
ದೃಶ್ಯಂ ನಟಿ ಶ್ರಿಯಾ ಶರಣ್ (Drishyam actress Shriya Saran) ಸುದ್ದಿಯಲ್ಲಿದ್ದಾರೆ. ಮಾಧ್ಯಮಗಳ ಮುಂದೆ, ಹತ್ತಾರು ಕ್ಯಾಮರಾ ಮುಂದೆ ಶ್ರಿಯಾ ಶರಣ್ ಲಿಪ್ ಲಾಕ್ (lip lock) ಮಾಡಿದ್ದಾರೆ. ಅಂಬಾನಿ ಕಾರ್ಯಕ್ರಮದಲ್ಲಿ ಶ್ರಿಯಾ ಶರಣ್ ಪತಿ ಮೇಲೆ ಪ್ರೀತಿ ಸುರಿಮಳೆ ಗೈದಿದ್ದಾರೆ. ರಷ್ಯಾ ಪತಿ ಆಂಡ್ರೇ ಕೊಸ್ಚೀವ್ (Russian husband Andrey Koschev) ಜೊತೆ ಲಿಪ್ ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಬುಧವಾರ ಮುಂಬೈನ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ (NMACC) ದಿ ಫ್ಯಾಂಟಮ್ ಆಫ್ ದಿ ಒಪೇರಾದ ಭವ್ಯ ಪ್ರದರ್ಶನವನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳ ದಂಡೇ ಬಂದಿತ್ತು. ಅವರ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಈ ಕಾರ್ಯಕ್ರಮದಲ್ಲಿ ಶ್ರಿಯಾ ಶರಣ್ ಮತ್ತು ಪತಿ ಆಂಡ್ರೇ ಕೊಸ್ಚೀವ್ ಕೂಡ ಪಾಲ್ಗೊಂಡಿದ್ದರು. ಮೊದಲು ಕ್ಯಾಮರಾ ಮುಂದೆ ಫೋಸ್ ನೀಡಿದ ಶ್ರಿಯಾಗೆ ನಂತ್ರ ಪತಿ ಆಂಡ್ರೇ ಕೊಸ್ಚೀವ್ ಸಾಥ್ ನೀಡಿದ್ರು. ಫೋಟೋಕ್ಕೆ ಫೋಸ್ ನೀಡಿದ ಜೋಡಿ ನಂತ್ರ ರೋಮ್ಯಂಟಿಕ್ ಆಗಿದೆ. ಪತಿಗೆ ಲಿಪ್ ಲಾಕ್ ಮಾಡಿದ ಶ್ರಿಯಾ ನಾಚಿ ನೀರಾಗಿದ್ದಾರೆ. ಇಬ್ಬರೂ ಹೆಗಲ ಮೇಲೆ ಕೈ ಹಾಕಿಕೊಂಡು ಮುಂದೆ ಸಾಗಿದ್ದಾರೆ.
'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್ ನೋಡ್ಲೇ ಇಲ್ಲ- ಡಬ್ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್
ಶ್ರಿಯಾ ಶರಣ್ ಮಾಧ್ಯಮಗಳ ಮುಂದೆ ತನ್ನ ಪತಿಗೆ ಲಿಪ್ ಲಾಕ್ ಮಾಡಿದ್ದು ಇದೇ ಮೊದಲಲ್ಲ. ಅನೇಕ ಬಾರಿ ಇವ್ರ ವಿಡಿಯೋ ವೈರಲ್ ಆಗಿದೆ. ರಷ್ಯನ್ ಪತಿ ಕ್ಯಾಮೆರಾ ಮುಂದೆ ಬಂದಾಗಲೆಲ್ಲಾ, ಶ್ರಿಯಾ ಲಿಪ್ ಲಾಕ್ ಮಾಡುತ್ತಾರೆ. ನಂತ್ರ ಅವ್ರ ಫೋಟೋ ವೈರಲ್ ಆಗುತ್ವೆ. ಇದು ದಂಪತಿಯ ನೆಚ್ಚಿನ ಫೋಸ್ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅನೇಕರು ಶ್ರಿಯಾರನ್ನು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಜೋಡಿಯನ್ನು ಇಷ್ಟಪಟ್ಟಿದ್ದಾರೆ.
