ವನಿತಾ ವಿಜಯ್ ಕುಮಾರ್ 3ನೇ ಗಂಡ ನಿಧನ; ಭಾವುಕ ಪತ್ರ ಹಂಚಿಕೊಂಡ ನಟಿ

Published : May 01, 2023, 04:05 PM ISTUpdated : May 01, 2023, 04:08 PM IST
ವನಿತಾ ವಿಜಯ್ ಕುಮಾರ್ 3ನೇ ಗಂಡ ನಿಧನ; ಭಾವುಕ ಪತ್ರ ಹಂಚಿಕೊಂಡ ನಟಿ

ಸಾರಾಂಶ

ನಟಿ ವನಿತಾ ವಿಜಯ್ ಕುಮಾರ್ 3ನೇ ಗಂಡ ಪೀಟರ್ ಪೌಲ್ ನಿಧನಕ್ಕೆ ಭಾವುಕ ಪತ್ರ ಹಂಚಿಕೊಂಡಿದ್ದಾರೆ.  

ತಮಿಳು ನಟಿ, ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್ ಮದುವೆ ವಿಚಾರವಾಗಿಯೇ ಹೆಚ್ಚು ಸುದ್ದಿಯಾಗಿದ್ದರು. ಒಂದಲ್ಲ ಎರಡಲ್ಲ ಮೂರು ವಿವಾಹವಾಗಿದ್ದರು ವನಿತಾ ವಿಜಯ್ ಕುಮಾರ್. ಆದರೆ 3ನೇ ಗಂಡನಿಂದನೂ ದೂರ ಆಗಿ 4ನೇ ಮದುವೆ ಬಗ್ಗೆ ಸುಳಿವು ನೀಡಿದ್ದರು. ನಟಿ ವನಿತಾ ವಿಜಯ್ ಕುಮಾರ್ ಖ್ಯಾತ ತಂತ್ರಜ್ಞ ಪೀಟರ್ ಪೌಲ್ ಜೊತೆ 3ನೇ ಮದುವೆಯಾಗಿದ್ದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಲಂಡನ್‌ನಲ್ಲಿ ವಿವಾಹವಾಗಿದ್ದ ಈ ಜೋಡಿ ನಂತರ ಮದುವೆಯನ್ನು ಮುರಿದುಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ ದುರಂತ ಎಂದರೆ ಪೀಟರ್ ಪೌಲ್ ಈಗ ಬಾರದಲೋಕಕ್ಕೆ ಹೊರಟು ಹೋಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೀಟರ್ ಕೊನೆಯುಸಿರೆಳಿದ್ದಾರೆ.  

ವನಿತಾ ವಿಜಯ್ ಕುಮಾರ್ 2020ರಲ್ಲಿ ಪೀಟರ್ ಪೌಲ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಕೆಲವೇ ದಿನಕ್ಕೆ ಪೀಟನ್ ಮೊದಲ ಪತ್ನಿ ಜೊತೆ ಹೊರಟು ಹೋದರು, ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಬಳಿಕ 3ನೇ ಪತಿಯಿಂದನೂ ದೂರ ಆಗಿದ್ದರು. ಇದೀಗ ಅವರನ್ನು ಕಳೆದುಕೊಂಡರು. ಈ ಬಗ್ಗೆ ವನಿತಾ ವಿಜಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

4ನೇ ಮದುವೆಗೆ ಮುಂದಾದ ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‌ಕುಮಾರ್?

ತನ್ನ ಸಾಮಾಜಿಕ ಮಾಧ್ಯಮದಲ್ಲಿ ವನಿತಾ, 'ನನ್ನ ತಾಯಿ ನನಗೆ ಕಲಿಸಿದರು, ಬೇರೆಯವರಿಗೆ ಸಹಾಯ ಮಾಡುವವರಿಗೆ ದೇವರು ಸಹಾಯ ಮಾಡುತ್ತಾನೆ. ಇದು ಖಂಡಿತವಾಗಿಯೂ ಎಲ್ಲರೂ ಕಲಿಯಬೇಕಾದ ಪಾಠ. ಅಡ್ಡದಾರಿಯಲ್ಲಿರುವಾಗ, ಜನರು ತಮ್ಮದೇ ಆದ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ನೀವು ಎದುರಿಸುತ್ತಿದ್ದ ಕಷ್ಟ ನೀವು ಅನುಭವಿಸಿದ ಆಘಾತದ ನಂತರ ಈಗ ನೀವು ಶಾಂತಿಯನ್ನು ಕಂಡುಕೊಂಡಿದ್ದೀರಿ ಎಂದು ನಾನು ಭಾವಿಸಿದ್ದೇನೆ. ನಿಮ್ಮ ಅಗಲಿಕೆಯಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನೀವು ಖಂಡಿತವಾಗಿಯೂ ಉತ್ತಮ ಸ್ಥಳದಲ್ಲಿರುತ್ತೀರಿ ಎಂದು ನನಗೆ ತಿಳಿದಿದೆ ಮತ್ತು ಅಂತಿಮವಾಗಿ ನೀವು ಎಲ್ಲಿದ್ದರೂ ನಿಮ್ಮ ಶಾಂತಿ ಸಂತೋಷವಾಗಿರುವುದನ್ನು ನೀವು ಕಂಡುಕೊಂಡಿದ್ದೀರಿ' ಎಂದು ಹೇಳಿದ್ದಾರೆ.

ಅದ್ಧೂರಿಯಾಗಿ ಮದ್ವೆಯಾಗಿ ಮೂರನೇ ಸಾರಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ಮದುವೆ ಬ್ರೇಕ್?

ಪೀಟರ್ ಪೌಲ್ ಮತ್ತು ವನಿತಾ ವಿಜಯ್ ಕುಮಾರ್ ಮದುವೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮದುವೆಯಾಗಿ ಕೆಲವೇ ದಿನಕ್ಕೆ ಇಬ್ಬರೂ ದೂರ ಆಗುವ ಮೂಲಕ ಮತ್ತೆ ಅಚ್ಚರಿ ಮೂಡಿಸಿದರು. ಪೀಟರ್ ಮದುವೆಯನ್ನು ಮೊದಲ ಪತ್ನಿ ತೀವ್ರ ವಿರೋಧಿಸಿದ್ದರು. ವನಿತಾ ಜೊತೆ ಮದುವೆಯಾಗಿದ್ದೇ ಗೊತ್ತಿಲ್ಲ ಎಂದು ಮೊದಲ ಪತ್ನಿ ಬೀದಿ ರಂಪ ಮಾಡಿದ್ದರು. ಸಿಕ್ಕಾಪಟ್ಟೆ ಕುಡಿಯುತ್ತಿದ್ದ ಪೀಟರ್ ಅನಾರೋಗ್ಯಕ್ಕೆ ಒಳಗಾದಿದ್ದರು. 1 ವರ್ಷಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರು, ಆಗ ವನಿತಾ ಹಣದ ಸಹಾಯ ಮಾಡಿದ್ದರು ಎನ್ನಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಚಿರಂಜೀವಿ, ನಿರ್ಮಾಪಕಿ ಶ್ರೀದೇವಿ; ಶುರುವಾಗಿ ಅರ್ಧಕ್ಕೆ ನಿಂತುಹೋದ ಆ ಸಿನಿಮಾ ಯಾವುದು ಗೊತ್ತಾ?
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!