ಭೂಕಂಪನದ ಭಯಕ್ಕೆ ನಟ ಆದಿಲ್ ಹುಸೆನ್ ಮನೆಯಿಂದ ಓಡಿ ಬಂದಿದ್ದಾರೆ. ಮನೆ ಬಿಟ್ಟು ಬರುವ ರಭಸಕ್ಕೆ ನಟ ಆದಿಲ್ ಹಣ ಮತ್ತು ಕಾರ್ಡ್ ಎಲ್ಲವನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ.
ಭೂಕಂಪನದ ಭಯಕ್ಕೆ ನಟ ಆದಿಲ್ ಹುಸೆನ್ ಮನೆಯಿಂದ ಓಡಿ ಬಂದಿದ್ದಾರೆ. ಮನೆ ಬಿಟ್ಟು ಬರುವ ರಭಸಕ್ಕೆ ನಟ ಆದಿಲ್ ಹಣ ಮತ್ತು ಕಾರ್ಡ್ ಎಲ್ಲವನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಬಳಿಕ ಮನೆ ಇಲ್ಲದೆ ಪರದಾಡುತ್ತಿದ್ದ ನಟ ಆದಿಲ್ ಸ್ನೇಹಿತನ ಮನೆಯಲ್ಲಿ ಆಶ್ರಾಯ ಪಡೆದಿದ್ದಾರೆ. ಸದ್ಯ ಸ್ನೇಹಿತನ ಮನೆಯಲ್ಲಿ ಇರುವುದಾಗಿ ನಟ ಆದಿಲ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಕಷ್ಟಕಾಲದಲ್ಲಿ ಉಳಿಯಲು ಜಾಗಕೊಟ್ಟ ಸ್ನೇಹಿತನಿಗೆ ಧನ್ಯವಾದ ತಿಳಿಸಿದ್ದಾರೆ.
ನೇಪಾಳದಲ್ಲಿ ಇತ್ತೀಚಿಗಷ್ಟೆ ಅಂದರೆ ಬುಧವಾರ ಮುಂಜಾನೆ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ದೋಟಿಯ ಪಶ್ಚಿಮ ಜಿಲ್ಲೆಯಲ್ಲಿ ಭೂಕಂಪನದ ರಭಸಕ್ಕೆ ಮನೆ ಕುಸಿದು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಐವರು ಸ್ಥಿತಿ ಗಂಭೀರವಾಗಿದೆ. ದೆಹಲಿ ಮತ್ತು ಸುತ್ತಮುತ್ತಲೂ ಕಂಪನದ ಅನುಭವವಾಗಿದೆ. ದೆಹಲಿ ಮತ್ತು ಎನ್ ಸಿ ಆರ್ ವ್ಯಾಪ್ತಿಯ ಎರಡು ಕಡೆ ಭೂಮಿ ನಡುಗಿದೆ. ಭೂಕಂಪನದಿಂದ ಅನೇಕರು ಭಯಭೀತರಾಗಿದ್ದಾರೆ. ಕಂಪನದ ಎಫೆಕ್ಟ್ ನಟ ಆದಿಲ್ ತಟ್ಟಿದ್ದು ಮನೆ ಬಿಟ್ಟು ಓಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಆದಿಲ್ ಹುಸೇನ್ 'ಭೂಕಂಪದ ಸಮಯದಲ್ಲಿ ಮನೆಯಿಂದ ಹೊರಗೆ ಬಂದೆ. ಮನೆಗೆ ಬೀಗ ಹಾಕಿ ಓಡಿ ಬರುವ ಭರದಲ್ಲಿ ಹಣ ಮತ್ತು ಕಾರ್ಡ್ ಎಲ್ಲಾ ಬಿಟ್ಟು ಬಂದೆ. ಆತ್ಮೀಯ ಸ್ನೇಹಿತ ದಿಬಂಗ್ ಸಿಕ್ಕರು. ನಮಗೆ ಆಶ್ರಯ ನೀಡಿದರು. ಈಗ ಅವರ ಗೆಸ್ಟ್ ರೂಮ್‌ನಲ್ಲಿ ಮಲಗುತ್ತಿದ್ದೇವೆ. ಅವರು ತಕ್ಷಣ ನನ್ನ ಫೋನ್‌ಗೆ ಪ್ರತಿಕ್ರಿಯೆ ನೀಡಿ ಆಶ್ರಯ ನೀಡಿದಕ್ಕೆ ಅವರಿಗೆ ದೇವರು ಒಳ್ಳೆಯದು ಮಾಡಲಿ' ಎಂದು ಹೇಳಿದರು.
ಭೂಕಂಪನಕ್ಕೆ ತರ ತರ ನಡುಗಿದ ಉತ್ತರ: ನೇಪಾಳದಲ್ಲೂ ಕಂಪಿಸಿದ ಧರಣಿ
ಆದಿಲ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಜರ್ಮನ್ ನಟಿ ಸುಜೇನ್ ಬರ್ನೆಟ್, 'ಎಂಥ ಹುಣ್ಣಿಮೆ ರಾತ್ರಿ ಆಗಿತ್ತು ನಿಮ್ಮದು' ಎಂದು ಹೇಳಿದ್ದಾರೆ. ಇದಕ್ಕೆ ಆದಿಲ್ ಕೂಡ ಪ್ರತಿಕ್ರಿಯೆ ನೀಡಿ, ನೀವು ಹೇಳಿದ್ದು ಸರಿ ಭೂಕಂಪನಕ್ಕಿಂತ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ.
Came out of the house during Earth Quake.. Locked out of the house. By mistake. Without Cash or Cards .. Dear friend was awake.. Sheltered us.. About to now sleep in his guest room. God bless him for being awake and heard the phone ring 🙏🏿🤗😁
— Adil hussain (@_AdilHussain)ಇನ್ನೂ ಆದಿಲ್ ಅವರ ಬಗ್ಗೆ ಹೇಳುವುದಾದರೆ, ಅನೇಕ ಸಿನಿಮಾಗಳು ಮತ್ತು ವೆಬ್ ಸೀರಿಸ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಆದಿಲ್ ಮುಖಬೀರ್ ದಿ ಸ್ಟೋರಿ ಆಫ್ ಎ ಸ್ಪೈ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೆಬ್ ಸೀರಿಸ್ ಝೀ5 ನಲ್ಲಿ ರಿಲೀಸ್ ಆಗುತ್ತಿದೆ. ಈ ಸೀರಿಸ್‌ನಲ್ಲಿ ಜೈನ್ ಖಾನ್, ಪ್ರಕಾಶ್ ರಾಜ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸಿದ್ದಾರೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತಿದೆ. ಇದೊಂದು ಬೇಹುಗಾರಿಕೆ ಥ್ರಿಲ್ಲರ್ ಸಿನಿಮಾವಾಗಿದ್ದು, ಭಾರತೀಯ ರಹಸ್ಯ ಏಜೆಂಟ್ ಕಥೆಯನ್ನು ಪತ್ತೆಹಚ್ಚುವುದಾಗಿದೆ. ಈ ಸೀರಿಸ್ ಅನ್ನು ಶಿವಮ್ ನಾಯರ್ ಮತ್ತು ಜೈಪ್ರದ್ ದೇಸಾಯಿ ನಿರ್ದೇಶನ ಮಾಡಿದ್ದಾರೆ.