ನ್ಯಾಚುರಲ್‌ ಸ್ಟಾರ್‌ ನಾನಿ 'ಹಿಟ್ 3' ಚಿತ್ರೀಕರಣದ ವೇಳೆ ದುರಂತ: ಸಹಾಯಕ ಛಾಯಾಗ್ರಾಹಕಿ ನಿಧನ

By Gowthami K  |  First Published Jan 1, 2025, 1:39 PM IST

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ 'ಹಿಟ್ 3' ಚಿತ್ರೀಕರಣದ ವೇಳೆ ಸಹಾಯಕ ಛಾಯಾಗ್ರಾಹಕಿ ಕೆ.ಆರ್. ಕೃಷ್ಣ (30) ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿತ್ರತಂಡ ಕಾಶ್ಮೀರದಲ್ಲಿದ್ದಾಗ ಎದೆ ಸೋಂಕಿನಿಂದ ಬಳಲುತ್ತಿದ್ದ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ 'ಹಿಟ್ 3' ಚಿತ್ರೀಕರಣದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೆ.ಆರ್. ಕೃಷ್ಣ ಅವರು ಚಿತ್ರತಂಡದ ಪ್ರಮುಖ ಸದಸ್ಯರಾಗಿದ್ದರು. ದಕ್ಷಿಣ ಭಾರತದ ನ್ಯಾಚುರಲ್‌ ಸ್ಟಾರ್‌ ನಾನಿ ಅಭಿನಯದ 'ಹಿಟ್ 3' ಸಿನಿಮಾದ ಶೂಟಿಂಗ್‌ ವೇಳೆ ಅವಘಡ ಸಂಭವಿಸಿದೆ. ಸಹಾಯಕ ಛಾಯಾಗ್ರಾಹಕಿಯಾಗಿದ್ದ ಕೆ.ಆರ್. ಕೃಷ್ಣ (30) ಹೃದಯಾಘಾತದಿಂದ ನಿಧನರಾಗಿದ್ದಾರೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ 'ಹಿಟ್ 3' ಚಿತ್ರೀಕರಣದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಟಾಲಿವುಡ್ ನಟ ನಾನಿ ಅವರ ಮುಂಬರುವ ಥ್ರಿಲ್ಲರ್ ಹಿಟ್ 3ಗಾಗಿ ಚಿತ್ರತಂಡ  ಕೆಲವು ದಿನಗಳ ಹಿಂದೆ ಕಾಶ್ಮೀರಕ್ಕೆ ಹೋಗಿತ್ತು. ಡಿಸೆಂಬರ್ 23 ರಂದು ಅಸ್ವಸ್ಥರಾದ ಕೃಷ್ಣ ಅವರನ್ನು ಶ್ರೀನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದೆ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕೃಷ್ಣ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬಸ್ಥರಿಗೆ ತಿಳಿಸಲಾಗಿತ್ತು.  ಆದರೆ ಸೋಮವಾರ ಹೃದಯಾಘಾತದಿಂದ ನಿಧನರಾದರು.  ಇದೀಗ ಕೃಷ್ಣ ಕೆಆರ್ ಎಂಬ ಯುವ ಮಹಿಳಾ ಸಹಾಯಕ ಛಾಯಾಗ್ರಾಹಕಿಯನ್ನು ಕಳೆದುಕೊಂಡಿರುವುದು ಇಡೀ ತಂಡ ಮಾತ್ರವಲ್ಲ ಚಿತ್ರರಂಗವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ.

