Adnan Sami: ವೈದ್ಯರು ಸಾವಿನ ಡೇಟ್​ ಫಿಕ್ಸ್​ ಮಾಡಿದ್ದರು! ಆ ದಿನ ನೆನೆದ ಗಾಯಕ

Published : Apr 01, 2023, 03:25 PM IST
Adnan Sami: ವೈದ್ಯರು ಸಾವಿನ ಡೇಟ್​ ಫಿಕ್ಸ್​ ಮಾಡಿದ್ದರು! ಆ ದಿನ ನೆನೆದ ಗಾಯಕ

ಸಾರಾಂಶ

ಒಂದೊಮ್ಮೆ 230 ಕೆ.ಜಿ.ತೂಕವಿದ್ದ ಖ್ಯಾತ ಗಾಯಕ ಅದ್ನಾನ ಸಾಮಿ 75 ಕೆ.ಜಿಗೆ ಇಳಿದದ್ದು ಯಾಕೆ? ಭಯಾನಕ ಗುಟ್ಟು ರಟ್ಟು ಮಾಡಿದ ಗಾಯಕ  

ಭಾರತದ ಖ್ಯಾತ ಗಾಯಕ ಅದ್ನಾನ್ ಸಾಮಿ (Adnan Sami) ಹಾಡಿಗೆ ಮೋಡಿಯಾಗದವರೇ ಇಲ್ಲವೆನ್ನಬಹುದೇನೋ.  ಅಂಥ ಅದ್ಭುತ ಗಾಯಕ ಅವರು. ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿದ್ದ ಅದ್ನಾನ್ ಸಾಮಿ 2005-06ರ ಸಮಯದಲ್ಲಿ ದಿಢೀರ್ ನಾಪತ್ತೆಯಾಗಿದ್ದರು. 2013ರ ಅಷ್ಟೊತ್ತಿಗೆ ತೆಳ್ಳಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಯಂಗ್​ ಆ್ಯಂಡ್​ ಸ್ಮಾರ್ಟ್​ ಆಗಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಫ್ಯಾನ್ಸ್​ ಸಂಪೂರ್ಣ ಶಾಕ್​ಗೆ ಒಳಗಾಗಿದ್ದರೂ, ಹೊಸ ಅದ್ನಾನಿ ಅವರ ಫಿಟ್​ನೆಸ್​ಗೆ ಫಿದಾ ಆಗಿದ್ದರು.  ಅಷ್ಟಕ್ಕೂ ಅದ್ನಾನಿ ಸಾಮಿ ಪ್ರಾರಂಭದಲ್ಲಿ ಇದ್ದುದು 230 ಕೆ.ಜಿ.  ಗುಂಡುಗುಂಡಾಗಿ ಇದ್ದ ಅವರು  155 ಕೆಜಿ ತೂಕ ಇಳಿಸಿಕೊಂಡು  75 ಕೆಜಿ ಆಗಿ ಅಚ್ಚರಿ ಮೂಡಿಸಿದ್ದರು. ಆಗ ಹೊಸ ಫೋಟೋ ಶೇರ್​ (Photo share) ಮಾಡಿಕೊಂಡಾಗ ಅವರಿಗೆ ಪ್ರಶ್ನೆಗಳ ಸುರಿಮಳೆಯೇ ಆಗಿತ್ತು. ನಂತರ ತಾವು ತೂಕ ಇಳಿಸಿಕೊಂಡಿ ರುವ ಬಗ್ಗೆ ವಿವರಿಸಿದ್ದ ಅದ್ನಾನಿ ಅವರು, ದಿನ ಬೆಳಗ್ಗೆ ಸಕ್ಕರೆ ಇಲ್ಲದ ಟೀ ಕುಡಿಯುವ ಮೂಲಕ ದಿನ ಪ್ರಾರಂಭ ಮಾಡುತ್ತೇನೆ.  ಮಧ್ಯಾಹ್ನದ ಊಟಕ್ಕೆ ವೆಜಿಟೇಬಲ್ ಸಲಾಡ್, ಫಿಶ್ ಮಾತ್ರ ಸೇವಿಸುತ್ತೇನೆ.  ಡಿನ್ನರ್‌ಗೆ ಖಾಲಿ ಬೇಯಿಸಿದ ದಾಲ್ ಮತ್ತು ಚಿಕನ್ ಸೇವಿಸುತ್ತೇನೆ. ಬಳಿಕ  40 ಕೆಜಿ ತೂಕ ಕಡಿಮೆಯಾದ ಬಳಿಕ ಅದ್ನಾನ್ ಜಿಮ್​ಗೆ  ಸೇರಿದರು. ಹಾರ್ಡ್ ವರ್ಕೌಟ್ ಮತ್ತು ಡಯಟ್‌ನಿಂದ ತೂಕ ಇಳಿಸಿಕೊಂಡು ತೆಳ್ಳಗಾಗಿ ಈಗ ಸ್ಮಾರ್ಟ್​ ಆಗಿ ಕಾಣಿಸುತ್ತಿದ್ದಾರೆ.

