ನಟಿ ಉರ್ಫಿ ಜಾವೇದ್ ಅವರ ಹೊಸ ಫ್ರೆಂಡ್ ಕುಲ್ಫಿಯನ್ನು ಪರಿಚಯಿಸಿದ್ದಾರೆ. ರುಂಡ- ಮುಂಡ ಇಲ್ಲದ ನೂತನ ಸ್ನೇಹಿತೆ ಯಾರು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿಯ ಹಾಗೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿ ಅರೆಬರೆ ಡ್ರೆಸ್ ರುಚಿ ನೋಡಿ ಅದನ್ನು ಬಿಡುತ್ತಿಲ್ಲ.
ಕೆಲ ದಿನಗಳ ಹಿಂದೆ ನಟಿ, ರುಂಡವಿಲ್ಲದೇ ಕಾಣಿಸಿಕೊಂಡಿದ್ದರು. ಕಾರಿನಿಂದ ಉರ್ಫಿ ಇಳಿಯುತ್ತಿದ್ದಂತೆಯೇ ಪಾಪರಾಜಿಗಳು ಅವರ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಆದರೆ ಫುಟ್ ಪ್ಯಾಂಟ್ ಷರ್ಟ್ ಧರಿಸಿದ್ದ ಉರ್ಫಿ ಅವರ ರುಂಡ ಕಾಣಿಸಲೇ ಇಲ್ಲ. ಇದರಿಂದ ಮೊದಲು ಪಾಪರಾಜಿಗಳು ಶಾಕ್ ಆದರು. ಬಹಳ ಉದ್ದ ಕಾಣಿಸುತ್ತಿದ್ದ ಉರ್ಫಿ ತಮ್ಮ ರುಂಡವನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎಂದು ಎಲ್ಲರೂ ಹುಡುಕಿದರು. ನಂತರ ತಿಳಿದುಬಂದಿದ್ದೇನೆಂದರೆ, ಮುಖದ ಮೇಲೊಂದು ಕೋಲನ್ನು ಸಿಕ್ಕಿಸಿಕೊಂಡಿದ್ದ ಉರ್ಫಿ ಆ ಕೋಲಿಗೆ ಷರ್ಟ್ ಹಾಕಿದ್ದರು. ಹಿಂಬದಿಯಿಂದ ನೋಡಿದರೆ ರುಂಡ ಇಲ್ಲದ ಮನುಷ್ಯ ಕಂಡ ಹಾಗೆ ಕಾಣಿಸುತ್ತಿತ್ತು. ಇದು ಥಹರೇವಾರಿ ಕಮೆಂಟ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೀವು ಇಂಪಾಸಿಬಲ್ ಮಹಿಳೆ ಎಂದು ಎಲ್ಲರೂ ಹೇಳಿದ್ದರು.
ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎನ್ನುತ್ತಲೇ ಹಿಂದೂ ಧರ್ಮ ಅಪ್ಪಿದ ಮತ್ತೋರ್ವ ನಟಿ! ಕೊಟ್ಟ ಕಾರಣ ಹೀಗಿದೆ...
