ಸೌಂದರ್ಯಳದ್ದು ಕೊಲೆ ಎಂದು ದೂರು ಕೊಟ್ಟ ಚಿಟ್ಟಿಮಲ್ಲು ಹಾಗೂ ನಟಿಗೆ ಇದ್ದ ಸಂಬಂಧವೇನು?

Published : Mar 12, 2025, 01:46 PM ISTUpdated : Mar 12, 2025, 03:04 PM IST
ಸೌಂದರ್ಯಳದ್ದು ಕೊಲೆ ಎಂದು ದೂರು ಕೊಟ್ಟ ಚಿಟ್ಟಿಮಲ್ಲು ಹಾಗೂ ನಟಿಗೆ ಇದ್ದ ಸಂಬಂಧವೇನು?

ಸಾರಾಂಶ

ನಟಿ ಸೌಂದರ್ಯ ಅವರ ಸಾವಿಗೆ 21 ವರ್ಷಗಳ ನಂತರ, ಚಿಟ್ಟಿಮಲ್ಲು ಎಂಬುವವರು ನಟ ಮೋಹನ್ ಬಾಬು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಸೌಂದರ್ಯ ಕುಟುಂಬದ ಜಮೀನನ್ನು ಮೋಹನ್ ಬಾಬು ಕಸಿದುಕೊಂಡಿದ್ದಾರೆ ಎಂಬುದು ಆರೋಪ. ಚಿಟ್ಟಿಮಲ್ಲು ಗಾಂಧಿವಾದಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿ ದೂರು ನೀಡಿದ್ದಾರೆ. ಜಮೀನನ್ನು ಸಾರ್ವಜನಿಕ ಬಳಕೆಗೆ ನೀಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ಈ ದೂರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹೈದರಾಬಾದ್ (ಮಾ.12): ಕನ್ನಡ, ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ 1990ರ ದಶಕದಕ್ಕಿ ಅತ್ಯಂತ ಬೇಡಿಕೆಯನ್ನು ಹೊಂದಿದ್ದ ನಟಿ ಸೌಂದರ್ಯ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿ ಇಂದಿಗೆ 21 ವರ್ಷ ಪೂರ್ಣಗೊಂಡಿದೆ. ಆದರೆ, ಇದೀಗ ನಟಿ ಸೌಂದರ್ಯ ಅವರದ್ದು ಆಕಸ್ಮಿಕ ಅಪಘಾತದ ಸಾವಲ್ಲ. ನಟ ಮೋಹನ್‌ ಬಾಬು ಅವರು ಯೋಜನಾಬದ್ಧವಾಗಿ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಚಿಟ್ಟಿಮಲ್ಲು ಎನ್ನುವವರು ದೂರು ನೀಡಿದ್ದಾರೆ. ಆದರೆ, ದೂರುದಾರ ಚಿಟ್ಟಿಮಲ್ಲುಗೂ, ನಟಿ ಸೌಂದರ್ಯಗೂ ಏನು ಸಂಬಂಧ ಎಂಬ ಪ್ರಶ್ನೆ ಎದುರಾಗಿದೆ.

ಕನ್ನಡ ಚಿತ್ರರಂಗದಿಂದ ಹಿಂದಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ನಟಿಸಿದ್ದ ಸೌಂದರ್ಯ ತಮ್ಮ 31 ನೇ ವಯಸ್ಸಿನಲ್ಲಿ ಖಾಸಗಿ ವಿಮಾನದಲ್ಲಿ ಹೋಗುವಾಗ 2004ರ ಏ.17ರಂದು ನಡೆದ ಅಪಘಾತದಲ್ಲಿ ದುರಂತ ಸಾವಿಗೀಡಾದರು. ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ರಾಜಕೀಯ ಪ್ರಚಾರ ಕಾರ್ಯಕ್ರಮಕ್ಕೆ ಕರೀಂನಗರದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಅವರ ಸಹೋದರನೂ ಸಾವನ್ನಪ್ಪಿದ್ದು, ಇಬ್ಬರೂ ಸುಟ್ಟು ಕರಕಲಾಗಿದ್ದರು. ಇಬ್ಬರ ಮೃತ ದೇಹವನ್ನೂ ಪಡೆಯಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ನಟಿ ಸೌಂದರ್ಯ ಅವರದ್ದು ಆಕಸ್ಮಿಕ ಅಪಘಾತದ ಸಾವಲ್ಲ, ನಟ ಮೋಹನ್ ಬಾಬು ಅವರು ಸಂಜು ರೂಪಿಸಿ ಮಾಡಿದ ಕೊಲೆ ಎಂದು ದೂರುದಾರ ಚಿಟ್ಟಿಮಲ್ಲು ಎನ್ನುವವರು ತೆಲಂಗಾಣದ ಖಮ್ಮಂ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ನಟಿ ಸೌಂದರ್ಯ ಕುಟುಂಬದವರು ಶಂಷಾಬಾದ್‌ನ ಜಲಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿ ಹೊಂದಿದ್ದು, ಅದನ್ನು ತನಗೆ ಮಾರಾಟ ಮಾಡುವಂತೆ ನಟ ಮೋಹನ್ ಬಾಬು ಕೇಳಿದ್ದರು. ಆದರೆ, ಇದಕ್ಕೆ ನಟಿ ಸೌಂದರ್ಯ ಹಾಗೂ ಅವರ ಸಹೋದರ ಅಮರನಾಥ್ ನಿರಾಕರಿಸಿದ್ದರು. ಅವರ ನಡುವೆ ಜಮೀನಿನ ವಿಚಾರವಾಗಿ ಬಿರುಕು ಮೂಡಿದ ಬಳಿಕವೇ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ನಟ ಮೋಹನ್ ಬಾಬು ಸೌಂದರ್ಯ ಅವರ 6 ಎಕರೆ ಜಮೀನನ್ನು ಲಪಟಾಯಿಸಿ ದೊಡ್ಡ ಆದಾಯದ ಮೂಲವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: ಸೌಂದರ್ಯರನ್ನ ಸ್ಟಾರ್ ನಟ ಮೋಹನ್ ಬಾಬು ಕೊಲೆ ಮಾಡ್ಸಿದ್ರಾ?: ಕಂಪ್ಲೇಂಟ್ ಕೊಟ್ಟೋರು ಯಾರು? ಏನಿದು ಹೊಸ ಕತೆ!