ಬಳಿಕ ತೂಕ ಇಳಿಸಿಕೊಂಡ ಬಗ್ಗೆ ಮತಾನಾಡಿದ್ದ ಅದ್ನಾನ್ ಸಾಮಿ, 'ನಾನು 155 ಕೆಜಿ ತೂಕ ಇಳಿಸಿಕೊಂಡಿದ್ದೀನಿ. ನನ್ನ ದೇಹದಿಂದ ಇಬ್ಬರನ್ನು ಹೊರ ಹಾಕಿದ ಹಾಗಾಗಿದೆ. ಜನ ನನ್ನನ್ನು ಈಗ ಗುರುತು ಹಿಡಿಯುತ್ತಿಲ್ಲ. ಆದರೆ ನನಗೆ ತುಂಬಾ ಖುಷಿ ಇದೆ. ನನಗೆ ಶಕ್ತಿ ಇನ್ನಷ್ಟು ಹೆಚ್ಚಾಗಿದೆ. ನನ್ನ ತೂಕ ಇಳಿಕೆಯ ಸಂಪೂರ್ಣ ಪಯಣದ ಬಳಿಕ ನಾನು ಅಭಿಮಾನಿಗಳ ಮುಂದೆ ಬಂದಿದ್ದೀನಿ' ಎಂದು ಹೇಳಿದ್ದರು.  ತುಂಬಾ ಕಟ್ಟುನಿಟ್ಟಾಗಿ ಡಯಟ್ (Diet) ಫಾಲೋ ಮಾಡುತ್ತಿದ್ದೇನೆ ಎಂದಿದ್ದರು. ಇದರ ಹೊರತಾಗಿಯೂ ಹೆಚ್ಚಿನವರು ಇವರ ಡಯೆಟ್​ ಫುಡ್​ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.  ತೂಕ ಇಳಿಸಿಕೊಳ್ಳಲು ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಕೆಲವು ನಟ-ನಟಿಯರು ಸೇರಿದಂತೆ ಸೆಲೆಬ್ರಿಟಿಗಳು ಹಾಗೂ ಗಣ್ಯರು ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದುಂಟು.  ಅದೇ ರೀತಿ ಅದ್ನಾನ್​ ಅವರೂ ಮಾಡಿದ್ದಾರೆ ಎನ್ನಲಾಗಿತ್ತು. 

Sushmita Sen: ಮ್ಯಾಸೀವ್​ ಹಾರ್ಟ್​ ಅಟ್ಯಾಕ್​ಗೆ ಒಳಗಾಗಿದ್ದ ನಟಿ ಸುಶ್ಮಿತಾ ಸೇನ್​ ಹೇಳಿದ್ದೇನು?