ಇದೀಗ ನಟಿ ರುಂಡ ಮುಂಡ ಎರಡೂ ಇಲ್ಲದ ಸ್ನೇಹಿತೆಯನ್ನು ಪರಿಚಯಿಸಿದ್ದಾರೆ. ಈಕೆಯ ಹೆಸರನ್ನು ಕುಲ್ಫಿ ಎಂದು ಹೇಳಿದ್ದಾರೆ. ಅಷ್ಟಕ್ಕೂ ಇದು ಹೊಸ ಡ್ರೆಸ್. ತಾವು ತೊಡುವ ಬಟ್ಟೆಯ ರೂಪಕ್ಕೆ ಹೊಸ ಡ್ರೆಸ್ ಅನ್ನು ಕೈಯಲ್ಲಿ ಹಿಡಿದು ಬಂದಿರುವ ನಟಿ ಉರ್ಫಿ ಈಕೆ ನನ್ನ ಹೊಸ ಫ್ರೆಂಡ್ ಕುಲ್ಫಿ ಎಂದು ಹೇಳಿದ್ದಾರೆ. ಅದಕ್ಕೆ ಎಲ್ಲರೂ ಕಾಲೆಯುತ್ತಿದ್ದು, ಬಿಡಿ ನಿಮ್ಮ ಫ್ರೆಂಡ್ ನಿಮಗಿಂತ ಹೆಚ್ಚು ಬಟ್ಟೆ ಹಾಕಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ನೀವು ಇಂಪಾಸಿಬಲ್ ಮಹಿಳೆ ಎಂದು ಹಲವರು ಹೇಳುತ್ತಿದ್ದಾರೆ. ನಿಮ್ಮಂಥ ಹುಚ್ಚರನ್ನು ಜೀವನದಲ್ಲಿ ನೋಡಿಲ್ಲ ಎಂದು ಕೆಲವರು ಹೇಳಿದರೆ, ನಿಮ್ಮ ತಲೆಗೆ ಹ್ಯಾಟ್ಸ್‌ಆಫ್ ಹೇಳಲೇಬೇಕು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಉರ್ಫಿ ಫುಲ್ ಡ್ರೆಸ್ ತೊಟ್ಟಾಗಲೂ ಟ್ರೋಲ್‌ಗೆ ಒಳಗಾಗಿದ್ದು ಇದೆ. ಸ್ವಲ್ಪವೂ ಮೈ ಪ್ರದರ್ಶನವಿಲ್ಲದೇ ಈ ಡ್ರೆಸ್ನಲ್ಲಿ ಉರ್ಫಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ನಿಮ್ಮನ್ನು ಈ ಫುಲ್ ಅವತಾರದಲ್ಲಿ ನೋಡಲು ಆಗ್ತಿಲ್ಲಾ ತಾಯೀ ಎಂದು ಕೆಲವರು ಕಾಲೆಳೆದಿದ್ದರು.
ಈಚೆಗಷ್ಟೇ ನಟಿ ತಾನು ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಟ್ಟಿಲ್ಲ ಎನ್ನುವ ವಿಡಿಯೋ ವೈರಲ್ ಆಗಿತ್ತು. ತಾವು ಯಾವುದೇ ಮುಸಲ್ಮಾನರನ್ನು ಮದುವೆಯಾಗುವುದಿಲ್ಲ, ಇಸ್ಲಾಂನಲ್ಲಿ ನಂಬಿಕೆ ಇಲ್ಲ. ತಾವು ಏನಿದ್ದರೂ ಹಿಂದೂ ಹುಡುಗನನ್ನೇ ಮದುವೆಯಾಗುವುದು ಎಂದಿದ್ದಾರೆ. ತಮಗೆ ಭಗವದ್ಗೀತೆಯೇ ಶ್ರೇಷ್ಠ, ಅದನ್ನೇ ಓದುತ್ತಿದ್ದೇನೆ ಎಂದೂ ಇದರಲ್ಲಿ ಹೇಳಿದ್ದಾರೆ. ಮುಸ್ಲಿಂ ಸಮಾಜ ಮಹಿಳೆಯರನ್ನು ಅವರಿಗೆ ಅನ್ನಿಸದಂತೆ ಇಡಲು ಬಿಡುವುದಿಲ್ಲ. ನನ್ನಂಥ ಮುಸ್ಲಿಂ ಮಹಿಳೆಯರು ಏನೇ ಮಾಡಿದರೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡುತ್ತಾರೆ. ಮುಸ್ಲಿಂ ಪುರುಷರು, ಮಹಿಳೆಯರು ತಾವು ರಚಿಸಿದ ವಲಯದಲ್ಲೇ ಉಳಿಯಬೇಕೆಂದು ಬಯಸುವಂಥವರು. ಅವರು ತಮ್ಮ ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಇದರಿಂದಾಗಿ ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ನಾನು ಎಂದಿಗೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಈ ಸಂದರ್ಶನದಲ್ಲಿ ಹೇಳಿದ್ದಾರೆ.
ನಿಗೂಢ ವ್ಯಕ್ತಿ ಜೊತೆ ಉರ್ಫಿ ಎಂಗೇಜ್ಮೆಂಟ್ ಸುದ್ದಿ ಕೇಳುತ್ತಲೇ ಮಾಜಿ ಬಾಯ್ಫ್ರೆಂಡ್ನಿಂದ ದುಬಾರಿ ಗಿಫ್ಟ್!