ಅನಿಮಲ್ ಚಿತ್ರದಲ್ಲಿ ಬೆತ್ತಲಾಗಿರುವ ಕಾರಣಕ್ಕೆ ಆಶಿಕಿ-3 ಚಿತ್ರದಿಂದ ನಟಿ ತೃಪ್ತಿ ಡಿಮ್ರಿಯನ್ನು ಕೈಬಿಡಲಾಗಿದೆ ಎನ್ನಲಾಗುತ್ತಿದೆ. ಏನಿದು ವಿಷಯ?
ಸಂದೀಪ್ ರೆಡ್ಡಿ ವಂಗಾ ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಯಾವಾಗ ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ರೋ ಆಗ ಈಕೆಯ ಹುಡುಕಾಟ ಗೂಗಲ್ನಲ್ಲಿ ಜೋರಾಯಿತು. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿತ್ತು. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದರು ಈ ಬೆಡಗಿ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡರು. ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಕೂಡ ಆದರು. ಅನಿಮಲ್ ಚಿತ್ರದಲ್ಲಿ ಆಲಿಯಾ ಭಟ್ ಪತಿ ರಣಬೀರ್ ಕಪೂರ್ ಜೊತೆ ಬೆತ್ತಲಾದ ಬಳಿಕ ಬ್ಯಾಡ್ ನ್ಯೂಸ್ ಚಿತ್ರದಲ್ಲಿ ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಜೊತೆ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡವರು ತೃಪ್ತಿ ಡಿಮ್ರಿ.
ಆದರೆ ಇದೀಗ ಇದೇ ಹಸಿಬಿಸಿ ದೃಶ್ಯ ತೃಪ್ತಿಯನ್ನು ಸಂಕಷ್ಟದಲ್ಲಿ ಸಿಲುಕಿಸಿರುವುದಾಗಿ ವರದಿಯಾಗಿದೆ. ತೃಪ್ತಿ ಡಿಮ್ರಿಯನ್ನು ಆಶಿಕಿ-3 ಚಿತ್ರದಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ನಟಿ ಸಹಿ ಹಾಕಿದ್ದರು. ಆದರೆ ವರದಿಗಳ ಪ್ರಕಾರ ಅವರನ್ನು ಚಿತ್ರದಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ. ಏಕೆಂದರೆ ಈ ಚಿತ್ರಕ್ಕೆ ಮುಗ್ಧ ಮುಖದ ಹುಡುಗಿ ಬೇಕು. ಆದರೆ ತೃಪ್ತಿ ಡಿಮ್ರಿ ಇದಕ್ಕೆ ಸೂಟ್ ಆಗುವುದಿಲ್ಲ. ಅವರ ಮುಖದಲ್ಲಿ ಮುಗ್ಧತೆ ಇಲ್ಲ ಎಂದು ಚಿತ್ರ ತಂಡ ಹೇಳಿದೆ. ಅನಿಮಲ್ ಚಿತ್ರದ ಬಳಿಕ ಅವರಲ್ಲಿ ಯಾವುದೇ ಮುಗ್ಧತೆ ಉಳಿಸಿಕೊಂಡಿಲ್ಲ ಎನ್ನುವ ಅರ್ಥದಲ್ಲಿ ಈ ಹೇಳಿಕೆ ನೀಡಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಣಬೀರ್ಗಿಂತಲೂ ಮಧ್ಯರಾತ್ರಿ ನನಗೆ ವಿಕ್ಕಿನೇ ಇಷ್ಟ ಎಂದ ತೃಪ್ತಿ ಡಿಮ್ರಿ: ನಟಿ ಕೊಟ್ಟ ಕಾರಣ ಹೀಗಿದೆ ನೋಡಿ!
ಆಶಿಕಿ 3 ರ ನಾಯಕಿಯಾಗಲು ಮೂಲಭೂತ ಅವಶ್ಯಕತೆಯೇ ಮುಗ್ಧತೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮುಗ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ತೃಪ್ತಿ ಡಿಮ್ರಿ ರೋಮ್ಯಾಂಟಿಕ್ ಚಿತ್ರದಲ್ಲಿ ನಟಿಸಲು ಧೈರ್ಯಶಾಲಿಯಾಗಿದ್ದಾರೆ, ಆದರೆ ಆಶಿಕಿ ಚಿತ್ರದಲ್ಲಿ ಶುದ್ಧತೆಯ ಮುಖ ಚೆಹರೆ ಇರುವ ನಾಯಕಿ ಬೇಕು. ಈ ಚಿತ್ರವು ಪೌರಾಣಿಕ, ಭಾವಪೂರ್ಣ ಪ್ರೇಮಕಥೆಯಾಗಿದ್ದು, ತೃಪ್ತಿ ಯಾವುದೇ ರೀತಿಯಲ್ಲಿ ಹೊಂದಾಣಿಕೆ ಆಗುವುದಿಲ್ಲ ಎಂದು ಚಿತ್ರತಂಡ ಹೇಳಿದೆ ಎಂದು ವರದಿಯಾಗಿದೆ.
ಇನ್ನು ನಟಿಯ ಚಿತ್ರಗಳ ಕುರಿತು ಹೇಳುವುದಾದರೆ, ಇತ್ತೀಚೆಗೆ, ಅನೀಸ್ ಬಾಜ್ಮಿ ನಿರ್ದೇಶಿಸಿದ ಬಹು ನಿರೀಕ್ಷಿತ ಭೂಲ್ ಭುಲೈಯಾ 3 ಸೇರಿದಂತೆ ಇನ್ನು ಕೆಲವು ಚಿತ್ರಗಳಿಗಾಗಿ ತೃಪ್ತಿ ಗಮನ ಸೆಳೆದಿದ್ದಾರೆ, ಈ ಚಿತ್ರದಲ್ಲಿ ಇವರು ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಿದ್ದಾರೆ. ಇದು 1990 ರ ದಶಕದ ಕಥೆ ಆಧರಿಸಿರುವ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ ಅವರು ಋಷಿಕೇಶದ ವಿದ್ಯಾ ಎಂಬ ಸಣ್ಣ-ಪಟ್ಟಣದ ಹುಡುಗಿಯಾಗಿ ನಟಿಸಿದ್ದಾರೆ ಮತ್ತು ಟ್ರೈಲರ್ ಈಗಾಗಲೇ 90 ರ ದಶಕದ ವೈಬ್ ಮತ್ತು ಹಾಸ್ಯಮಯ ಒಳನೋಟಗಳೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆದಿದೆ. ರಾಜ್‌ಕುಮಾರ್ ರಾವ್ ಅವರನ್ನೂ ಒಳಗೊಂಡಿರುವ ಈ ಚಿತ್ರವು ಒಂದು ಟ್ವಿಸ್ಟ್‌ನೊಂದಿಗೆ ಕ್ಲಾಸಿಕ್ ಪ್ರೇಮಕಥೆಯನ್ನು ರಿಫ್ರೆಶ್ ಮಾಡುವ ಭರವಸೆ ನೀಡುತ್ತದೆ. ಇನ್ನು ವಿಕ್ಕಿ ಕೌಶಲ್ ಅವರು, ಲಕ್ಷ್ಮಣ್ ಉಟೇಕರ್ ಅವರ ಛಾವಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಅಲ್ಲಿ ಅವರು ಮರಾಠ ದೊರೆ ಮತ್ತು ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಪಾತ್ರ ಮಾಡುತ್ತಿದ್ದಾರೆ.
ರಣಬೀರ್ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?