ಕಾರ್ಯಕ್ರಮಕ್ಕೆ ಶ್ರಿಯಾ ಶರಣ್ ಕಪ್ಪು ಬಣ್ಣದ ಬ್ಯಾಕ್‌ಲೆಸ್ ಟೈಟ್ ಲಾಂಗ್ ಗೌನ್ ಧರಿಸಿ ಬಂದಿದ್ದರು. ಈ ಡ್ರೆಸ್ನಲ್ಲಿ ಶ್ರಿಯಾ ಹಾಟ್ ಆಗಿ ಕಾಣಿಸ್ತಿದ್ರು. ಶ್ರಿಯಾ ಶರಣ್ ಸ್ಟೈಲ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿ ಶ್ರಿಯಾ, ರಷ್ಯಾದ ಗೆಳೆಯ ಆಂಡ್ರೇ ಕೊಸ್ಚೀವ್ ಅವರನ್ನು ಮಾರ್ಚ್ 12, 2018 ರಂದು ರಹಸ್ಯವಾಗಿ ಮದುವೆಯಾಗಿದ್ದಾರೆ. ದೀರ್ಘಕಾಲದವರೆಗೆ ಮದುವೆಯನ್ನು ಅವರು ಸಿಕ್ರೇಟ್ ಆಗಿ ಇಟ್ಟಿದ್ದರು. ಅಭಿಮಾನಿಗಳ ಮುಂದೆ ಪ್ರೆಗ್ನೆನ್ಸಿ ವಿಷ್ಯವನ್ನು ಘೋಷಣೆ ಮಾಡಿದಾಗ ಫ್ಯಾನ್ಸ್ ಆಘಾತಕ್ಕೆ ಒಳಗಾಗಿದ್ದರು. ಶ್ರಿಯಾಗೆ ಯಾವಾಗ ಮದುವೆಯಾಗಿದೆ ಅಂತ ಪ್ರಶ್ನೆ ಕೇಳಿದ್ದರು. ಶ್ರಿಯಾ ಶರಣ್ಗೆ ಮುದ್ದಾದ ಮಗುವಿದೆ. ಅದಕ್ಕೆ ರಾಧಾ ಅಂತ ನಾಮಕರಣ ಮಡಲಾಗಿದೆ. ಶಿವಾಜಿ, ದಿ ಬಾಸ್, ಅರ್ಜುನ್, ಸಂತೋಷಮ್, ದೃಶ್ಯಂ, ದೃಶ್ಯಂ 2 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶ್ರಿಯಾ ನಟಿಸಿದ್ದಾರೆ.
ನನ್ನ ಜಗತ್ತು ಬದಲಾಯಿಸಿದ ಸುಂದರಿ ನೀನು; ಆನಿವರ್ಸರಿ ಪ್ರಯುಕ್ತ ಪತ್ನಿಗೆ ಪತ್ರ ಬರೆದ
ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡುವ ಶ್ರಿಯಾ, ಅನೇಕ ಹಾಟ್ ಫೋಟೋ ಶೂಟ್ಗಳಲ್ಲಿ ಮಿಂಚಿದ್ದಾರೆ. 42 ನೇ ವಯಸ್ಸಿನ ಶ್ರಿಯಾ, ಆರೋಗ್ಯಕ್ಕೂ ಹೆಚ್ಚು ಮಹತ್ವ ನೀಡ್ತಾರೆ. ಪರಿಪೂರ್ಣವಾಗಿ ಬದುಕೋದು ಅವರ ಗುರಿ. ನೃತ್ಯ, ಪ್ರವಾಸ, ಒಳ್ಳೆಯ ಪುಸ್ತಕ, ವಿಶ್ರಾಂತಿ ಸೇರಿದಂತೆ ಜೀವನದ ಪ್ರತಿಯೊಂದು ವಿಷ್ಯಕ್ಕೂ ಹೆಚ್ಚು ಮಹತ್ವ ನೀಡೋದಾಗಿ ಶ್ರಿಯಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಈ ಹಿಂದೆ ಹೇಳಿದ್ದರು. ಬಿಡುವಿಲ್ಲದ ಸಮಯದಲ್ಲೂ ನನಗಾಗಿ ಸಮಯ ಮೀಸಲಿಡುತ್ತೇನೆ. ಸಂಜೆ ಒಂದು ಕಪ್ ಚಹಾ ಹೀರುವುದು ಅಥವಾ ಸೂರ್ಯಾಸ್ತವನ್ನು ನೋಡುವುದು. ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವುದು ನನ್ನ ಗುರಿ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.