The Kerala Story: ಅಜ್ಜಿ-ಅಮ್ಮನಿಗೆ ಈ ಸಿನಿಮಾ ತೋರಿಸಲು ತುಂಬಾ ಹೆದರಿದ್ದೆ- ಅದಾ ಶರ್ಮಾ

Published : May 20, 2023, 11:37 AM IST
The Kerala Story: ಅಜ್ಜಿ-ಅಮ್ಮನಿಗೆ ಈ ಸಿನಿಮಾ ತೋರಿಸಲು ತುಂಬಾ ಹೆದರಿದ್ದೆ- ಅದಾ ಶರ್ಮಾ

ಸಾರಾಂಶ

ಅಜ್ಜಿ-ಅಮ್ಮನಿಗೆ ಕೇರಳ ಸ್ಟೋರಿ ಸಿನಿಮಾ ತೋರಿಸಲು ತುಂಬಾ ಹೆದರಿದ್ದೆ ಎಂದು  ನಟಿ ಅದಾ ಶರ್ಮಾ ಹೇಳಿದ್ದಾರೆ.  

ದಿ ಕೇರಳ ಸ್ಟೋರಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಚಿತ್ರಮಂದಿರಗಳಲ್ಲಿ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೇ 5 ರಂದು ತೆರೆಗೆ ಬಂದ ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್‌ನಲ್ಲಿ 175 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ 200 ಕೋಟಿಯತ್ತ ಮುನ್ನುಗ್ಗುತ್ತಿದೆ. ಪ್ರಾರಂಭದಲ್ಲಿ ನಿಧಾನಗತಿಯಲ್ಲಿದ್ದ ಕಲೆಕ್ಷನ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸಾಕಷ್ಟು ವಿರೋಧ ಮತ್ತು ಬ್ಯಾನ್‌ಗಳ ನಡುವೆಯೂ ಕೇರಳ ಸ್ಟೋರಿ ಸಿನಿಮಾ ಗೆದ್ದು ಬೀಗಿದೆ. ಈ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಶಾಲಿನಿ ಉನ್ನಿಕೃಷ್ಣನ್/ ಫಾತಿಮಾ ಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದಾ ಶರ್ಮಾ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ಸಕ್ಸಸ್ ಬಳಿಕ ನಟಿ ಅದಾ ಶರ್ಮಾ ಸಾಕಷ್ಟು ಸಂದರ್ಶಗಳನ್ನು ನೀಡುತ್ತಿದ್ದಾರೆ, ಈವೆಂಟ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. 

ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಅದಾ ಶರ್ಮಾ ಈ ಸಿನಿಮಾದ ಬಗ್ಗೆ ತನ್ನ ಅಜ್ಜಿ ಮತ್ತು ತಾಯಿಯ ಪ್ರತಿಕ್ರಿಯೆ ಹೇಗಿತ್ತು ಎಂದು ಬಹಿರಂಗ ಪಡಿಸಿದ್ದಾರೆ. ಅವರಿಬ್ಬರೂ ಸಿನಿಮಾ ನೋಡುವಾಗ ತುಂಬಾ ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ. 'ನನ್ನ ತಾಯಿ ಮತ್ತು ಅಜ್ಜಿಗೆ ಕಥೆ ಗೊತ್ತಿತ್ತು. ನಾನು ಅಜ್ಜಿಯ ಪ್ರತಿಕ್ರಿಯೆಯ ಬಗ್ಗೆ ತುಂಬಾ ಹೆದರಿದ್ದೆ. ಅದರಲ್ಲೂ ಆ ಅತ್ಯಾಚಾರದ ದೃಶ್ಯಗಳು ಹಾಗೂ ಎಲ್ಲಾ ಗೊಂದಲದ ಕ್ಷಣಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ನಾನು  ತುಂಬಾ ಚಿಂತಿಸುತ್ತಿದ್ದೆ' ಎಂದು ಹೇಳಿದರು. 

The Kerala Stroy: 15 ಮಂದಿ ಸತತ 1 ತಿಂಗಳು ಅತ್ಯಾಚಾರವೆಸಗಿದ್ರೆ ಪುರಾವೆ ನೀಡುವುದು ಹೇಗೆ?- ಅದಾ ಶರ್ಮಾ

'ನನ್ನ 90 ವರ್ಷದ ಅಜ್ಜಿ ಗಟ್ಟಿಗಿತ್ತಿ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಸಿನಿಮಾ ವೀಕ್ಷಿಸಿದ ನಂತರ ಅದನ್ನು ಶೈಕ್ಷಣಿಕ ಮತ್ತು ತಿಳಿವಳಿಕೆ ಅನುಭವ ಎಂದು ಕರೆದರು ಮತ್ತು 'ನನ್ನ ಎಲ್ಲಾ ವಿದ್ಯಾರ್ಥಿಗಳು ಇದನ್ನು ವೀಕ್ಷಿಸಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿದರು. ಇದು ವಯಸ್ಕರ ಚಿತ್ರ ಎಂದು ನಾನು ಅವವರಿಗೆ ಹೇಳಿದೆ, ನಂತರ ಅವರು ಇದಕ್ಕೆ ಯು/ಎ ಸರ್ಕಿಫಿಕೇಟ್ ಕೊಡಬೇಕಿತ್ತು. ಚಿಕ್ಕ ವಯಸ್ಸಿನ ಹುಡುಗಿಯರೂ ಇದನ್ನು ನೋಡಬೇಕು, ಅದರ ಬಗ್ಗೆ ತಿಳಿದಿರಲಿ ಮತ್ತು ಅವರು ಹೆಚ್ಚು ಜಾಗೃತರಾಗಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದರು' ಎಂದು ಅದಾ ಶರ್ಮಾ ಹೇಳಿದ್ದಾರೆ. 

ಪ್ರತಿ ಸಿನಿಮಾ ಮಾಡುವಾಗಲೂ ಕೊನೆ ಸಿನಿಮಾ ಅಂದ್ಕೊಳ್ಳುತ್ತಿದ್ದೆ ; 'ಕೇರಳ ಸ್ಟೋರಿ' ನಟಿ ಅದಾ ಶರ್ಮಾ

ಸಿನಿಮಾ ಅಲ್ಲ, ಇದೊಂದು ಚಳುವಳಿ 

ಸಿನಿಮಾ ಬಗ್ಗೆ ಮಾತನಾಡಿದ ಅದಾ, 'ಕಳೆದ ಒಂದು ವಾರದಲ್ಲಿ, ನಾನು ನಾಲ್ಕು ವಿಮಾನಗಳಲ್ಲಿ ಓಡಾಡಿದೆ. ಮೊದಲು ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳು ಬಂದು ನನ್ನೊಂದಿಗೆ 1920 ಮತ್ತು ಕಮಾಂಡೋ ಬಗ್ಗೆ ಮಾತನಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರು. ಅವರ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನನಗೆ ಧನ್ಯವಾದಗಳು. ನಾನು ಈಗಾಗಲೇ ನಾಲ್ಕೈದು ಬಾರಿ ಚಲನಚಿತ್ರವನ್ನು ನೋಡಿದ ಮತ್ತು ನಿರ್ದಿಷ್ಟ ದೃಶ್ಯಗಳನ್ನು ವಿವರಿಸುವ  ಚಿಕ್ಕ ಹುಡುಗರನ್ನು ಭೇಟಿಯಾಗಿದ್ದೇನೆ. ಕೇರಳದ ಸ್ಟೋರಿ ಇನ್ನು ಮುಂದೆ ಕೇವಲ ಚಿತ್ರವಲ್ಲ, ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಹೇಳಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!