ಆದರೆ ಇದು ಸುಳ್ಳು ಎಂದಿದ್ದ ಅದ್ನಾನ್​ ಅವರು ತಮ್ಮ ಡಯೆಟ್​ ಗುಟ್ಟನ್ನು ಬಹಿರಂಗಗೊಳಿಸಿದ್ದರು. ಸ್ವಲ್ಪ ವರ್ಷ ಬಿಟ್ಟು ನೋಡಿದರೆ ಇವರು ಅವರೇ ಹೌದೋ, ಅಲ್ಲವೋ ಎನ್ನುವಷ್ಟರ ಮಟ್ಟಿಗೆ ಅದ್ನಾನ್​ ಅವರು ಬದಲಾಗಿದ್ದಾರೆ. ಸ್ಮಾರ್ಟ್​, ಯಂಗ್​ ಆಗಿ ಕಾಣಿಸುತ್ತಿರುವ ಅವರು ತಾವು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಇದ್ದಕ್ಕಿದ್ದಂತೆಯೇ ತೂಕ ಕಡಿಮೆ ಮಾಡಿಕೊಂಡಿದ್ದ ವಿಷಯವನ್ನು ಮಾತ್ರ ಅವರು ಬಹಿರಂಗಪಡಿಸಿರಲಿಲ್ಲ. 155 ಕೆ.ಜಿ ತೂಕ ಇಳಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ, ಅವರು ತೀರಾ ದಪ್ಪಗಿದ್ದುದರ (Fat) ಬಗ್ಗೆ ಅದಾಗಲೇ ಹಲವರು ಅವರಿಗೆ ಎಚ್ಚರಿಕೆ ನೀಡಿದ್ದರೂ, ಅದನ್ನು ಅದ್ನಾನ್​ ಅವರು ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ. ಆದರೆ ಏಕಾಏಕಿ ತೂಕ ಇಳಿಸಿಕೊಳ್ಳುವ ಯೋಚನೆ ಏಕೆ ಬಂತು ಎಂಬ ಗುಟ್ಟನ್ನು ಈಗ ಅವರು ರಟ್ಟು ಮಾಡಿದ್ದಾರೆ. ತಮ್ಮ ಡಯೆಟ್​ ಬಗ್ಗೆಯಷ್ಟೇ ಹೇಳಿದ್ದ ಅದ್ನಾನ್​ ಅವರು ಇದೇ ಮೊದಲ ಬಾರಿಗೆ ತೂಕ ಇಳಿಸಿಕೊಂಡದ್ದು ಏಕೆ ಎನ್ನುವ ಬಗ್ಗೆ ಬಹಿರಂಗಗೊಳಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ,  ನೀವು ಹೀಗೆಯೇ ತೂಕದ ವ್ಯಕ್ತಿ ಆಗಿದ್ದರೆ ಬದುಕುವುದು ಕೇವಲ 6 ತಿಂಗಳು ಮಾತ್ರ ಎಂದು ಡಾಕ್ಟರ್​ ಹೇಳಿದ್ದರಂತೆ! ಇದೊಂದು ಮಾತು ಅದ್ನಾನ್​ ಅವರ ಬದುಕನ್ನೇ ಬದಲಿಸಿತು. ಅಲ್ಲಿಯವರೆಗೆ ತಮ್ಮ ತೂಕದ ಬಗ್ಗೆ ತಲೆ ಕೆಡಿಸಿಕೊಂಡಿರುವ ಗಾಯಕ (Singer), ವೈದ್ಯರು ಹೀಗೆ ಹೇಳುತ್ತಿದ್ದಂತೆಯೇ ಆ್ಯಕ್ಟೀವ್​ ಆಗಿ ತೂಕ ಇಳಿಸಿಕೊಳ್ಳುವ ಮನಸ್ಸು ಮಾಡಿದ್ದರಂತೆ.   ವೆಬ್‌ಸೈಟ್ ಒಂದಕ್ಕೆ ನೀಡಿರುವ  ಸಂದರ್ಶನದಲ್ಲಿ ತಮ್ಮ ಈ ಗುಟ್ಟನ್ನು ಅದ್ನಾನ್​ ಅವರು ಬಹಿರಂಗಪಡಿಸಿದ್ದಾರೆ.  2006 ರಲ್ಲಿ ಈ ಘಟನೆ ನಡೆದಿದ್ದು, ವೈದ್ಯರು ನನ್ನ ಸಾವಿನ ಡೇಟ್​ ಫಿಕ್ಸ್​ ಮಾಡಿದ್ದರಿಂದ ತೂಕ ಇಳಿಸಿಕೊಂಡೆ ಎಂದಿದ್ದಾರೆ.   ವೈದ್ಯರು ಹೀಗೆ ಹೇಳುತ್ತಿದ್ದಂತೆಯೇ, ಪೌಷ್ಟಿಕ ತಜ್ಞರನ್ನು ಭೇಟಿ ಮಾಡಿದಾಗ ತೂಕ ಇಳಿಸಿಕೊಳ್ಳುವ ಬಗ್ಗೆ ವಿವರಿಸಿದರು. ನಾನು ಹೀಗೆ ಸ್ಮಾರ್ಟ್​ ಆಗುವುದಕ್ಕೆ ಅವರೇ ಕಾರಣ ಎಂದಿದ್ದಾರೆ.  ತೂಕ ಇಳಿಸಿಕೊಳ್ಳುವುದು ತುಂಬಾನೇ ಕಷ್ಟದ ಕೆಲಸವಾಗಿತ್ತು. ಹಲವಾರು ಆಹಾರಕ್ರಮಗಳನ್ನು ಪ್ರಯತ್ನಿಸಿದರೂ, ಅಂತಿಮವಾಗಿ ತಮ್ಮ ಲೈಫ್ ಸ್ಟೈಲ್ (Lifestyle) ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ ಎಂದಿದ್ದಾರೆ.

Priyanka Chopra: ನಿಕ್​ ಜೊತೆ ಡೇಟಿಂಗ್​ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?