
ಟಾಲಿವುಡ್ ಸೂಪರ್ ಸ್ಟಾರ್, ಸ್ಟೈಲಿಶ್ ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ನಡೆಸುತ್ತಿರುವ 'ಗೀತಾ ಆರ್ಟ್ಸ್' ನಿರ್ಮಾಣ ಸಂಸ್ಥೆ ಎದುರು ನಟಿ ಸುನಿತಾ ಬೋಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಹೈದಾರಾಬಾದ್ ಮಹಿಳಾ ಪೊಲೀಸರು ಆಗಮಿಸಿ ನಟಿಯನ್ನು ಬಂಧಿಸಿದ್ದಾರೆ.
ಜೂಬ್ಲಿ ಹಿಲ್ಸ್‌ನಲ್ಲಿರುವ ಗೀತಾ ಆರ್ಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನಿರ್ಮಾಪಕ ಬನ್ನು ವಾಸು ವಿರುದ್ಧ ಕಾಸ್ಟಿಂಗ್ ಕೌಚ್ ಹಾಗೂ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ನಟಿ ಸುನಿತಾ ಬೋಯಾ ಆರೋಪಿಸಿದ್ದಾರೆ. ಸಿನಿಮಾ ಆಫರ್ ಮಾಡುವುದಾಗಿ ಮಾತು ನೀಡಿ ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸುನಿತಾ ಹೇಳಿದ್ದಾರೆ. ಕೆಲವು ವರ್ಷಗಳಿಂದ ಆರೋಪ ಮಾಡುತ್ತಿದ್ದು ಜುಲೈ 14ರಂದು ಸಂಸ್ಥೆ ಎದುರೇ ಆತ್ಮಹತ್ಯೆ ಯತ್ನ ಮಾಡಿದ್ದಾರೆ.
ಹಿಂದೊಮ್ಮೆ ಹೀಗೆ ಕಚೇರಿ ಮುಂದೆ ಸುನಿತಾ ಬೋಯಾ ನ್ಯಾಯಕ್ಕಾಗಿ ಒತ್ತಾಯಿಸಿ ಜಗಳ, ಗಲಾಟೆ ಮಾಡಿದ್ದಕ್ಕೆ ಆಕೆಯನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಪೊಲೀಸರು ಸುನಿತಾರನ್ನು ಬಂಧಿಸಿ ಆಕೆಗೆ ಮಾನಸಿಕ ಸ್ಥಿಮಿತ ಹದಗೆಟ್ಟಿದ್ದು ಚಿಕಿತ್ಸೆ ಅಗತ್ಯವಿದೆ ಎಂದು ಯರ್ರಗಡ್ಡ ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದರು. ಈ ಸಲವೂ ನೇರವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಬಂದ ಕಾರಣ ಮತ್ತೆ ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಬನ್ನಿ ಬಾಸುಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.