ನಟ ಆಮೀರ್ ಖಾನ್ ಡ್ರಗ್ಸ್ ತಗೊಂಡು ಲೈವ್ಗೆ ಬಂದ್ರಾ? ಅಂಬಾನಿ ಫಂಕ್ಷನ್ನಲ್ಲಿ ಕುಣಿಯಲು ಚಾರ್ಜ್ ಮಾಡಿದ್ರಾ? ನೆಟ್ಟಿಗರ ಪ್ರಶ್ನೆಗೆ ನಟನ ಉತ್ತರ ಹೀಗಿದೆ ನೋಡಿ...
ಆಮೀರ್ ಖಾನ್ ತಮ್ಮ ಮುಂದಿನ ಚಿತ್ರ 'ಸಿತಾರೆ ಜಮೀನ್ ಪರ್' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸೇರಿದಂತೆ ಒಂದಾದ ಮೇಲೊಂದರಂತೆ ಸಿನಿಮಾ ಹೀನಾಯವಾಗಿ ಸೋಲುತ್ತಿರುವುದರಿಂದ ಮುಂದಿನ ಚಿತ್ರಗಳ ಆಯ್ಕೆಯಲ್ಲಿ ಅವರು ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಅವರ ಮುಂಬರುವ ಚಿತ್ರದ ಸೆಟ್‌ಗಳಿಂದ, ಅಮೀರ್ ಲೈವ್ ಇನ್‌ಸ್ಟಾಗ್ರಾಮ್ ಸೆಷನ್ ಮಾಡಿದರು. ಇದರಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು ಮತ್ತು ಸೂಪರ್ ಸ್ಟಾರ್ ಉತ್ತರಿಸಿದರು. ಕೆಲವು ವಿಚಿತ್ರ ಪ್ರಶ್ನೆಗಳಿಂದಾಗಿ ಆಮೀರ್ ಟ್ರೋಲಿಂಗ್ ಎದುರಿಸಬೇಕಾಯಿತು.
ಮೊದಲನೆಯದಾಗಿ, ಈ ಸೆಷನ್ನಲ್ಲಿ ನಟ 'ಮಿಸ್ಸಿಂಗ್ ಲೇಡೀಸ್' ಚಿತ್ರದಲ್ಲಿನ ರೋಲ್ ಬಗ್ಗೆ ಫ್ಯಾನ್ ಒಬ್ಬರು ಅಸಮಾಧಾನ ವ್ಯಕ್ತಪಡಿಸಿ, ಶೈಲಿಯನ್ನು ಬದಲಾಯಿಸುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್, 'ಅದು ಚೆನ್ನಾಗಿದೆ...ನನ್ನ ಶೈಲಿ ವಿಶಿಷ್ಟವಾಗಿದೆ, ಆದ್ದರಿಂದ ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ, ಆದ್ದರಿಂದ ಇದನ್ನು ಹೆಚ್ಚು ಜನರು ಹೊಗಳುವುದಿಲ್ಲ' ಎಂದು ಹೇಳಿದರು. ಇದೇ ವೇಳೆ ಇನ್ನೊಬ್ಬ ಕಮೆಂಟಿಗ , 'ಸರ್, ನೀವು ಡ್ರಗ್ಸ್ ತೆಗೆದುಕೊಳ್ಳುತ್ತೀರಿ ಎಂದು ತೋರುತ್ತದೆ, ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ' ಎಂದು ಹೇಳಿದರು. ಇದಕ್ಕೂ ಉತ್ತರಿಸಿದ ನಟ, ನೀವು ಏನು ಹೇಳುತ್ತಿದ್ದೀರಿ’ ಎಂದು ಆಮಿರ್ ಖಾನ್ ಮರುಪ್ರಶ್ನೆ ಹಾಕಿದ್ದಾರೆ. ಆ ಮೂಲಕ ತಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ದುಡ್ಡಿಗಾಗಿ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ಸ್ಟಾರ್ಗಳಿಗೆ ಕಂಗನಾ ರಣಾವತ್ ಟಾಂಗ್!
