ಕನ್ಯತ್ವ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟ ಹುಡುಗಿಗೆ ಸಿಕ್ಕಿದ ಹಣ ಎಷ್ಟು ನೋಡಿ! ʼಒಂದು ಚರ್ಮದ ತುಣುಕಿಗೆ ಇಷ್ಟೊಂದಾʼ ಅಂದ್ರು ಜನ!

Published : Mar 12, 2025, 01:33 PM ISTUpdated : Mar 12, 2025, 02:22 PM IST
ಕನ್ಯತ್ವ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟ ಹುಡುಗಿಗೆ ಸಿಕ್ಕಿದ ಹಣ ಎಷ್ಟು ನೋಡಿ! ʼಒಂದು ಚರ್ಮದ ತುಣುಕಿಗೆ ಇಷ್ಟೊಂದಾʼ ಅಂದ್ರು ಜನ!

ಸಾರಾಂಶ

ವಿದ್ಯಾರ್ಥಿನಿಯೊಬ್ಬಳು ತನ್ನ ಕನ್ಯತ್ವವನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಿ ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ. ಇದನ್ನು ನೋಡಿ ಆಘಾತಗೊಂಡ ಕೆಲವರು ತುಂಬ ಕ್ರೇಜಿಯಾಗಿ ಕಮೆಂಟ್‌ ಕೂಡ ಮಾಡಿದ್ದಾರೆ.  

ಈ ಲೋಕದಲ್ಲಿ ಇಂಥ ಸೆಕ್ಸ್‌ ಹುಚ್ಚರೂ ಇದ್ದಾರೆ! ಇಂಥ ಪುರುಷರ ಲೈಂಗಿಕ ತೃಷೆಯನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲು ಮುಂದಾದ ಈ ಜಾಣೆ ಖತರ್‌ನಾಕ್‌ ಪ್ಲಾನ್‌ ಮಾಡಿದ್ದಾಳೆ. ಈಕೆ ಬಹಳ ಜಾಣೆ. ಇನ್ನೂ ಮೊದಲ ಬಾರಿಯ ಸೆಕ್ಸ್‌ ಕೂಡ ಮಾಡಿಲ್ಲ, ಆಗಲೇ ತನ್ನ ಕನ್ಯತ್ವವನ್ನು ಹರಾಜಿಗೇ ಇಟ್ಟುಬಿಟ್ಟಿದ್ದಾಳೆ, ಅದೂ ಆನ್‌ಲೈನ್‌ನಲ್ಲಿ. ಅದಕ್ಕೆ ಆಕೆಗೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಕುಬೇರನೊಬ್ಬ ಆಕೆಯ ಕನ್ಯತ್ವವನ್ನು 1.7 ಮಿಲಿಯ ಡಾಲರ್‌ (ಸುಮಾರು 18 ಕೋಟಿ ರೂಪಾಯಿ) ಕೊಟ್ಟು ಖರೀದಿಸಿದ್ದಾನೆ! 

ಈಕೆ ಇನ್ನೂ ವಿದ್ಯಾರ್ಥಿನಿ, 22 ವರ್ಷ. ಮ್ಯಾಂಚೆಸ್ಟರ್‌ನ ಕಾಲೇಜು ವಿದ್ಯಾರ್ಥಿನಿ. ಹೆಸರು ಲಾರಾ- ಬಹುಶಃ ಮರೆಮಾಚಿದ ಹೆಸರು ಇರಬಹುದು. ತನ್ನ ಕನ್ಯತ್ವವನ್ನು ಆನ್‌ಲೈನ್‌ನಲ್ಲಿ ಹರಾಜಿಡುವ ಮೂಲಕ ವಿಶ್ವದಾದ್ಯಂತ ಸುದ್ದಿಯಾದಳು. ಅದೂ ಒಂದು ಎಸ್ಕಾರ್ಟ್ ಏಜೆನ್ಸಿಯ ವೇದಿಕೆಯಲ್ಲಿ. ಎಸ್ಕಾರ್ಟ್‌ ಏಜೆನ್ಸಿ ಎಂದರೆ ವೇಶ್ಯಾವಾಟಿಕೆಗೆ ಸಭ್ಯ ಹೆಸರು ಅಷ್ಟೆ!  ಈ ಹರಾಜಿನಲ್ಲಿ ರಾಜಕಾರಣಿಗಳು, ವ್ಯಾಪಾರ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಆಸಕ್ತಿ ವಹಿಸಿದರು. ಕೊನೆಯಲ್ಲಿ ಈಕೆಯ ಬಿಡ್ ಅನ್ನು ಗೆದ್ದುಕೊಂಡವನು ಒಬ್ಬ ಹಾಲಿವುಡ್ ತಾರೆಯಂತೆ!