Tap to resize

Latest Videos

ನಟ ದಿಲೀಪ್ ಶಂಕರ್ ನಿಗೂಢ ಸಾವು, ಪೋಸ್ಟ್‌ಮಾರ್ಟಮ್ ನಿಂದ ಬಯಲಾಯ್ತು ಸಾವಿಗೆ ಕಾರಣ

ಕೃಷ್ಣ ಕೆಆರ್ ಅವರು ಚಿತ್ರದ ಛಾಯಾಗ್ರಹಣ ನಿರ್ದೇಶಕ ಸಾನು ಜಾನ್ ವರುಗೀಸ್ ಅವರ ಸಹಾಯಕರಾಗಿ ಹಿಟ್ 3 ನಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಅವರರನ್ನು ಸೋಮವಾರ ಬೆಳಗ್ಗೆ  ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸುವ ಕೆಲವೇ ಗಂಟೆಗಳ ಮೊದಲು ಅವರು ಹೃದಯ ಸ್ತಂಭನದಿಂದ ನಿಧನರಾದರು. ಕೃಷ್ಣ ಅವರ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರು ಕೇರಳದ ಪೆರುಂಬವೂರ್‌ನಲ್ಲಿ ನೆರವೇರಿಸಲಾಗುವುದು. ಘಟನೆಗೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಕೃಷ್ಣನ ಕುರಿತು ಪೋಸ್ಟ್ ಹಾಕಿ ಶೃದ್ಧಾಂಜಲಿ ಅರ್ಪಿಸಿದೆ ಮತ್ತು ಕೃಷ್ಣಳ ಸಾವನ್ನು ಖಚಿತಪಡಿಸಿದೆ. "ಇಂದು ಬೆಳಿಗ್ಗೆ ನಮ್ಮ ಆತ್ಮೀಯ ಸದಸ್ಯರಾದ ಶ್ರೀಮತಿ ಕೃಷ್ಣ ಕೆಆರ್ ಅವರ ಅಕಾಲಿಕ ನಿಧನದ ಬಗ್ಗೆ ನಾವು ನಿಮಗೆ ತೀವ್ರ ದುಃಖದಿಂದ ತಿಳಿಸುತ್ತೇವೆ. ಅವರು ಕಾಶ್ಮೀರದಲ್ಲಿ ಚಿತ್ರೀಕರಣದಲ್ಲಿದ್ದಾಗ ಎದೆಯ ಸೋಂಕಿನಿಂದ ಹೃದಯ ಸ್ತಂಭನದಿಂದ ನಿಧನರಾದರು. ಕೃಷ್ಣ ಅವರು ಸಿನಿಮಾಟೋಗ್ರಾಫರ್ ಮತ್ತು ಡಬ್ಲ್ಯೂಸಿಸಿಯ ಸಕ್ರಿಯ ಸದಸ್ಯೆ, ಆಕೆಯ ಪ್ರತಿಭೆ, ಉತ್ಸಾಹ ಮತ್ತು ಸಾಮೂಹಿಕ ಮತ್ತು ಚಲನಚಿತ್ರಕ್ಕೆ ಅವರ ಕೊಡುಗೆಗಳಿಗಾಗಿ ಅಚಲವಾದ ಉತ್ಸಾಹವನ್ನು ಮೆಚ್ಚಿದರು ಭ್ರಾತೃತ್ವವನ್ನು ಯಾವಾಗಲೂ ಆಳವಾದ ಗೌರವ ಮತ್ತು ಮೆಚ್ಚುಗೆಯೊಂದಿಗೆ ನೆನಪಿಸಿಕೊಳ್ಳಲಾಗುತ್ತದೆ" ಎಂದು ಬರೆಯಲಾಗಿದೆ.

ಅಲ್ಲು ಅರ್ಜುನ್ ಮಾತ್ರವಲ್ಲ ತಂದೆ ಅಲ್ಲು ಅರವಿಂದ್ ಕೂಡ ಥೀಯೇಟರ್‌ ಘಟನೆಯಲ್ಲಿ ಜೈಲಿಗೆ ಹೋಗಿದ್ದರು!

ಟಾಲಿವುಡ್‌ನಲ್ಲಿ ಹಿಟ್ ಫ್ರಾಂಚೈಸ್ ಅತ್ಯಂತ ಯಶಸ್ವಿಯಾಗಿದೆ. ಹಿಟ್ ಮತ್ತು ಹಿಟ್ 2 ಸೂಪರ್‌ಹಿಟ್‌ಗಳೆಂದು ಸಾಬೀತಾಯಿತು ಮತ್ತು ಈಗ ಹಿಟ್ 3 ಚಿತ್ರದ ಚಿತ್ರೀಕರಣ ವೇಗದಿಂದ ನಡೆಯುತ್ತಿದೆ. ಈ ಚಿತ್ರದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ನಟಿಸಿದ್ದು, ಸೈಲೇಶ್ ಕೋಲನು ನಿರ್ದೇಶನ ಮಾಡಿದ್ದಾರೆ. ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.  ಚಿತ್ರದಲ್ಲಿ ವಿಜಯ್ ಸೇತುಪತಿ, ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ, ಅಡಿವಿ ಶೇಶ್, ನಿವೇತಾ ಥಾಮಸ್ ಮತ್ತು ಆದಿಲ್ ಪಾಲಾ ಕೂಡ  ಬಣ್ಣ ಹಚ್ಚಿದ್ದಾರೆ.

click me!