ಮಂಚದಲ್ಲಿ ಸಹಕರಿಸಿಲ್ಲವೆಂದು ಚಿತ್ರದಿಂದಲೇ ತೆಗೆದುಬಿಟ್ರು: ಕರಾಳ ಅನುಭವ ಬಿಚ್ಚಿಟ್ಟ 'ಲಂಕೇಶ್​ ಪತ್ರಿಕೆ' ನಟಿ ಅದಿತಿ!

By Suvarna News  |  First Published Dec 6, 2023, 5:01 PM IST

 ಮಂಚದಲ್ಲಿ ಸಹಕರಿಸಿಲ್ಲವೆಂದು ಚಿತ್ರದಿಂದಲೇ ತೆಗೆದುಬಿಟ್ರು: ಕರಾಳ ಅನುಭವ ಬಿಚ್ಚಿಟ್ಟ 'ಲಂಕೇಶ್​ ಪತ್ರಿಕೆ' ನಟಿ ಅದಿತಿ! 
 


ಇದಾಗಲೇ ಹಲವಾರು ತಾರೆಯರು ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಈ ಕೆಟ್ಟ ಅನುಭವ ಆಗಿದ್ದಿದೆ. ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ತಮ್ಮ ಜೊತೆ ಮಲಗಲು ನೇರವಾಗಿ ಆಹ್ವಾನವಿತ್ತ ನಟರು, ನಿರ್ದೇಶಕರು, ನಿರ್ಮಾಪಕರು ಮುಂತಾದವರ ಬಗ್ಗೆ ಇದಾಗಲೇ ಹಲವರು ಮಾತನಾಡಿದ್ದು, ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಅದರಲ್ಲಿಯೂ ಬಾಲಿವುಡ್‌ನಲ್ಲಿ ಸದಾ ಅವಕಾಶ ಸಿಗಬೇಕು ಎಂದರೆ ಇದು ಅನಿವಾರ್ಯ, ಇಲ್ಲದಿದ್ದರೆ ಚಿತ್ರರಂಗದಿಂದಲೇ ಹೊರಹಾಕಲಾಗುತ್ತದೆ ಎನ್ನುವ ಮಾತುಗಳನ್ನೂ ಆಡಿದ್ದಾರೆ. ಇದೀಗ ತಮಗಾಗಿರುವ ನೋವನ್ನು ತೋಡಿಕೊಂಡಿದ್ದಾರೆ ನಟಿ  ಹಾಗೂ ‘ಮಿಸಸ್ ವರ್ಲ್ಡ್​’  ಅದಿತಿ ಗೋವಿತ್ರಿಕರ್ (Aditi Govitrikar).

ತಾವು ಸಿನಿಮಾದಲ್ಲಿ ದೊಡ್ಡವರು ಹೇಳಿದಂತೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಶೂಟಿಂಗ್ ಕೂಡ ಪೂರ್ಣಗೊಳಿಸದೇ ಅರ್ಧದಲ್ಲಿಯೇ ಚಿತ್ರರಂಗದಿಂದ ಹೊರಕ್ಕೆ ಹಾಕಿದರು ಎಂದು ಹೇಳಿದ್ದಾರೆ ಅದಿತಿ. ಯಾರ ಹೆಸರನ್ನೂ ಹೇಳದ ನಟಿ, ತಮಗಾಗಿರುವ ಕಾಸ್ಟಿಂಗ್​ ಕೌಚ್​ ಭಯಾನಕ ಅನುಭವವನ್ನು ತೆರೆದಿದ್ದಾರೆ. ಸಿದ್ದಾರ್ಥ್ ಖನ್ನಾ ಅವರ ಜೊತೆಗಿನ ಸಂದರ್ಶನದಲ್ಲಿ ಅವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.  ‘ದೊಡ್ಡ ಸಿನಿಮಾ ಶೂಟಿಂಗ್​ಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದೆ. ಅಲ್ಲಿ ಆ ವ್ಯಕ್ತಿಯ ನಡವಳಿಕೆ ತುಂಬಾ ವಿಚಿತ್ರ ಎನಿಸಿತು. ಆದರೆ ನನಗೆ ಆ ಕ್ಷಣದಲ್ಲಿ ನಿಜವಾಗಿಯೂ ಆ ವ್ಯಕ್ತಿಗೆ ಏನು ಬೇಕೋ ಅರಿವಾಗಲಿಲ್ಲ. ಆತ ಏನೋ ಹೇಳಿದಾಗ, ಅದು ಅಸಭ್ಯ ರೀತಿ ಎನಿಸಿತು. ಆದರೆ ಎದುರು ಮಾತನಾಡುವುದು ಸರಿ ಎನಿಸಲಿಲ್ಲ. ಅವರು ಏನೋ ಕೇಳಿದರು.  ನಾನು ನಕ್ಕು ಅಲ್ಲಿಂದ ನಡೆದೆ ಮತ್ತು ನೀವು ಮೂರ್ಖರಾ ಎಂದು ಕೇಳಿದೆ. 
ಸಿನಿಮಾದಲ್ಲಿ ಸಂಪೂರ್ಣ ಬೆತ್ತಲಾದ್ರೆ ಹೀಗೂ ಆಗತ್ತಾ? 'ಅನಿಮಲ್​' ನಟಿ ತೃಪ್ತಿ ದಿಮ್ರಿಗೆ ಡಬಲ್​ ಧಮಾಕಾ!