ಲಾರಾ ತನ್ನ ವಿವಾದಿತ ನಡೆಯ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ. ಇದು ತನ್ನ ಆರ್ಥಿಕ ಭದ್ರತೆಯ ಕಡೆಗೆ ಪ್ರಾಯೋಗಿಕ ಹೆಜ್ಜೆ ಎಂದಿದ್ದಾಳೆ. ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾಳೆ. “ನನಗೆ ವಿಷಾದವಿಲ್ಲ. ಹೆಚ್ಚಿನ ಎಲ್ಲ ಹುಡುಗಿಯರು ಪ್ರತಿಯಾಗಿ ಏನನ್ನೂ ಪಡೆಯದೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ! ನಾನು ಕನಿಷ್ಠ ಅದರ ಮೂಲಕ ನನ್ನ ಭವಿಷ್ಯವನ್ನು ಸುರಕ್ಷಿತಗೊಳಿಸಿದೆ” ಎನ್ನುತ್ತಾಳೆ. ನಿಜವಲ್ಲವೇ? ಯಾವ ಹುಡುಗಿಯಾದರೂ ಇದುವರೆಗೆ ತನ್ನ ಕನ್ಯತ್ವವನ್ನು ಮೀಸಲಿರಿಸಿ ಮೊದಲ ಹುಡುಗನಿಗೆ ಕೊಟ್ಟದ್ದಕ್ಕಾಗಿ ಆತನಿಂದ ಏನಾದರೂ ವಸೂಲಿ ಮಾಡಿದ್ದಾಳೆಯೇ? ಎಂಥ ಜಾಣೆ! 

ಈ ಹರಾಜು ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದೆ. ಶ್ರೀಮಂತ ವ್ಯಕ್ತಿಗಳು ಬಿಡ್‌ ಹಾಕಲು ಸ್ಪರ್ಧಿಸಿದರು. ಆಸಕ್ತರಲ್ಲಿ ಪ್ರಮುಖ ರಾಜಕಾರಣಿಗಳು ಮತ್ತು ವ್ಯವಹಾರ ದಿಗ್ಗಜರು ಇದ್ದಾರೆ ಎಂದು ಲಾರಾ ದೃಢಪಡಿಸಿದ್ದಾಳೆ. ಹರಾಜು ಅಂತಿಮಗೊಳಿಸಿದ ನಂತರ, ಈಕೆ ಖರೀದಿದಾರರ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ತನ್ನ ಕನ್ಯತ್ವವನ್ನು ದೃಢಪಡಿಸಿದಳು! 

