ಶೆರ್ಲಿನ್‌ ಚೋಪ್ರಾ ವಿಶೇಷ ರೀತಿಯಲ್ಲಿ ಈದ್‌ ಆಚರಣೆ! ಡ್ರೆಸ್‌ ಮೇಲೆ ಬಿತ್ತು ಅಭಿಮಾನಿಗಳ ಕಣ್ಣು...!

Published : Apr 12, 2024, 09:02 PM IST
ಶೆರ್ಲಿನ್‌ ಚೋಪ್ರಾ ವಿಶೇಷ ರೀತಿಯಲ್ಲಿ ಈದ್‌ ಆಚರಣೆ! ಡ್ರೆಸ್‌ ಮೇಲೆ ಬಿತ್ತು ಅಭಿಮಾನಿಗಳ ಕಣ್ಣು...!

ಸಾರಾಂಶ

ಶೆರ್ಲಿನ್‌ ಚೋಪ್ರಾ ವಿಶೇಷ ರೀತಿಯಲ್ಲಿ ಈದ್‌ ಆಚರಣೆ! ಡ್ರೆಸ್‌ ಮೇಲೆ ಬಿತ್ತು ಅಭಿಮಾನಿಗಳ ಕಣ್ಣು...! ಅಷ್ಟಕ್ಕೂ ಅಂಥದ್ದೇನಿದೆ ಡ್ರೆಸ್​ನಲ್ಲಿ?    

ಶೆರ್ಲಿನ್‌ ಚೋಪ್ರಾ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಅರೆಬರೆ ಡ್ರೆಸ್‌ನ ಹಾಟ್‌ ಸುಂದರಿ. ಇಡೀ ದೇಹ ಬಳಕುವ ಬಳ್ಳಿಯಂತಿದ್ದರೂ ಎದೆಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಿನಿಮಾದಲ್ಲಿ ಬಹಳ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿಯೀಕೆ. ಅಷ್ಟೆಲ್ಲಾ ಲಕ್ಷ ರೂಪಾಯಿ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ, ಅದರ ಧಾರಾಳ ಪ್ರದರ್ಶನ ಮಾಡದಿದ್ದರೆ ಹೇಗೆ ಎನ್ನುವ ಮಾತನ್ನು ನಟಿ ನಂಬಿರುವಂತೆ ಕಾಣಿಸುತ್ತಿದೆ, ಅದಕ್ಕಾಗಿಯೇ ಶೆರ್ಲಿನ್‌ ಚೋಪ್ರಾರನ್ನು ಫುಲ್‌ ಡ್ರೆಸ್‌ನಲ್ಲಿ ನೋಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಈಕೆಯ ಡ್ರೆಸ್‌ ಇರುತ್ತದೆ.  ತಮ್ಮ ಅಂಗಾಂಗ ಪ್ರದರ್ಶನಗಳಿಂದಲೇ ಭಾರಿ ಸುದ್ದಿಯಲ್ಲಿರುವ ನಟಿ ಈಕೆ.  

ಅಷ್ಟಕ್ಕೂ,  ಇತ್ತೀಚಿನ ದಿನಗಳಲ್ಲಿ ಈ ರೀತಿಯ ದೇಹ ಪ್ರದರ್ಶನ ಮಾಮೂಲಾಗಿಬಿಟ್ಟಿದೆ. ಎದೆಯ ಪ್ರದರ್ಶನ ಮಾಡಿದರಷ್ಟೇ  ಸಿನಿಮಾದಲ್ಲಿ ತಮಗೆ ಉಳಿಗಾಲ ಎಂದು ಹೆಚ್ಚಿನ ನಟಿಯರು ಅಂದುಕೊಂಡಂತಿದೆ. ಇದಕ್ಕಾಗಿಯೇ ತೆಳ್ಳಗೆ, ಬೆಳ್ಳಗೆ ಇರಲು ಸಾಕಷ್ಟು ಡಯಟ್​ ಪಾಲನೆ, ಯೋಗ, ಜಿಮ್​, ವ್ಯಾಯಾಮಗಳ ಮೊರೆ ಹೋಗುವ ನಟಿಯರು ಎದೆ ಭಾಗವನ್ನು ದೊಡ್ಡದಾಗಿ ತೋರಿಸಿಕೊಳ್ಳಲು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಇವರ ಪೈಕಿ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಕೂಡ ಒಬ್ಬರು.  ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿಯರ ಪೈಕಿ ಇವರು ಕೂಡ ಒಬ್ಬರು.  ಆಗಾಗ ಅರೆಬರೆ ದೇಹದ ಪ್ರದರ್ಶನ ಮಾಡುವುದರ ಜೊತೆಗೆ ಶಾಕಿಂಗ್‌ ಹೇಳಿಕೆ ಕೊಡುವ ಮೂಲಕವೂ ಈಕೆ ಸುದ್ದಿಯಲ್ಲಿ ಇರುತ್ತಾರೆ.  

