ವಿರಾಟ್ ಕೊಹ್ಲಿ ಜೊತೆ ತಮನ್ನಾ ಡೇಟಿಂಗ್?

Published : Mar 03, 2019, 10:33 AM IST
ವಿರಾಟ್ ಕೊಹ್ಲಿ ಜೊತೆ ತಮನ್ನಾ ಡೇಟಿಂಗ್?

ಸಾರಾಂಶ

ಬಹುಭಾಷಾ ನಟಿ ತಮನ್ನಾ ಹಾಗೂ ವಿರಾಟ್ ಕೊಹ್ಲಿ ಡೇಟಿಂಗ್ ಮಾಡುತ್ತಿದ್ದರು ಎಂಬ ಮಾತು ಕೇಳಿ ಬಂದಿತ್ತು. ಇದೀಗ ಸ್ವತಃ ತಮನ್ನಾ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಳನ್ನು ಮದುವೆ ಆಗುವ ಮುನ್ನ ಮಿಲ್ಕ್ ಬ್ಯೂಟಿ ತಮನ್ನಾಳೊಂದಿಗೆ ಸುತ್ತಾಡುತ್ತಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಕೆಲ ದಿನಗಳ ಹಿಂದೆ ನಡೆದ ಸಂದರ್ಶನದಲ್ಲಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ.

 

‘ನಾನು ಜಾಹಿರಾತು ಚಿತ್ರೀಕರಣದ ವೇಳೆ ಮಾತನಾಡಿದರೂ ಅದು ಕೇವಲ 4 ರಿಂದ 5 ಪದಗಳಷ್ಟೇ. ಅದಾದ ನಂತರ ನಾನು ವಿರಾಟ್ ಭೇಟಿ ಮಾಡಿಲ್ಲ. ಬಟ್ ನಿಜ ಹೇಳಬೇಕೆಂದರೆ ಇನ್ನುಳಿದ ನಟರಿಗಿಂತ ವಿರಾಟ್ ಜೊತೆ ಕೆಲಸ ಮಾಡುವುದು ಸ್ವಲ್ಪ ಭಯವಾಗುತ್ತದೆ’ ಎಂದು ಮುಗುಳು ನಗೆಯಿಂದ ತಮನ್ನಾ ಉತ್ತರ ನೀಡಿದರು.

 

2012 ರಲ್ಲಿ ತಮನ್ನಾ ಹಾಗೂ ವಿರಾಟ್ ಇಬ್ಬರು ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರ ಕಾಂಬಿನೇಷನ್ ಸೂಪರ್-ಡೂಪರ್ ಆದ ಕಾರಣ ನಿಜ ಜೀವನದಲ್ಲೂ ಸೂಪರ್ ಪೇರ್ ಎಂದು ಮಾತು ಹರಿದಾಡುತ್ತಿತ್ತು. ಆದರೆ ವಿರಾಟ್ ಬಾಲಿವುಡ್ ನಟಿ ಅನುಷ್ಕಾ ಶರ್ಮಾಳನ್ನು ಲವ್ ಮಾಡಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು. ಅಷ್ಟೇ ಏಕೆ ಅವರ ಪ್ರೀತಿಗೆ ಹಾಗೂ ಹ್ಯಾಪಿ ಮ್ಯಾರೇಜ್ ಮೋಡ್ ಗೆ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಾಕುತ್ತಿರುವ ಫೋಟೋಗಳೇ ಸಾಕ್ಷಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್