ಹಾಲಿವುಡ್ ನಟನಿಗೆ ತನ್ನ ಕನ್ಯತ್ವವನ್ನು ಮಾರಾಟ ಮಾಡಿದ ನಂತರ ಲಾರಾ ತನ್ನ ವಿವಾದಾತ್ಮಕ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದಳು. ಇದು ಆಕೆಯ ಪಾಲಿಗೆ ಆರ್ಥಿಕವಾಗಿ ಲಾಭ ಪಡೆಯುವ ಅವಕಾಶವಂತೆ. ಇದು ಆಕೆಯ ಜೀವನವನ್ನು ಬದಲಾಯಿಸುವ ಮೊತ್ತ. ಪ್ರಸಿದ್ಧ ನಟನೊಂದಿಗೆ ಸೆಕ್ಸ್‌ನ ಆ ಕ್ಷಣವನ್ನು ಆಕೆ ಈಗ ಹಂಚಿಕೊಳ್ಳಬೇಕಿದೆ. ಎಸ್ಕಾರ್ಟ್ ಏಜೆನ್ಸಿ ʼಸಿಂಡರೆಲ್ಲಾ ಎಸ್ಕಾರ್ಟ್ಸ್‌ʼನೊಂದಿಗೆ ಈಕೆ ಈ ವಿಷಯದಲ್ಲಿ ಸೈನ್ ಅಪ್ ಮಾಡಿದ್ದಾಳೆ. ಇದೊಂದು ಪ್ರಾಯೋಗಿಕ ಮನಸ್ಥಿತಿಯಿಂದಲೂ ಹುಟ್ಟಿಕೊಂಡಿದೆಯಂತೆ. "ನಾನು ಯಾರಿಗೆ ಕನ್ಯತ್ವವನ್ನು ಕಳೆದುಕೊಳ್ಳಲಿದ್ದೇನೋ ಆತ ನನ್ನ ಶಾಶ್ವತ ಸಂಗಾತಿಯಾಗುವ ಸಾಧ್ಯತೆಯೇನೂ ಇಲ್ಲ. ಹೀಗಾಗಿ ಇದು ಜೀವಮಾನದ ಒಪ್ಪಂದವಲ್ಲ. ನಾನು ಈ ವಿಷಯದಲ್ಲಿ ತರ್ಕಬದ್ಧ ವ್ಯಕ್ತಿ. ಭಾವನೆಗಳಿಗೆ ತುತ್ತಾಗುವವಳಲ್ಲ. ನನ್ನ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ. ನನಗೆ ಯಾವುದೇ ವಿಷಾದವಿಲ್ಲ" ಎಂದಿದ್ದಾಳೆ.

ಪಾಕಿಸ್ತಾನದ ಟಾಪ್ 10 ದುಬಾರಿ ನಟಿಯರು, ಸಂಭಾವನೆ ಕೇಳಿದ್ರೆ ಶಾಕ್!

ಕೆಲ ತಿಂಗಳುಗಳ ಹಿಂದೆ ಈ ಸ್ಪರ್ಧಾತ್ಮಕ ಹರಾಜು ನಡೆಯುವ ಮೊದಲು ಸಂಭಾವ್ಯ ಬಿಡ್‌ದಾರರನ್ನು ಭೇಟಿ ಮಾಡಲು ಆಕೆ ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಹಾಜರಾಗಿದ್ದಳು. ಹರಾಜಿನ ನಂತರ  ಜೆಫ್ರಿ ಎಪ್ಸ್ಟೀನ್‌ನ ಖಾಸಗಿ ದ್ವೀಪಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆ ಶ್ರೀಮಂತ ನಟನೊಂದಿಗೆ ರಾತ್ರಿ ಕಳೆದಳು. ನಂತರ ಇದೀಗ ಲಾರಾ ಶುಗರ್ ಬೇಬಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಜಿಸುತ್ತಿದ್ದಾಳೆ. ತನ್ನ ಕಂಪನಿಗಾಗಿ ತಿಂಗಳಿಗೆ 30,000 ಡಾಲರ್‌ ಪಾವತಿಸಲು ಸಿದ್ಧರಿರುವ ಶ್ರೀಮಂತ ದಾನಿ, ಲೈಂಗಿಕ ಆಸಕ್ತರನ್ನು ಹುಡುಕುತ್ತಿದ್ದಾಳೆ. 

ನೆಟಿಜನ್‌ಗಳಂತೂ ಈಕೆಯ ಸುದ್ದಿ ಓದಿ ಕ್ರೇಜಿಯಾಗಿದ್ದಾರೆ.  "ಒಂದು ಚರ್ಮದ ತುಣುಕಿನ ಬೆಲೆ 18 ಕೋಟಿಯಾ?" ಎಂದು ನೆಟಿಜನ್‌ ಒಬ್ಬರು ಉದ್ಗಾರ ತೆಗೆದಿದ್ದಾರೆ. 

ಅಮಿತಾಭ್ ಬಚ್ಚನ್ ಮೊದಲ ಕಿಸ್, ತಮಗಿಂತ 36 ವರ್ಷ ಕಿರಿಯ ನಟಿ ಮೇಲೆ ಲವ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?