ಚಿಟ್ಟಿಮಲ್ಲುಗೂ-ಸೌಂದರ್ಯಗೂ ಏನು ಸಂಬಂಧ:
ಇದೀಗ ನಟಿ ಸೌಂದರ್ಯ ಅವರ ಸಾವಿನ ಬಗ್ಗೆ ಕೊಲೆ ಎಂದು ದೂರು ಕೊಟ್ಟ ಚಿಟ್ಟಿಮಲ್ಲು ಹಾಗೂ ಸೌಂದರ್ಯಗೂ ಏನು ಸಂಬಂಧ ಎಂಬ ಪ್ರಶ್ನೆ ಶುರುವಾಗಿದೆ. ಇವರ ನಡುವೆ ಯಾವುದೇ ಅಧಿಕೃತ ಸಂಬಂಧವಿಲ್ಲ. ಚಿಟ್ಟಿಮಲ್ಲು ಅವರು ಗಾಂಧಿವಾದಿ ಆಗಿದ್ದು, ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಪ್ರಭಾವಿಗಳು ಅಕ್ರಮದಲ್ಲಿ ಭಾಗಿಯಾಗಿದ್ದ ಬಗ್ಗೆ ಮಾಹಿತಿ ತಿಳಿದುಬಂದರೆ ದೂರು ನೀಡಿ ತನಿಖೆ ಮಾಡುವಂತೆ ಆಗ್ರಹ ಮಾಡುತ್ತಾರೆ. ಇದೀಗ ಸೌಂದರ್ಯ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಜನರು ಈ ಚಿಟ್ಟಿಮಲ್ಲುಗೆ ಮನವೊಲಿಸಿ ದೂರು ನೀಡಿಸಿದ್ದಾರೆ. ಇದೀಗ ಚಿಟ್ಟಿಮಲ್ಲು ಅವರು ಸೌಂದರ್ಯ ಅವರ ಕುಟುಂಬಕ್ಕೆ ಸೇರಿದ್ದ 6 ಎಕರೆ ಜಮೀನನ್ನು ನಟ ಮೋಹನ್‌ ಬಾಬು ವಶದಲ್ಲಿದ್ದು, ಅದನ್ನು ಸರ್ಕಾರ ವಾಪಸ್ ಪಡೆದುಕೊಳ್ಳಬೇಕು. ಈ ಜಮೀನನ್ನು ಅನಾಥಾಶ್ರಮ, ಮಿಲಿಟರಿ ಕುಟುಂಬಕ್ಕೆ ವಸತಿಗೃಹ, ಪೊಲೀಸ್ ಪಡೆ ವಸತಿ ಗೃಹ ಅಥವಾ ಮಾಧ್ಯಮ ಸಿಬ್ಬಂದಿಯಂತಹ ಸಂಸ್ಥೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ದೂರಿನಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೀದಿ ರಂಪಾಟ ಮಾಡಿದ ಮೋಹನ್ ಬಾಬು ಕುಟುಂಬ; ಅಸಲಿ ಕಾರಣ ಬಿಚ್ಚಿಟ್ಟ ಪುತ್ರ ವಿಷ್ಣು ಮಂಚು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?