಹೀಗಾಗಿ ಗಂಡನ ಜತೆ ಮಾತನಾಡಿ ಒಪ್ಪಿಗೆ ಪಡೆದುಕೊಂಡೇ ನಟಿ ಸನ್ನಿ ಲಿಯೋನ್ ಭಾರತಕ್ಕೆ ಬಂದರು. 

ಸಖತ್ ಕ್ಲಾಸ್ ತಗೊಂಡ್ರು ಅಗ್ನಿ ಶ್ರೀಧರ್, ಏನೋ ಇದೂ, ಬುದ್ದಿವಂತ ಆಗಿದ್ದೂ ಏನು ಮಾತಿದು ಉಪೇಂದ್ರ..?

ಈಗ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ ಒಂದು ಗಂಡು ಹಾಗು ಎರಡು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಂಸಾರದ ಸುಖಸವಿಯುತ್ತಿದ್ದಾರೆ. ಜತೆಗೆ, ಸಮಾಜದಲ್ಲಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತ ಹಲವರ ಕಂಬನಿ ಒರೆಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಬಡ ಮಕ್ಕಳನ್ನು ದತ್ತು ಸ್ವೀಕರಿಸಿ ಅವರಿಗೆ ಪೋಷಕರ ಪ್ರೀತಿ ತೋರಿಸುತ್ತಿದ್ದಾರೆ. ಇಂದು ಸನ್ನಿ ಲಿಯೋನ್‌ ಬಗ್ಗೆ ಎಲ್ಲರಿಗೂ ಗೌರವಾದರ ಇದೆ. ಕಾರಣ, ಅವರೀಗ ಬಹಳಷ್ಟು ಬದಲಾಗಿದ್ದಾರೆ, ಗೌರವದ ಜೀವನ ನಡೆಸುತ್ತಿದ್ದಾರೆ. ಮಾಡೆಲಿಂಗ್, ನಟನೆಯ ವೃತ್ತಿ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಅದರಲ್ಲೇನೂ ತಪ್ಪಿಲ್ಲ ಅಲ್ಲವೇ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?