ಆದರೆ, ಅಭಿಮಾನಿಗಳು ಇಲ್ಲಿಗೆ ನಿಲ್ಲಲಿಲ್ಲ ಮತ್ತು ಒಬ್ಬರು ನೀವು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪೂರ್ವದಲ್ಲಿ ಡ್ಯಾನ್ಸ್ ಮಾಡಿದ್ದೀರಿ, ಆದರೆ ನಿಮ್ಮ ಮಗಳು ಆಯ್ರಾ ಮದುವೆಯಲ್ಲಿ ಏಕೆ ನೃತ್ಯ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಈ ಸಮಾರಂಭದಲ್ಲಿ ನಟಿಸಲು ಬಹುತೇಕ ಎಲ್ಲಾ ಸ್ಟಾರ್ಗಳು ತೆಗೆದುಕೊಳ್ಳುವಂತೆ ಮೂರು ಖಾನ್ಗಳು ಕೋಟ್ಯಂತರ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ತಾವು ದುಡ್ಡನ್ನು ತೆಗೆದುಕೊಂಡಿಲ್ಲ ಎನ್ನುವ ಅರ್ಥ ಬರುವಂತೆ ಆಮೀರ್ ಅವರು, ಸಭ್ಯ ಪ್ರತಿಕ್ರಿಯೆ ನೀಡಿ, ನನ್ನ ಮಗಳ ಮದುವೆಯಲ್ಲೂ ಡ್ಯಾನ್ಸ್ ಮಾಡಿದ್ದೇನೆ, ಹಾಗೆ ಈಗಲೂ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ. ಮುಕೇಶ್ ಅಂಬಾನಿ ಅವರ ಬಗ್ಗೆ ಮಾತನಾಡುತ್ತಾ, ಅವರು ತುಂಬಾ ಫ್ಯಾಮಿಲಿ ಫ್ರೆಂಡ್ಸ್ ಮತ್ತು ಪರಸ್ಪರರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುತ್ತೇವೆ. ಇದರಲ್ಲೇನೂ ವಿಶೇಷ ಇಲ್ಲ ಎಂದಿದ್ದಾರೆ.
ಅಷ್ಟಕ್ಕೂ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಅನೇಕ ಬಾಲಿವುಡ್ ತಾರೆಯರು ಪ್ರದರ್ಶನ ನೀಡಿದರು. ಇವುಗಳಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರ ಡ್ಯಾನ್ಸ್ ದೊಡ್ಡ ಹೈಲೈಟ್ ಆಗಿತ್ತು. ಮೂವರೂ ಖಾನ್‌ಗಳನ್ನು ಒಟ್ಟಿಗೆ ವೇದಿಕೆಯ ಮೇಲೆ ನೋಡಿದ್ದು ಆಶ್ಚರ್ಯಕ್ಕಿಂತ ಕಡಿಮೆಯಿಲ್ಲ. ಹೇಳಿಕೇಳಿ ಈ ಖಾನ್ಗಳು ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಲು ದುಬಾರಿ ಶುಲ್ಕ ವಿಧಿಸುತ್ತಾರೆ. ಇದೇ ಕಾರಣಕ್ಕೆ ಮೂವರನ್ನೂ ಒಟ್ಟಿಗೆ ಸೇರಿಸಲು ಸಾಧ್ಯವೇ ಇಲ್ಲ ಎಂದು ಶಾರುಖ್ ಹೇಳಿದ್ದರು. ನಿಮ್ಮ ಚಡ್ಡಿ, ಬನಿಯನ್ ಮಾರಿದ್ರೂ ಯಾರೊಬ್ಬರಿಗೂ ಇದು ಸಾಧ್ಯವಿಲ್ಲ ಎಂದಿದ್ದರು. ಹಾಗಿದ್ದ ಮೇಲೆ ಪುಕ್ಕಟೆ ಕುಣಿಯಲು ಸಾಧ್ಯವೇ ಎನ್ನುವುದನ್ನು ಈಗಲೂ ನೆಟ್ಟಿಗರು ಕೇಳುತ್ತಿದ್ದಾರೆ.