ಕಿಡಿ ಕಾರೋದ್ರಲ್ಲಿ ಅತ್ತೆ ಜಯಾಗೆ ತಕ್ಕ ಸೊಸೆಯಾದ ಐಶ್​! ಅಷ್ಟಕ್ಕೂ ಇಬ್ಬರ ಸಿಟ್ಟು ಯಾರ ವಿರುದ್ಧ?

ಆದರೆ ಇದೀಗ ಕುತೂಹಲ ಎಂಬಂತೆ ನಟಿ ಎಲ್ಲರ ಕಣ್ಣು ಕುಕ್ಕಿದ್ದಾರೆ. ಇದಕ್ಕೆ ಕಾರಣ, ಶೆರ್ಲಿನ್‌ ಈದ್‌ ಆಚರಿಸಿದ ಪರಿ. ಈದ್‌ ನಿಮಿತ್ತ ಶೆರ್ಲಿನ್‌ ಅವರು ಚಿಕ್ಕ ಚಿಕ್ಕ ಮಕ್ಕಳಿಗೆ ಆಹಾರ ನೀಡುವ ಮೂಲಕ ಶ್ಲಾಘನಾರ್ಹ ಕಾರ್ಯ ಮಾಡಿದ್ದಾರೆ. ಇದಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೂ, ಬಹಳ ಮಂದಿ ಈ ಕೆಲಸವನ್ನು ಬಿಟ್ಟು ಶೆರ್ಲಿನ್‌ ಬಟ್ಟೆಯತ್ತ ಗಮನ ಹರಿಸಿದ್ದಾರೆ. ಇದಕ್ಕೆ ಕಾರಣ, ಶೆರ್ಲಿನ್‌ ಚೋಪ್ರಾ ಅಪರೂಪದಲ್ಲಿ ಅಪರೂಪ ಎಂಬಂತೆ ಫುಲ್‌ ಡ್ರೆಸ್‌ ಧರಿಸಿದ್ದಾರೆ. ಕೊನೆಗೂ ನಿಮ್ಮನ್ನು ಈ ಅವತಾರದಲ್ಲಿ ನೋಡುವ ಅವಕಾಶ ಸಿಕ್ಕಿತಲ್ಲ, ಜನ್ಮ ಸಾರ್ಥಕವಾಯ್ತು ಅಂತ ನಟಿಯ ಕಾಲೆಳೆಯುತ್ತಿದ್ದಾರೆ ಟ್ರೋಲಿಗರು. 

ಅಂದಹಾಗೆ, ಶೆರ್ಲಿನ್‌ ಕೆಲ ತಿಂಗಳ ಹಿಂದೆ ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು.   'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದಾದ ಬಳಿಕ,  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.

Wedding Anniversary: ಅಲ್ಲಿ ಸಿಡುಕು ಮೋರೆ, ಇಲ್ಲಿ ಕೂಲ್​ ಗಂಡ: ಭಾಗ್ಯಲಕ್ಷ್ಮಿ ತಾಂಡವ್​ ಇಂಟರೆಸ್ಟಿಂಗ್​ ಮಾಹಿತಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!