Tap to resize

Latest Videos

ಇಷ್ಟು ಆಗುತ್ತಿದ್ದಂತೆಯೇ ಆ ವ್ಯಕ್ತಿಯ  ಅಹಂಗೆ ಪೆಟ್ಟು ಬಿದ್ದಿತು ಎನಿಸಿತು. ಆ ಕ್ಷಣವೇ ಶೂಟಿಂಗ್​ ಪ್ಯಾಕ್​ ಅಪ್​ ಮಾಡಿ  ಮುಂಬೈಗೆ ತೆರಳುವಂತೆ ಹೇಳಿದರು. ಆಗಲೂ ನನಗೆ ಏನು ಆಗುತ್ತಿದೆ ಎನ್ನುವುದು ತಿಳಿಯಲಿಲ್ಲ.  ಏಕೆಂದರೆ ಅವರು ಅಂಥ ವ್ಯಕ್ತಿ ಎಂದು ನನ್ನ ಅರಿವಿಗೆ ಬರಲೇ ಇಲ್ಲ. ನಂತರ ಮುಂಬೈಗೆ ಬಂದ ಮೇಲೆ ಇನ್ನು ನಾಲ್ಕೇ ದಿನವಿತ್ತು ಶೂಟಿಂಗ್​  ಮುಗಿಯಲು. ಅವರು ನೇರವಾಗಿಯೇ ಅವರು ಬಯಸ್ಸಿದ್ದನ್ನು ಹೇಳಿದರು. ಮಂಚದಲ್ಲಿ ಸಹಕರಿಸುವ ರೀತಿಯಲ್ಲಿ ಮಾತನಾಡಿದಾಗ  ನನಗೆ ಶಾಕ್​ ಆಯಿತು. ಆಗ ನನಗೆ ಎಲ್ಲವೂ ಅರಿವಾಯಿತು. ನಾನು ಅವರ ಆಸೆಯಂತೆ ನಡೆದುಕೊಳ್ಳಲು ಸಾಧ್ಯವೇ ಇಲ್ಲ, ಹಾಗೆ ಸಹಕರಿಸಲು ಆಗುವುದಿಲ್ಲ ಎಂದೆ.  ಹೀಗಾಗಿ ಸಿನಿಮಾದಿಂದಲೇ ನನ್ನನ್ನು ತೆಗೆದು ಹಾಕಿದರು ಎಂದಿದ್ದಾರೆ.
 
ಅಂದಹಾಗೆ, ಅದಿತಿ ಗೋವಿತ್ರಿಕರ್ ಅವರು ಭಾರತದ ಮೊದಲ ಮಿಸೆಸ್ ವರ್ಲ್ಡ್ ಆದವರು. ಅವರು ಬಾಲಿವುಡ್‌ನ ಮೊದಲ MBBS ನಟಿ ಕೂಡ. ಅ ಮೇ 21, 1976 ರಂದು ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ಜನಿಸಿದ ಇವರು,  1997 ರಲ್ಲಿ ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ತಮ್ಮ MBBS ಅನ್ನು ಪೂರ್ಣಗೊಳಿಸಿದರು. ಗೋವಿತ್ರಿಕರ್ ಅವರು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ MS ಮುಗಿಸಿದ ನಂತರ ಮಾಡೆಲಿಂಗ್ ಪ್ರಾರಂಭಿಸಿದರು. ಅದಿತಿ 1996 ರಲ್ಲಿ ಗ್ಲಾಡ್ರಾಗ್ಸ್ ಮೆಗಾಮಾಡೆಲ್ ಸ್ಪರ್ಧೆಯನ್ನು ಗೆದ್ದರು ಮತ್ತು ಇದು ಗ್ಲಾಮರ್ ಜಗತ್ತಿನಲ್ಲಿ ಅವರ ಪ್ರವೇಶವನ್ನು ಗುರುತಿಸಿತು. ಅದಿತಿ ,  ಹೃತಿಕ್ ರೋಷನ್ ಅವರೊಂದಿಗೆ ಪಾಂಡ್ಸ್, ಕಾಯಾ ಸ್ಕಿನ್ ಕ್ಲಿನಿಕ್ ಮತ್ತು ಕೋಕಾ-ಕೋಲಾದಂತಹ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ರಿಲೀಸ್ ಆದ ‘ತಮ್ಮುಡು’ ಸಿನಿಮಾ ಮೂಲಕ ಅದಿತಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. 2001ರಲ್ಲಿ ಅವರು ‘ಮಿಸಸ್ ವರ್ಲ್ಡ್​’ ಟೈಟಲ್ ಪಡೆದರು. ಈ ಟೈಟಲ್ ಪಡೆದ ಮೊದಲ ಮಹಿಳೆ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿದೆ. ಅದಿತಿ ಅವರು ಸದ್ಯ ‘ಭೇಜಾ ಫ್ರೈ 2’ ಹಾಗೂ ‘ಪಹೇಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಶಾರುಖ್ ಖಾನ್-ಪ್ರಿಯಾಂಕಾ ಚೋಪ್ರಾ ಮದ್ವೆ ಆಗಿದ್ರಾ? ಏನಿದು ಹೊಸ ಸುದ್ದಿ?

click me!