ಹಿಂದೂಗಳು ಪಟಾಕಿ ಹಚ್ಚಿದರೆ ಮೂರ್ಖರು, ಈಗ..? ನಟಿ ಸೋನಾಕ್ಷಿ ವಿಡಿಯೋಗೆ ನೆಟ್ಟಿಗರು ಕಿಡಿ ಕಿಡಿ...

By Suchethana D  |  First Published Jan 1, 2025, 6:08 PM IST

ನಟಿ ಸೋನಾಕ್ಷಿ ಸಿನ್ಹಾ ಹೊಸ ವರ್ಷದ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
 


ಮೈಮನ ಎಲ್ಲವನ್ನೂ ರಾಮಮಯವಾಗಿಸಿಕೊಂಡಿರುವ, ರಾಮನ ಭಕ್ತ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ,   ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿ ಸೋನಾಕ್ಷಿ  ಜಹೀರ್ ಇಕ್ಬಾಲ್ ಆಗಿರುವುದು ಹಳೆಯ ಸುದ್ದಿ. ದಂಪತಿ ಈಗ ವಿದೇಶಗಳನ್ನು ಸುತ್ತುತ್ತಾ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ವಿದೇಶದಲ್ಲಿಯೇ ಹೊಸ ವರ್ಷವನ್ನೂ ಸಕತ್​ ಎಂಜಾಯ್​ ಮಾಡಿರುವ ನಟಿ, ಹೊಸ ವರ್ಷಕ್ಕೆ ಶುಭಾಶಯವನ್ನು ಕೋರಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಪಟಾಕಿಯ ಸದ್ದು ಮೊಳಗಿದೆ. ಆ ಪಟಾಕಿಯನ್ನು ನೋಡಿ ಸಂಭ್ರಮಿಸಿರುವ ನಟಿ, ಪತಿಯ ಜೊತೆಯಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ. ನಟಿಯೇನೋ ಶುಭಾಶಯ ಕೋರಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಆಕೆಯನ್ನು ಕಮೆಂಟ್​ನಲ್ಲಿ ಹಾಕಿ ರುಬ್ಬಿದ್ದಾರೆ. ಸೌಮ್ಯಾ ಸನಾತನಿ ಎನ್ನುವ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಇದನ್ನು ಶೇರ್​ ಮಾಡಲಾಗಿದೆ.

ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್​ ಮಾಡಿದ್ದ ನಟಿ, ಇದೆಂಥ ಮೂರ್ಖತನ ಎಂದು ಪ್ರಶ್ನಿಸಿದ್ದರು. ಪಟಾಕಿ ಸಿಡಿಸಿದರೆ ಪರಿಸರಕ್ಕೆ ಎಷ್ಟೊಂದು ಹಾನಿಯುಂಟಾಗುತ್ತದೆ. ನನಗೆ ಪರಿಸರದ ಬಗ್ಗೆ ಕಾಳಜಿ ಇದೆ. ದೀಪಾವಳಿಯ ಹೆಸರಿನಲ್ಲಿ ಪಟಾಕಿ ಸಿಡಿಸುವವರನ್ನು ನಾನು ಕೇಳಬಯಸುತ್ತೇನೆ, ನೀವೇನು ಮೂರ್ಖರಾ ಎಂದು ನಟಿ ಪ್ರಶ್ನಿಸಿದ್ದರು. ಆದರೆ ಅದೇ ನಟಿ ಈಗ ಪತಿ ಜಹೀರ್​ ಇಕ್ಬಾಲ್​ ಜೊತೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವಲ್ಲಿ ಹೋಗಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇದಕ್ಕೆ ತೀಕ್ಷ್ಣವಾಗಿರುವ ಪ್ರತಿಕ್ರಿಯೆಗಳು ಬರುತ್ತಿವೆ. ಮಾಡುವುದೆಲ್ಲಾ ಅನಾಚಾರ, ಮನೆಯ ಮುಂದೆ ಬೃಂದಾವನ ಎನ್ನುವ ಸ್ಥಿತಿ ಈಕೆಯದ್ದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

Tap to resize

Latest Videos

ಆಸ್ಟ್ರೇಲಿಯಾದಲ್ಲಿ ಸೋನಾಕ್ಷಿ- ಜಹೀರ್​ ಹನಿಮೂನ್​ಗೆ ಭಂಗ ತಂದ ಸಿಂಹ! ಶಾಕಿಂಗ್​ ವಿಡಿಯೋ ವೈರಲ್​

ಹಿಂದೂಗಳು ತಮ್ಮ ಹಬ್ಬಕ್ಕೆ ಪಟಾಕಿ ಸಿಡಿಸಿದರೆ ಮಾತ್ರ ಸರ್ಕಾರ ಸೇರಿದಂತೆ ಎಲ್ಲರಿಗೂ ಪರಿಸರದ ನೆನಪಾಗುತ್ತದೆ. ಆದರೆ ಬೇರೆಯವರು ಏನು ಮಾಡಿದರೂ ಅದು ಚೆಂದ. ಹೊಸ ವರ್ಷದ ನೆಪದಲ್ಲಿ ಪಟಾಕಿ ಸಿಡಿಸಿದರೆ  ಪರಿಸರ ಚೆನ್ನಾಗಿ ಇರುತ್ತದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.  ಅಷ್ಟಕ್ಕೂ ನಟಿ ಮದುವೆಯಾದಾಗಿನಿಂದಲೂ ಸದ್ದು ಮಾಡುತ್ತಲೇ ಇದ್ದಾರೆ.  ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಸೋನಾಕ್ಷಿ ಮದುವೆಯ ವಿಷಯವನ್ನು ಕೆದಕುವುದು  ನೆಟ್ಟಿಗರಿಗೆ ಇನ್ನಿಲ್ಲದ ಖುಷಿ ಎನ್ನಿಸುತ್ತಿದೆ.

  
ಅಷ್ಟಕ್ಕೂ ಸೋನಾಕ್ಷಿ ವಿವಾಹವಾದ ಮೇಲೆ ಮತಾಂತರ ಆಗುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇದಾಗಲೇ ಜಹೀರ್‌ ತಂದೆ ಇಕ್ಬಾಲ್ ರತನ್ಸಿ, ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಲಿದೆ ಎಂದಿದ್ದರು.  ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಎಂಬ ವರದಿಯಲ್ಲಿ ಸತ್ಯವಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯ ಎಂದಿದ್ದರು.  ಅವಳು ಮತಾಂತರಗೊಳ್ಳುತ್ತಿಲ್ಲ. ಇದು ನಿಶ್ಚಿತ. ಅವರಿಬ್ಬರದ್ದೂ  ಹೃದಯಗಳು ಒಂದಾಗಿವೆ. ಇದರ ನಡುವೆ  ಧರ್ಮವು ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಸೋನಾಕ್ಷಿ ಮತಾಂತರವಾಗುವುದಿಲ್ಲ.  ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಅವರು ಹೇಳಿದ್ದರು. 

ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್​ ಮಾತು

click me!